2021ರಲ್ಲಿ ಎಲೆಕ್ಷನ್‍ಗೆ ನಿಲ್ತಿದ್ದಾರೆ ಸಿಂಗಂ ಅಣ್ಣಾಮಲೈ.

ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಖಡಕ್ ಅಧಿಕಾರಿ ಎನಿಸಿಕೊಂಡವರು ಅಣ್ಣಾಮಲೈ ತಮ್ಮ ಖಡಕ್ ನಿರ್ಧಾರಗಳಿಂದಲೇಸಿಂಗಂ’ ಎಂಬ ಬಿರುದು ಪಡೆದಿದ್ದ ಅಣ್ಣಾಮಲೈ. ಕರ್ನಾಟಕದ ಜನತೆ ಮಟ್ಟಿಗೆ ಒಬ್ಬ ರೋಲ್ ಮಾಡೆಲ್ ಅಂತಾನೇ ಹೇಳ ಬಹುದು. ಇನ್ನು 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ರಾಜ್ಯ ತಮಿಳುನಾಡಿಗೆ ಹೋದ ಅಣ್ಣಾಮಲೈ, ತಮ್ಮ ಊರಿನಲ್ಲೇ ಇದ್ದು, ಒಂದಿಷ್ಟು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ತಮ್ಮ ಊರಿನಲ್ಲೇ ಕೆಲಸ ಮಾಡಿಕೊಂಡಿರುವ ಅಣ್ಣಾಮಲೈ 2021ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರಂತೆ.
ಹೌದು ಇತ್ತಿಚೆಗೆ ತಾವು ಫೇಸ್‍ಬುಕ್‍ನಲ್ಲಿ ಲೈವ್‍ನಲ್ಲಿ ಮಾತನಾಡಿದ ಅಣ್ಣಾಮಲೈ, ನಾನು 2021ರಲ್ಲಿ ವಿಧಾನ ಸಭೆಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಇದರ ಜೊತೆಯಲ್ಲಿಯೇ 10 ವರ್ಷಗಳ ಕಾಲ ಕರ್ನಾಟಕದಲ್ಲಿ ಸೇವೆಸಲ್ಲಿಸಿದ್ದೇನೆ, ಈಗ ಕರ್ನಾಟಕವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಲ್ಲಿನ ಜನರು ನನಗೆ ಬಹಳ ಪ್ರೀತಿ ಕೊಟ್ಟಿದ್ದಾರೆ. ನಾನು ಅದಕ್ಕೆ ಸದಾ ಋಣಿಯಾಗಿರುತ್ತೇನೆ. ಸದ್ಯ ನಮ್ಮ ಊರಿನಲ್ಲಿ ಕೆಲಸ ಮಾಡಿ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ. ರಾಜಕೀಯ ವ್ಯವಸ್ಥೆ ಸರಿಪಡಿಸಬೇಕಿದೆ ಅದಕ್ಕಾಗಿ ಶ್ರಮ ಪಡುತ್ತೇನೆ ಅಂತ ಹೇಳಿದ್ದಾರೆ. ಇನ್ನು ಇದೇ ವೇಳೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಧೈರ್ಯದ ಜೊತೆಯಲ್ಲಿ ತಾಳ್ಮೆಯೂ ಇರಬೇಕು. ಅನುತ್ತೀರ್ಣರಾದರೆ ಭಯಪಡಬಾರದು. ಬೇರೆ ಬೇರೆ ಉದ್ಯಮಗಳಲ್ಲಿ ಸಾಧನೆ ಮಾಡುವ ವಿಶಾಲ ಯೋಚನೆ ಮಾಡಬೇಕು. ಎಲ್ಲಾ ಕ್ಷೇತ್ರದಲ್ಲೂ ಬಹಳ ಅವಕಾಶವಿದೆ ಅದನ್ನು ಬಳಸಿಕೊಳ್ಳ ಬೇಕು ಎಂದು ಯುವ ಪೀಳಿಗೆಗೆ ಕಿವಿ ಮಾತು ಹೇಳಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top