22ರ ಯುವಕನ ಜೊತೆ 6ನೇ ಮದುವೆಯಾದ 38ರ ಆಂಟಿ..!

22ವರ್ಷದ ಹುಡುಗನ ಜೊತೆ 38 ವರ್ಷದ ಆಂಟಿ 6ನೇ ಮದುವೆಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.38ರ ಮಹಿಳೆ 6ನೇ ಮದುವೆಯಾಗಿರೋ ಹುಡುಗನ ವಯಸ್ಸು 22ವರ್ಷ, ಈಕೆ ಈ ಮೊದಲು ಐದು ಜನರ ಜೊತೆ ಲವ್ವಿಡವ್ವಿ ಇಟ್ಟುಕೊಂಡು ಮದುವೆಯಾಗಿದ್ದು, ಇದೀಗ ಆರನೇ ಮದುವೆಯಾಗಿದ್ದಾಳೆ. ಈಕೆಗೆ ಎರಡು ಮಕ್ಕಳಿದ್ದಾರೆ. ಇನ್ನು ಈಕೆಯನ್ನು ವಿವಾಹವಾದ 22ರ ಯುವಕ ನಂಗೆ ಇವಳೇ ಬೇಕು .ನಾನು ಇವಳ ಜೊತೆಯೇ ಇರುತ್ತೇನೆ ಎಂದಿದ್ದಾನೆ. ಇನ್ನು ಐದು ಮದುವೆಯಾಗಿರೋ ವಿಷಯವನ್ನು ಹೇಳಿರೋ ಈಕೆ ಆರನೇ ಮದುವೆಯಾಗಿರೋನ ಜೊತೆ ಇದು ಕೊನೆ ಮದುವೆ ನಾವಿಬ್ರೂ ಚೆನ್ನಾಗಿ ಇರುತ್ತೇವೆ ಎಂದು ಪ್ರಾಮಿಸ್ ಮಾಡಿದ್ದಾಳೆ ಮಹಿಳೆ.

ಇನ್ನು ಯುವಕ ನಾನು ಈಕೆಯನ್ನು ಬಿಡೋದಿಲ್ಲ, ಒಂದು ತಿಂಗಳಿಂದ ಲವ್ ಮಾಡುತ್ತಿದ್ದೇವೆ.ನಾನೇ ಈಕೆಯನ್ನ ಇಷ್ಟ ಪಟ್ಟು ಮದ್ವೆ ಆದೆ. ಈಕೆಗೆ ಬಾಳು ಕೊಡ್ತಿನಿ ಎಂದಿರುವ ಚಂದ್ರು ಎಂಬ ಯುವಕನಿಗೆ ಪೊಷಕರು ಯಾರು ಇಲ್ಲ, ಈತನನ್ನು ಅಕ್ಕ ಸಾಕಿದ್ದು. ಅವಳಿಗೆ 5 ಮದುವೆಯಾಗಿದೆ,ಇಬ್ಬರು ಮಕ್ಕಳಿದ್ದಾರೆ, ನಿನಗಿಂತ ದೊಡ್ಡವಳು ಎಂದು ಅಕ್ಕ ಬುದ್ಧಿವಾದ ಹೇಳಿದ್ರು,ನನಗೆ ಆಕೆಯೇ ಬೇಕು ಎಂದು ಲವರ್‍ಬಾಯ್ ಚಂದ್ರು ಹೇಳಿದ್ದಾನೆ.

ಐದು ಜನರ ಜೊತೆ ಮದುವೆ ಮುರಿದುಕೊಂಡು ಬಂದಿರೋ ಈ ಮಹಿಳೆ ಇನ್ನು ಮುಂದೆ ಗಂಡಸರ ಸಹವಾಸ ಬೇಡ ಎಂದು ಇದ್ರು, 22ರ ಚಂದ್ರು ಮಾತ್ರ ನನಗೆ ಆಕೆಯೇ ಬೇಕು ಎಂದು 38ರ ಆಂಟಿಯ ಕೈ ಹಿಡಿದಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top