
ಐಪಿಎಲ್ ಶುರುವಿಗೂ ಮೊದಲೇ ಆರ್ಸಿಬಿ ತಂಡಕ್ಕೆ ಬಿಗ್ ಶಾಗ್ ಉಂಟಾಗಿದೆ. ಹೌದು ಐಪಿಎಲ್ 2021ಕ್ಕೆ ಈಗಾಗಲೇ ಆರ್ಸಿಬಿ ಭರ್ಜರಿ ತಯಾರಿ ನಡೆಸುತ್ತಿದ್ದು, ಪ್ರಮುಖ ಆಟಗಾರರನ್ನು ಮಿನಿ ಆಕ್ಷನ್ನಲ್ಲಿ ಖರೀದಿ ಮಾಡುವ ಮೂಲಕ ತಂಡವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಪ್ಲಾನ್ನಲ್ಲಿ ಇದೆ. ಹೀಗಿರುವಾಗಲೇ ವೇಗದ ಬೌಲರ್ ಆರ್ಸಿಬಿ ತಂಡಕ್ಕೆ ಶಾಕ್ ನೀಡಿದ್ದಾರೆ. ಐಪಿಎಲ್ 2020ಯಲ್ಲಿ ಆರ್ಸಿಬಿ ಪರ ಕೆಲವು ಪಂದ್ಯಗಳನ್ನು ಆಡಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ 2021ರ ಐಪಿಎಲ್ನಲ್ಲಿ ಆಡುವುದಿಲ್ಲ ಅಂತ ಹೇಳಿದ್ದಾರೆ.ಟ್ವೀಟ್ ಮಾಡುವ ಮೂಲಕ ಸ್ಟೇನ್ ಈ ವಿಚಾರವನ್ನು ಹೇಳಿದ್ದು, ಈ ಬಾರಿಯ ಐಪಿಎಲ್ನಲ್ಲಿ ನಾನು ಆರ್ಸಿಬಿ ಪರವಾಗಿ ಆಡುವುದಿಲ್ಲ, ಹಾಗೆಯೇ ಉಳಿದ ಯಾವ ತಂಡದಲ್ಲಿಯೂ ನಾನು ಆಡುವುದಿಲ್ಲ ಸ್ವಲ್ಪ ವಿಶ್ರಾಂತಿ ಪಡೆಯಬೇಕು ಎಂದು ಇದ್ದೇನೆ ಅಂತ ಹೇಳಿದ್ದು, ಅವಕಾಶ ನೀಡಿದಕ್ಕಾಗಿ ಆರ್ಸಿಬಿಗೆ ಧನ್ಯವಾದಗಳನ್ನು ಸಹ ಹೇಳಿದ್ದಾರೆ. ಐಪಿಎಲ್ ಶುರುವಿಗೂ ಮುಂಚೆಗೆ ಇದೀಗ ಆರ್ಸಿಬಿ ಕೊಂಚ ಮಟ್ಟದ ಶಾಕ್ ಆಗಿದ್ದು, ಒಂದಿಷ್ಟು ಜನ ಸ್ಟೇನ್ ಇಲ್ಲದಿದ್ದರೆ ತಂಡಕ್ಕೆ ಯಾವುದೇ ನಷ್ಟ ಇಲ್ಲ ಅನ್ನೋ ಮಾತುಗಳನ್ನು ಹೇಳುತ್ತಿದ್ದಾರೆ.
ಮಿಸ್ಟರ್ ಐಪಿಎಲ್ ಅಂತಾನೇ ಖ್ಯಾತಿಯಾಗಿರೋ ಸುರೇಶ್ ರೈನಾ 2020ರ ಐಪಿಎಲ್ನಿಂದ ಹೊರಬಂದಿದ್ದು ಯಾಕೆ ಅನ್ನೋದರ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಕುಟುಂಬದಲ್ಲಿ ಸಂಭವಿಸಿದ ಒಂದು ದುರ್ಘಟನೆಯಿಂದಾಗಿ ಇಡೀ ಕುಟುಂಬ ನನ್ನನ್ನ ಎದುರು ನೋಡುತ್ತಿತ್ತು.ಕುಟುಂಬಕ್ಕಾಗಿ ನಾನು ಅಂತದ್ದೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು. 20 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದ ನನಗೆ ಮತ್ತೆ ಕ್ರಿಕೆಟ್ ಆಡುವ ಭರವಸೆಯಿತ್ತು.ಆದ್ದರಿಂದ ನನ್ನ ಕುಟುಂಬಕ್ಕೆ ಆ ಸಮಯವನ್ನ ನಾನು ಕೊಡಲು ನಿರ್ಧರಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಐಪಿಎಲ್ ವೇಳೆಯಲ್ಲಿ ಸುರೇಶ್ ರೈನಾ ಮಾವನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರಿಂದಾಗಿ ಮಾವ ತೀರಿಕೊಂಡ ಹಿನ್ನೆಲೆ ಸುರೇಶ್ ರೈನಾ ಐಪಿಎಲ್ ಟೂರ್ನಿಯಿಂದ ಹಿಂತಿರುಗಿದ್ದರು.
ಟೀಂ ಇಂಡಿಯಾ ಟೆಸ್ಟ್ನಲ್ಲಿ ಕನ್ನಡಿಗರ ಪರಿಸ್ಥಿತಿ ಬಗ್ಗೆ ಇದೀಗ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಹಾಸ್ಯದ ರೂಪದಲ್ಲಿ ಬಣ್ಣಿಸಿದ್ದಾರೆ. ಟೆಸ್ಟ್ನಲ್ಲಿ ಒಂದು ಕಡೆ ಕೊಟ್ಟ ಅವಕಾಶವನ್ನು ಮಯಾಂಕ್ ಕೈಚೆಲ್ಲಿ ಕುಳಿತಿದ್ದರೆ ಇತ್ತ ರಾಹುಲ್ಗೆ ಅವಕಾಶ ಲಭ್ಯವಾಗುತ್ತಿಲ್ಲ ಹೀಗಾಗಿ ಸದ್ಯ ಕನ್ನಡಿಗರಿಗೆ ಟೀಂ ಇಂಡಿಯಾದಲ್ಲಿ ಇರೋ ಪರಿಸ್ಥಿತಿಯನ್ನು ದೊಡ್ಡ ಗಣೇಶ್ ಹಾಸ್ಯವಾಗಿ ಬಣ್ಣಿಸಿದ್ದು ಸದ್ಯ ರಾಹುಲ್ ಮತ್ತು ಮಾಯಾಂಕ್ ಸಿಲ್ಕ್ ಬೋರ್ಡ್ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದಾರೆ.ಹೀಗಾಗಿ ಸಿಡ್ನಿ ಪಂದ್ಯದ ಬಸ್ ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ ಅಂತ ಹಾಸ್ಯದ ಮೂಲಕ ವಿವರಿಸಿದ್ದಾರೆ ದೊಡ್ಡ ಗಣೇಶ್.
ನಿಮ್ಮ ಪ್ರಕಾರ ಮೂರನೇ ಟೆಸ್ಟ್ ಪಂದ್ಯದಲ್ಲಿ ಮಾಯಂಕ್ ಮತ್ತು ರಾಹುಲ್ ಸ್ಥಾನ ಪಡೆಯಲಿದ್ದಾರಾ, ಐಪಿಎಲ್ನಿಂದ ಡೇಲ್ ಸ್ಟೇನ್ ದೂರಸರಿದಿದ್ದು ಆರ್ಸಿಬಿ ತಂಡಕ್ಕೆ ನಷ್ಟವಾಗಲಿದ್ಯ ಕಾಮೆಂಟ್ ಮಾಡಿತಿಳಿಸಿ.