2021ರ ಐಪಿಎಲ್‌ಗೆ ಸೇರಿಕೊಳ್ಳಲಿದೆ ಹೊಸ ಎರಡು ತಂಡಗಳು

ಐಪಿಎಲ್‌ 2020 ಟೂರ್ನಿಯನ್ನು ಕೊರೋನಾದ ಆತಂಕದ ನಡುವೆಯೂ ಬಿಸಿಸಿಐ ಯುಎಇಯಲ್ಲಿ ಯಶಸ್ವಿಯಾಗಿ ನಡೆಸಿ ಮುಗಿಸಿದ್ದು, ಇದೀಗ ಬಿಸಿಸಿಐ 2021ರ ಐಪಿಎಲ್‌ ಟೂರ್ನಿಗೆ ತಯಾರಿಯನ್ನು ನಡೆಸುತ್ತಿದೆ. ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಕೂಡ ಪ್ರತಿ ವರ್ಷ ನಡೆಯುವಂತೆ ಏಪ್ರಿಲ್‌ನಲ್ಲಿ ಐಪಿಎಲ್‌ ಟೂರ್ನಿಯನ್ನು ನಡೆಸಲು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ ಅನ್ನೋ ಮಾತುಗಳನ್ನು ಸಹ ಆಡಿದ್ರು, ಇದೀಗ ಮುಂದಿನ ಐಪಿಎಲ್‌ನಲ್ಲಿ ಯಾವ ತಂಡದಲ್ಲಿ ಯಾವ ಆಟಗಾರರು ಇರ್ತಾರೆ..ಪ್ರಾಂಚೈಸಿಗಳು ಯಾವ ಆಟಗಾರರನ್ನು ತಂಡದಿಂದ ಬಿಟ್ಟು, ಹೊಸ ಆಟಗಾರರನ್ನು ಸೇರಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲ ಕ್ರಿಕೆಟ್‌ ಪ್ರಿಯರಲ್ಲಿ ಮನೆಮಾಡಿದೆ. ಇದೀಗ ಐಪಿಎಲ್‌ ಕಡೆಯಿಂದ ಹೊಸದೊಂದು ಸುದ್ದಿ ಕೂಡ ಹೊರ ಬರುತ್ತಿದೆ. ಹೌದು ಮುಂದಿನ ಐಪಿಎಲ್‌ 8 ತಂಡಗಳ ಬದಲಿಗೆ ಇನ್ನು ಎರಡು ಹೊಸ ತಂಡಗಳ ಸೇರ್ಪಡೆ ಮಾಡುವ ಲಕ್ಷಣಗಳು ಕಾಣ್ತಾ ಇದೆ, ಹೀಗಾಗಿ ಈ ಬಾರಿ ಮೆಗಾ ಹರಾಜಿಗೆ ಬಿಸಿಸಿಐ ಒಲವು ತೋರುತಿದೆ ಅಂತ ಹೇಳಲಾಗುತ್ತಿದೆ. ಒಂದು ವೇಳೆ ಐಪಿಎಲ್‌ನಲ್ಲಿ 2 ತಂಡಗಳ ಸೇರ್ಪಡೆಯಾದ್ರೆ ಗುಜರಾತ್‌ ಮೂಲದ ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಗ್ರೂಪ್‌ ಅಹಮದಾಬಾದ್‌ ಫ್ರಾಂಚೈಸಿ ಕೊಂಡುಕೊಳ್ಳುವ ಆಸಕ್ತಿ ವಹಿಸಿದೆ ಅಂತ ಹೇಳಲಾಗುತ್ತಿದ್ದು, ಆ ಮೂಲಕ ಮುಂದಿನ ಐಪಿಎಲ್‌ನಲ್ಲಿ ಗುಜರಾತ್‌ ತಂಡ ಕೂಡ ಹೊಸದಾಗಿ ಸೇರಿಕೊಳ್ಳಲಿದೆ ಅನ್ನೋ ಸುದ್ದಿ ಇದೀಗ ಹೊರ ಬಿದ್ದಿದ್ದು, ವಿಶ್ವದಲ್ಲಿ ಎರಡನೇ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಅನ್ನೊ ಹೆಸರು ಪಡೆದಿರೋ ಗುಜರಾತ್‌ನ ಸರ್ದಾರ್‌ ವಲ್ಲಾಭಾಯ್‌ ಸ್ಟೇಡಿಯಂ ಅಹಮದಾಬಾದ್‌ ತಂಡದ ತವರು ಸ್ಟೇಡಿಯಂ ಆಗಲಿದೆ.

ಸದ್ಯ ಬಿಸಿಸಿಐ ಮುಂದಿನ ಐಪಿಎಲ್‌ ನಡೆಸೋ ವಿಚಾರವಾಗಿ ಮಾತ್ರ ಮಾಹಿತಿ ನೀಡಿದ್ದು, ಹರಾಜಿನ ಬಗ್ಗೆ ಯಾವುದೇ ಮಾಹಿತಿ ಇನ್ನು ಸಹ ನೀಡಿಲ್ಲ, ಕೊರೋನಾದಿಂದಾಗಿ ಆರ್ಥಿಕವಾಗಿ ಪೆಟ್ಟು ತಿಂದಿರುವ ಹಿನ್ನಲೆಯಲ್ಲಿ ಬಿಸಿಸಿಐ ಹಣಕಾಸಿನ ಸ್ಥಿತಿಯನ್ನು ಸುಧಾರಿಸುವ ಹಿನ್ನೆಲೆಯಲ್ಲಿ ಮೆಗಾ ಹರಾಜಿಗೆ ಒಲವು ತೋರುವ ಮೂಲಕ ಎರಡು ಹೊಸ ತಂಡಗಳನ್ನು ಸೇರಿಸಿಕೊಳ್ಳುವ ಯೋಜನೆಯಲ್ಲಿದೆ ಅಂತಾನೂ ಹೇಳಲಾಗುತ್ತಿದೆ. ಇನ್ನು ಗುಜರಾತ್‌ ತಂಡದ ಜೊತೆಯಲ್ಲಿ ಕೊಚ್ಚಿ ಟಸ್ಕರ್‌ ತಂಡ ಕೂಡ ಮತ್ತೆ ಐಪಿಎಲ್‌ನಲ್ಲಿ ತಂಡವಾಗಿ ಸೇರಿಕೊಳ್ಳೋ ಲಕ್ಷಣಗಳಿವೆ, ಈ ಹಿಂದೆ 2010ರಲ್ಲಿ ಐಪಿಎಲ್‌ ಟೂರ್ನಿ ಆಡಿದ್ದ ಕೊಚ್ಚಿ ಟಸ್ಕರ್‌ ನಂತರ ತಂಡದ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೊಚ್ಚಿ ತಂಡವನ್ನು ಬಿಸಿಸಿಐ ಐಪಿಎಲ್‌ನಿಂದ ಹೊರಗುಳಿಸಿತ್ತು, ಇನ್ನು ಕೊಚ್ಚಿ ಕೂಡ ಈ ವಿಚಾರವಾಗಿ ಕೋರ್ಟ್‌ ಮೊರೆಹೋಗಿತ್ತು, ಇದೀಗ ಕೋರ್ಟ್‌ನಲ್ಲಿ ತಮ್ಮ ಪರ ಜಯ ಸಾಧಿಸಿರೋ ಕೊಚ್ಚಿ ಮುಂದಿನ ಐಪಿಎಲ್‌ನಲ್ಲಿ ತಮ್ಮ ತಂಡವನ್ನು ಮರಳಿ ಆಡಿಸಲಿದೆ ಅನ್ನೋ ಸುದ್ದಿ ಕೂಡ ಇದೆ, ಹೀಗಾಗಿ 2021ರ ಐಪಿಎಲ್‌ನಲ್ಲಿ ಕೊಚ್ಚಿ ರೀ ಎಂಟ್ರಿ ಕೊಡುವ ಜೊತೆಯಲ್ಲಿ ಅಹಮದಬಾದ್‌ ತಂಡ ಕೂಡ ಹೊಸ ತಂಡವಾಗಿ ಐಪಿಎಲ್‌ನಲ್ಲಿ 9 ಮತ್ತು 10 ನೇ ತಂಡವಾಗಿ ಟೂರ್ನಿಯಲ್ಲಿ ಪಾಲ್ಗೊಳಲಿದೆ ಅಂತ ಹೇಳಲಾಗುತ್ತಿದೆ.

ಇನ್ನು ಈ ಎರಡು ತಂಡದಲ್ಲಿ ಪ್ರಮುಖವಾಗಿ ಯಾವ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲವಿದ್ದು, ಅಹಮದಬಾದ್‌ ತಂಡದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಈ ಬಾರಿಯ ಐಪಿಎಲ್‌ನಲ್ಲಿ ಹೊರ ಬಂದಿದ್ದ ಸುರೇಶ್‌ ರೈನಾ ಗುಜರಾತ್‌ ತಂಡವನ್ನು ಮುನ್ನೆಡಸಲಿದ್ದಾರೆ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದ್ದು, ಇನ್ನು ಕೊಚ್ಚಿ ತಂಡ ಐಪಿಎಲ್‌ನಲ್ಲಿ ರೀ ಎಂಟ್ರಿ ಕೊಟ್ಟರೆ, ನಿಷೇಧದಿಂದ ಮುಕ್ತಿ ಹೊಂದಿರೋ ಶ್ರೀಶಾಂತ್‌ ಕೊಚ್ಚಿ ಟಸ್ಕರ್‌ ತಂಡದ ಪ್ರಮುಖ ಆಟಗಾರರನಾಗಿ ಕಾಣಿಸಿಕೊಳ್ಳಲಿದ್ದಾರೆ ಅಂತ ಹೇಳಲಾಗುತ್ತಿದ್ದು, 2010ರಲ್ಲಿ ಶ್ರೀಶಾಂತ್‌ ಕೊಚ್ಚಿ ತಂಡದ ಪರವಾಗಿ ಕಣಕ್ಕೆ ಇಳಿದಿದ್ರು.

ಒಟ್ಟಿನಲ್ಲಿ 2021ರ ಐಪಿಎಲ್‌ನಲ್ಲಿ ಒಂದು ಹೊಸ ತಂಡ ಮತ್ತು ಇನ್ನೊಂದು ತಂಡ ರೀ ಎಂಟ್ರಿ ಕೊಡುವ ಮೂಲಕ ಕ್ರಿಕೆಟ್‌ ಪ್ರಿಯರಿಗೆ ಮತ್ತಷ್ಟು ಮನೋರಂಜನೆ ಕೊಡಲು ತಯಾರಿಯನ್ನು ನಡೆಸಿಕೊಳ್ಳಲಿದೆ.

ಹಾಗಾದ್ರೆ ಮುಂದಿನ ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳ ಎಂಟ್ರಿಯ ಬಗ್ಗೆ ನಿಮ್ಮ ಅನಿಸಿಕೆ ಏನು. ಮಗಾ ಹರಾಜು ಪ್ರಕ್ರಿಯೆಯನ್ನು ಬಿಸಿಸಿಐ ಮಾಡಬೇಕ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top