2021ರ ಟಿ 20 ವಿಶ್ವಕಪ್‌ ಗೆಲ್ಲಲು ಟೀಂ ಇಂಡಿಯಾಗೆ ಬೇಕು ಈ ತ್ರಿಮೂರ್ತಿಗಳು

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಟಿ 20 ಸರಣಿಯನ್ನು ಗೆಲ್ಲುವ ಮೂಲಕ ಮುಂಬರುವ ಟಿ 20 ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಅಂತಾನೇ ಕರೆಸಿಕೊಳ್ಳುತ್ತಿದೆ. ಸ್ವಂತ ನೆಲದಲ್ಲೇ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯು ಮೂಲಕ ಸರಣಿ ಗೆಲುವು ಸಾಧಿಸಿರೋ ಟೀಂ ಇಂಡಿಯಾ 2021ರ ವಿಶ್ವಕಪ್‌ ಗೆಲ್ಲುವ ಸಲುವಾಗಿ ಇದೀಗ ಈ ತ್ರಿಮೂರ್ತಿಗಳ ಮೇಲೆ ಕಣ್ಣಿಟ್ಟಿದೆ . ಹಾಗಾದ್ರೆ ಆ ತ್ರಿಮೂರ್ತಿಗಳು ಯಾರು ಅನ್ನೋದನ್ನ ನಾವ್‌ ಇವತ್ತು ನೋಡೋಣ. ಈಗಾಗಲೇ ಬಿಸಿಸಿಐ 2021ರ ಟಿ 20 ವಿಶ್ವಕಪ್‌ಗೆ ಬಲಿಷ್ಠ ತಂಡವನನ್ನು ಕಟ್ಟುವ ನಿಟ್ಟಿನಲ್ಲಿ ಸಕಲ ತಯಾರಿಯನ್ನು ನಡೆಸುತ್ತಿದ್ದು, ಇದೀಗ ಬಿಸಿಸಿಐ ಕೂಡ ಈ ಮೂವರ ಮೇಲೆ ಹೆಚ್ಚು ಕಣ್ಣಿಟ್ಟಿದೆ. ಹೌದು ಐಪಿಎಲ್‌ನಲ್ಲಿ ಕಮಾಲ್‌ ಮಾಡುವ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಮೂಲಕ ಗಮನ ಸೆಳೆದ ಟಿ ನಟರಾಜನ್‌, ಡೆತ್‌ ಓವರ್‌ ಸ್ಪೆಷಲಿಸ್ಟ್‌ ಬುಮ್ರಾ, ಸ್ವಿಂಗ್‌ ಮಾಸ್ಟ್‌ ಭುವನೇಶ್ವರ್‌ ಕುಮಾರ್‌ ಮೇಲೆ ಇದೀಗ ಬಿಸಿಸಿಐ ಕಣ್ಣಿಟ್ಟಿದ್ದು ಈ ಮೂವರು ಟಿ 20 ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸಿಲಿದ್ದಾರೆ ಅಂತಾನೇ ಹೇಳಲಾಗುತ್ತಿದೆ. ಈಗಾಗಲೇ ಕೊಟ್ಟ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಟಿ 20 ಸರಣಿ ಗೆಲುವನ್ನು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದ ನಟರಾಜನ್‌ ಬೌಲಿಂಗ್‌ ಪ್ರದರ್ಶನದ ಬಗ್ಗೆ ಕ್ರಿಕೆಟ್‌ ಪಂಡಿತರು ಮನಸೋತಿದ್ದು, ಇತ್ತ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಕೂಡ ನಟರಾಜನ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ನಟರಾಜನ್‌ ಇದೇ ರೀತಿ ಸ್ಥಿರ ಪ್ರದರ್ಶನ ನೀಡಿದರೆ ಮುಂದಿನ ದಿನಗಳಲ್ಲಿ ಅನುಕೂಲ ಆಗಲಿದೆ ಅಂತಾನೂ ಹೇಳಿದ್ರು.ಇನ್ನು ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ತಂಡದ ಪ್ರಮುಖ ಬೌಲರ್‌ಗಳು ದುಬಾರಿಯಾದ್ರು, ನಟರಾಜನ್‌ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದು, ಈ ಮೂವರು ಕಾಂಭಿನೇಷನ್‌ನಲ್ಲಿ ತಂಡ ವಿಶ್ವಕಪ್‌ಗೆ ಇಳಿದೆ ವರ್ಕೌಟ್‌ ಆಗಲಿದೆ ಅಂತ ಕ್ರಿಕೆಟ್‌ ಪಂಡಿತರು ಹೇಳುತ್ತಿದ್ದಾರೆ.

2021ರ ಟಿ 20 ಟೂರ್ನಿ ನಡೀತಾ ಇರೋದು ಕೂಡ ಭಾರತದಲ್ಲಾಗಿದ್ದು, ಇದು ಟೀಂ ಇಂಡಿಯಾದ ಬೌಲರ್‌ಗಳಿಗೆ ಅನುಕೂಲ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಹೀಗಾಗಿ ಬಿಸಿಸಿಐ ಈಗಿನಿಂದಲೇ ಈ ಮೂವರು ಬೌಲರ್‌ಗಳ ಫಿಟ್‌ನೆಸ್‌ ವಿಚಾರದಲ್ಲಿ ಗಮನವನ್ನು ಹರಿಸಬೇಕು, ಐಪಿಎಲ್‌ ವೇಳೆಯಲ್ಲಿ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರನಡೆದಿದ್ದ ಭುವನೇಶ್ವರ್‌ ಕುಮಾರ್‌ ಚೇತರಿಸಿಕೊಂಡು ಫಿಟ್‌ನೆಟ್‌ ಕಂಡುಕೊಳ್ಳಬೇಕಿದೆ. ಇನ್ನು ಟಿ 20 ವಿಶ್ವಕಪ್‌ಗೂ ಮುನ್ನ ಒಂದಿಷ್ಟು ಪಂದ್ಯಗಳಿಂದ ಬುಮ್ರಾ ಅವರಿಗೆ ವಿಶ್ವಾಂತಿ ನೀಡುವ ಅಗತ್ಯ ಕೂಡ ಇದೆ. ಈ ಮೂಲಕ ವಿಶ್ವಕಪ್‌ ಟೂರ್ನಿಗೆ ಇಬ್ಬರು ಅನುಭವಿ ಬೌಲರ್‌ ಜೊತೆಯಲ್ಲಿ ಯಾರ್ಕರ್‌ ಸ್ಪೆಷಲಿಸ್ಟ್‌ ನಟರಾಜನ್‌ ಅವರ ಪ್ರಯೋಗದಿಂದ ತ್ರಿಮೂರ್ತಿಗಳು ವಿಶ್ವಕಪ್‌ನಲ್ಲಿ ಕಮಾಲ್‌ ಮಾಡಲಿದ್ದಾರೆ ಅನ್ನೋದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರ.

ಈ ವಿಚಾರವಾಗಿ ನಿಮ್ಮ ಅಭಿಪ್ರಾಯವೇನು ಈ ಮೂವರು ಬೌಲರ್‌ಗಳು 2021ರ ಟಿ 20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರಮುಖ ಬೌಲರ್‌ಗಳಾಗಿ ತಂಡದ ಗೆಲುವಿಗೆ ಕಾರಣವಾಗ್ತಾರ ನೀವ್‌ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top