2021ರ ಐಪಿಎಲ್‌ನಲ್ಲಿ ಮತ್ತೆ ಕಮಾಲ್‌ ಮಾಡಲು ಬರ್ತಿದ್ದಾರೆ ಹಳೇ ಹುಲಿಗಳು

ಐಪಿಎಲ್‌ 2021ಕ್ಕೆ ಈಗಾಗಲೇ ಕುತೂಹಲ ಹೆಚ್ಚಾಗಿದ್ದು, ಇನ್ನು ಐಪಿಎಲ್‌ ಹಬ್ಬ ನಡೆಯಲು ಇನ್ನು ಆರು ತಿಂಗಳು ಬಾಕಿ ಉಳಿದಿದೆ, ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ತಯಾರಿಯಲ್ಲಿ ತೊಡಗಿದ್ದು, ಈ ಬಾರಿ ಮೆಗಾ ಆಕ್ಷನ್‌ ಇರೋದ್ರಿಂದಾಗಿ ಇನ್ನಷ್ಟು ಕುತೂಹಲ ಹೆಚ್ಚಾಗಿದ್ರೆ, ಈ ಬಾರಿಯ ಐಪಿಎಲ್‌ನಲ್ಲಿ ಹೊಸ ತಂಡಗಳ ಸೇರ್ಪಡೆಯಿಂದಾಗಿ ಮನೋರಂನೆಯು ಸಹ ಹೆಚ್ಚಾಗೇ ಇರಲಿದೆ, ಇದೀಗ ಐಪಿಎಲ್‌ನಲ್ಲಿ ಕಮಾಲ್‌ ಮಾಡಿ ತಮ್ಮ ಹೆಸರನ್ನು ಒತ್ತಿ ಹೋಗಿರೋ ಆಟಗಾರರು ಮತ್ತೆ ಮುಂದಿನ ಐಪಿಎಲ್‌ನಲ್ಲಿ ಘರ್ಜಿಸೋದಕ್ಕೆ ರೆಡಿಯಾಗುತ್ತಿದ್ದಾರೆ, ಹಾಗಾದ್ರೆ ಯಾವ ಯಾವ ಹಳೇ ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದನ್ನು ನಾವ್‌ ಇವತ್ತು ನೋಡೋಣ.

ಮುಂದಿನ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿರೋ ಪ್ರಮುಖ ಆಟಗಾರ ಅಂದ್ರೆ ಅದು ಸೌತ್‌ ಆಫ್ರಿಕಾ ತಂಡದ ಆಶಿಮ್‌ ಆಮ್ಲಾ ಪಂಜಾಬ್‌ ತಂಡದ ಪರ ಎರಡು ಸೀಸನ್‌ ಆಡಿರೋ ಆಮ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದು, ಇದೀಗ ಐಪಿಎಲ್‌ನಲ್ಲಿ ಕಾರ್ಯ ನಿರ್ವಹಿಸಲು ಉತ್ಸುಕರಾಗಿದ್ದಾರೆ, ಪಂಜಾಬ್‌ ತಂಡದ ಟ್ಯಾಲೆಂಟ್‌ ಹಂಟರ್‌ ಆಗಿ ಕಾರ್ಯ ನಿರ್ವಹಿಸಲಿದ್ದು, ಜೊತೆ ಬ್ಯಾಟಿಂಗ್‌ ಸಲಹೆಗಾರನಾಗಿಯೂ ಪಂಜಾಬ್‌ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಆಸ್ಟ್ರೇಲಿಯಾದ ವೇಗದ ಬೌಲರ್‌ ಜೇಮ್‌ ಫಾಲ್ಕನರ್‌ ಐಪಿಎಲ್‌ನಲ್ಲಿ ರಾಜಸ್ತಾನ್‌ ರಾಯಲ್ಸ್‌ ಪರ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ರು, ಇದೀಗ ಫಾಲ್ಕನರ್‌ ರಾಜಸ್ತಾನ್‌ ರಾಯಲ್ಸ್‌ ತಂಡವನ್ನು ಸೇರಿಕೊಂಡಿದ್ದು, ಮುಂದಿನ ಐಪಿಎಲ್‌ನಲ್ಲಿ ರಾಜಸ್ತಾನ್‌ ರಾಯಲ್ಸ್‌ ತಂಡ ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಮಿಚೆಲ್‌ ಜಾನ್ಸನ್‌ ಮುಂಬೈ ತಂಡದ ಪ್ರಮುಖ ವೇಗದ ಬೌಲರ್‌ ಆಗಿದ್ದ ಜಾನ್ಸನ್‌ ಮುಂದಿನ ಐಪಿಎಲ್‌ನಲ್ಲಿ ಮತ್ತೆ ಮುಂಬೈ ತಂಡವನ್ನು ಸೇರಿಕೊಳ್ತಾ ಇದ್ದಾರೆ, ಆದ್ರೆ ಈ ಬಾರಿ ಅವರು ಆಟಗಾರನಾಗಿ ಸೇರಿಕೊಳ್ಳುತ್ತಿಲ್ಲ ಬದಲಿ ಬೌಲಿಂಗ್‌ ಕೋಚ್‌ ಆಗಿ ತಂಡವನ್ನು ಸೇರಿಕೊಳ್ತಿದ್ದಾರೆ.

ಇನ್ನು ಕ್ರಿಕೆಟ್‌ನಿಂದ 7 ವರ್ಷ ನಿಷೇಧಕ್ಕೆ ಒಳಗಾಗಿದ್ದ ವೇಗಿ ಶ್ರೀಶಾಂತ್‌ ಕೂಡ ಕ್ರಿಕೆಟ್‌ಗೆ ಮರಳಿದ್ದು, ಮುಂದಿನ ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಮುಂದಿನ ಐಪಿಎಲ್‌ನಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಆಡಲು ಅವಕಾಶ ಸಿಕ್ಕರೆ ಯಾವುದಾದರು ತಂಡ ಸೇರಿಕೊಳ್ಳುವ ತವಕದಲ್ಲೂ ಇದ್ದಾರೆ, ಇನ್ನು ಮುಂದಿನ ಐಪಿಎಲ್‌ನಲ್ಲಿ ಹೊಸ ತಂಡಗಳು ಸೇರ್ಪಡೆಯಾಗಲಿದೆ ಅನ್ನೋ ಮಾತುಗಳಿದ್ದು, ಅದರಲ್ಲೂ ಕೇರಳದಿಂದ ಒಂದು ತಂಡ ಬರಲಿದೆ ಅನ್ನೋ ಮಾತುಗಳು ಸಹ ಇದೆ.ಇನ್ನು ಆ ತಂಡವನ್ನು ಮೋಹನ್‌ ಲಾಲ್‌ ಖರೀದಿಸುತ್ತಾರೆ ಅನ್ನೋ ಮಾತುಗಳಿದ್ದು, ಹಾಗೇನಾದ್ರು ಆದಲ್ಲಿ ಶ್ರೀಶಾಂತ್‌ ಕೇರಳ ತಂಡದ ಪರ ಐಪಿಎಲ್‌ನಲ್ಲಿ ಆಡಲಿದ್ದಾರೆ, ಇನ್ನು ತಂಡಲ್ಲಿ ಶ್ರೀಶಾಂತ್‌ಗೆ ಉನ್ನತ ಸ್ಥಾನ ಸಿಗಲಿದೆ ಅನ್ನೋ ಮಾತುಗಳು ಸಹ ಇದೆ.

ಲಿಂಡನ್‌ ಸಿಮನ್ಸ್‌ ಮುಂಬೈ ಇಂಡಿಯನ್ಸ್‌ ತಂಡದ ಪರವಾಗಿ ಆಡುತ್ತಿದ್ದ ಇವರು ಇಂಜುರಿಯಿಂದ ಎರಡು ಸೀಸನ್‌ ನಲ್ಲಿ ಬಿಡ್‌ಗೆ ಭಾಗವಹಿಸಿರಲಿಲ್ಲ, ಇದೀಗ ಐಪಿಎಲ್‌ನಲ್ಲಿ ಆಡಲು ಸಿದ್ಧರಾಗಿದ್ದರು,ಇದೀಗ ತಂಡಗಳ ಜೊತೆ ಮಾತುಕತೆ ನಡೆಸಿದೆ.

ಡ್ವೇನ್‌ ಸ್ಮಿತ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಓಪನರ್‌ ಬ್ಯಾಟ್ಸಮನ್‌ ಆಗಿ ಇಳಿಯುತ್ತಿದ್ದ ಇವರು, ಸಿಎಸ್‌ಗೆ ಚಾಂಪಿಯನ್ಸ್‌ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು, ಇದೀಗ ಇವರು ಕೂಡ ಮುಂದಿನ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಆದ್ರೆ ಇವರು ಮುಂದಿನ ಐಪಿಎಲ್‌ನಲ್ಲಿ ಆಟಗಾರನಾಗಿ ಕಾಣಿಸಿಕೊಳ್ತಾ ಇಲ್ಲ ಬದಲಿಗೆ ಸಿಎಸ್‌ಕೆ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ಇವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರೋ ಇವರು ಇದೀಗ ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಕೋಚ್‌ ಆಗಿ ಕಾಣಿಸಿಕೊಳ್ಳಲು ಇಚ್ಚಿಸಿದ್ದಾರೆ, ಈಗಾಗಲೇ ಧೋನಿ ಕೂಡ ಡ್ವೇನ್‌ ಸ್ಮಿತ್‌ ಅವರ ಹೆಸರನ್ನು ಸೂಚಿಸಿದ್ದಾರೆ.

ಕೊನೆಯದಾಗಿ ಮೊರ್ನೆ ಮಾರ್ಕೆಲ್‌ ಕೆಕೆಆರ್‌ ಪರ ಆಡಿ ಹಲವು ಸೀಸನ್‌ನಲ್ಲಿ ಟಾಪ್‌ ಬೌಲರ್‌ ಆಗಿದ್ದ ಈ ವೇಗಿ ಇದೀಗ ಕೆಕೆಆರ್‌ ತಂಡದ ಟ್ಯಾಲೆಂಟ್‌ ಹಂಟರ್‌ ಆಗಿ ಮುಂದಿನ ಐಪಿಎಲ್‌ಗೆ ಕಾರ್ಯನಿರ್ವಹಿಸಲಿದ್ದಾರೆ. ವಿದೇಶಿ ಟ್ಯಾಲೆಂಟ್‌ ಆಟಗಾರರನ್ನು ಗುರುತಿಸಿ ಕೆಕೆಆರ್‌ ತಂಡಕ್ಕೆ ಸೇರಿಸಿಕೊಳ್ಳು ಕೆಲಸವನ್ನು ಮಾರ್ಕೆಲ್‌ ಮಾಡಲಿದ್ದಾರೆ.

ಇದು ಮುಂದಿನ ಐಪಿಎಲ್‌ನಲ್ಲಿ ಮತ್ತೆ ಕಾಮಾಲ್‌ ಮಾಡಲು ಹೊರಟಿರೋ ಐಪಿಎಲ್‌ನ ಹಳೇ ಹುಲಿಗಳು ನಿಮ್ಮ ಪ್ರಕಾರ ಮುಂದಿನ ಐಪಿಎಲ್‌ನಲ್ಲಿ ಯಾವ ಹಳೇ ಹುಲಿ ಕಣದಲ್ಲಿ ಕಾಣಿಸಿಕೊಳ್ಳ ಬೇಕು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top