2020ಯಲ್ಲಿ ಗೇಲ್ ರೆಕಾರ್ಡ್ ಯಾರಿಗೂ‌‌‌ ಮುರಿಯೋಕೆ ಆಗೋಲ್ಲ.

ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅಂದ್ರೆ ಕ್ರಿಕೆಟ್ ನಲ್ಲಿ ಹೊಡಿಬಡಿಗೆ ಹೆಸರುವಾಸಿ,ಅದರಲ್ಲೂ ಟಿ20 ಪಂದ್ಯಕ್ಕಂತೂ ಕ್ರಿಸ್ ಗೇಲ್ ಹೇಳಿಮಾಡಿಸಿದ ಆಟಗಾರ,ಯಾವುದೇ ಬಾಲ್ ಇರಲಿ,ಯಾವುದೇ ಬೌಲರ್ ಇರಲಿ,ಬಾಲ್ ಅನ್ನು ಬೌಡರಿ ಸಿಕ್ಸರ್ ಗೆ ಕಳುಹಿಸದೇ ಬಿಡೋದಿಲ್ಲ ಈ‌ ಮನುಷ್ಯ, ಕ್ರಿಸ್ ಗೇಲ್ ಯಾವ ಟೀಂ ನಲ್ಲಿ ಇರಲಿ ಆ ಟೀಂಯಿಂದ‌ ಎಂಟರ್ ಟೈನ್ಮೆಂಟ್ ಮಾತ್ರ ಗ್ಯಾರಂಟಿ,ಇನ್ನು ಐಪಿಎಲ್ ನಲ್ಲಿ ಗೇಲ್ ಯಾವುದೇ ತಂಎದಲ್ಲಿ ಇದ್ರು ಗೇಲ್ ಗಾಗಿ‌ ಮ್ಯಾಚ್ ನೋಡ ಜನರಿದ್ದಾರೆ. ಸದ್ಯ ಈ ಬಾರಿಯ ಐಪಿಎಲ್ ನಲ್ಲಿ ಪಂಜಾಬ್ ತಂಡದ ಪರ ಆಡ್ತಿರೋ ಗೇಲ್ ,ಉತ್ತಮ ಫಾರ್ಮ್ ನಲ್ಲಿ ಇದ್ದು,ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡ್ತಾ ಇದ್ದಾರೆ.ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ 8 ಸಿಕ್ಸ್ ನೊಂದಿಗೆ 99ರನ್ ಗಳನ್ನು ಸಿಡಿಸೋ‌ ಮೂಲಕ ಐಪಿಎಲ್ ಮತ್ತು ಟಿ 20 ಇತಿಹಾಸದಲ್ಲಿ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ. ಹೌದು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡದಲ್ಲಿ ಎರಡನೇ ಆಟಗಾರನಾಗಿ ಕ್ರಿಸ್ ಗೆ ಬಂದ ಗೇಲ್ ಮಿಸಿ ಕ್ರಿಕೆಟ್ ನಲ್ಲಿ ಹೊಸ‌ ದಾಖಲೆ ಬರೆದಿದ್ದಾರೆ.‌ರಾಜಸ್ತಾನ್ ರಾಯಲ್ಸ್ ವಿರುದ್ಧ ಎಂಟು ಸಿಕ್ಸರ್ ಗಳನ್ನು ಸಿಡಿಸೋ‌ ಮೂಲಕ ಟಿ20 ಇತಿಹಾಸದಲ್ಲಿ 1000 ಸಿಕ್ಸರ್ ಗಳನ್ನು ಸಿಡಿಸಿದ ಮೊದಲ ಆಟಗಾರ ಅನ್ನೋ ಹೊಸ‌ ದಾಖಲೆಯನ್ನು ಬರೆದಿದ್ದಾರೆ. ಗೇಲ್ ಇಂಟರ್ ನ್ಯಾಷನಲ್‌,ಐಪಿಎಲ್‌,ಬಿಗ್ ಬ್ಯಾಶ್ ಸೇರಿದಂತೆ ಅನೇಕ‌ ಟಿ 20 ಲೀಗ್ ನಲ್ಲಿ‌ ಆಡುತ್ತಿದ್ದು,ಈ ಎಲ್ಲಾ ಟಿ 20 ಲೀಗ್ ನಲ್ಲಿ ಒಟ್ಟು‌ ಹತ್ತು ಸಾವಿರಕ್ಕೂ ಹೆಚ್ಚು ರನ್ ಸಿಡಿಸಿದ ಆಟಗಾರ ಅನ್ನೋ‌ ದಾಖಲೆಯನ್ನು ಬರೆದಿದ್ರೆ,ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಏಕೈಕ ಆಟಗಾರ ಅನ್ನೋ‌ ದಾಖಲೆ‌ ಒಟ್ಟು 6 ಶತಕ‌ ಸಿಡಿಸೋ ಮೂಲಕ‌ ಬರೆದಿದ್ದಾರೆ.ಇನ್ನು ಐಪಿಎಲ್‌ನಲ್ಲಿ ವೈಯುಕ್ತಿಕ ಮೊತ್ತ ಕೂಡ ಇವರ ಹೆಸರಿನಲ್ಲಿದ್ದು IPLನಲ್ಲಿ 175ರನ್ ಗಳ ಅತಿ ಹೆಚ್ಚು ವೈಯುಕ್ತಿಕ ರನ್‌ ದಾಖಲೆ ಕೂಡ ಇವರ ಹೆಸರಿನಲ್ಲಿದೆ. ಸದ್ಯ 1001 ಸಿಕ್ಸರ್ ಗಳನ್ನು ಸಿಡಿಸೋ ಮೂಲಕ ಸಿಕ್ಸರ್ ಸರದಾರನಾಗಿದ್ದು,ಟಿ 20ಗೆ ನಾನೇ ಯುನಿವರ್ಸಲ್ ಬಾಸ್ ಅಂತ 41 ವರ್ಷದ ಕ್ರಿಸ್ ಗೇಲ್ ತಮ್ಮ ಪವರ್ ತೋರಿಸಿದ್ದಾರೆ.

ಕ್ರಿಸ್ ಗೇಲ್ ರ ಈ ದಾಖಲೆಯನ್ನು ಮುಂದೆ ಯಾವ ಆಟಗಾರ ಮುರಿಯಬಹುದು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top