2005ರಲ್ಲಿ 61 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನಗಳನ್ನುಪೂರೈಸಿತ್ತು

ಪ್ರೇಮ್ ನಿರ್ದೇಶನದ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿನಯದ ಬಾಕ್ಸಾಫಿಸ್‌ ಉಡೀಸ್‌ ಮಾಡಿದ ಚಿತ್ರ “ಜೋಗಿ”. ಇಂದಿಗೆ ಚಿತ್ರ ತೆರೆಗೆ ಬಂದು 15 ವರ್ಷ ಪೂರೈಸಿದೆ. 2005 ರಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರೆಲ್ಲರ ಮನೆ-ಮನಗಳನ್ನು ಮುಟ್ಟಿತ್ತು. ಬೇಡುವೆನು ವರವನ್ನು ಕೊಡುತಾಯಿ ಜನ್ಮವನು ಸಾಲುಗಳನ್ನು ಕೇಳಿದ ಪ್ರತಿಯೊಬ್ಬರು ಹಬ್ಬ, ಹರಿದಿನ, ಏನೇ ಕಾರ್ಯಕ್ರಮ ಮಾಡಿದ್ರು ಇದೇ ಹಾಡುಗಳನ್ನು ಹಾಕಿ ಸ್ಟೆಪ್ಸ್‌ ಹಾಕ್ತಾ ಇದ್ರು. ಅಷ್ಟರ ಮಟ್ಟಿಗೆ ಶಿವಣ್ಣ ಮತ್ತು ಅರುಂಧತಿ ನಾಗ್ ಅವರ ನೈಜ ತಾಯಿ-ಮಗ ಜೋಡಿ ಎಲ್ಲರನ್ನು ಆಕರ್ಷಿಸಿತ್ತು.
ಅರೆ ಜೋಗೀ… ಎಲ್ಲೋ ಜೋಗಪ್ಪ ನಿನ್ನ ಅರಮಾನೆ ಹಾಡು ಕಿವಿಗೆ ಬಿದ್ದರೆ ಸಾಕು, ಈಗಲೂ ಅಭಿಮಾನಿಗಳು ನಿತ್ತಲ್ಲೆ ಡಾನ್ಸ್‌ ಮಾಡ್ತಾರೆ. ತಾಯಿ ಮಮಕಾರ, ಕನ್ನಡದ ಮಣ್ಣಿನ ನಂಟು, ರೌಡಿಸಂ, ಪ್ರೀತಿ ಎಲ್ಲವೂ ಒಂದೇ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಮೂಡಿಬಂದ ಆ ಕಾಲದ ಏಕೈಕ ಚಿತ್ರವೆಂದರೆ ಅದು ಜೋಗಿ.
ಜೋಗಿ 2005ರಲ್ಲಿ 61 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನಗಳನ್ನುಪೂರೈಸಿತ್ತು. ಆ ಕಾಲದ ಅನೇಕ ಚಿತ್ರಗಳ ದಾಖಲೆಗಳನ್ನು ಮುರಿದ ಚಿತ್ರ”. ನನ್ನ ಹಿಂದಿನ ಚಿತ್ರದಿಂದ ನಾನು ಪ್ರಭಾವಿತನಾಗಬಹುದು, ಆದರೆ ನಾನು ನಿಖರವಾಗಿ ಅದೇ ಚಿತ್ರವನ್ನು ಮತ್ತೆ ಮಾಡಲು ಬರುವುದಿಲ್ಲ. ಸಾವೇ ಬಂದರೂ ಮಣ್ಣೇ ಆದರೂ ನಿಮ್ಮ ಪ್ರೀತಿ ಅಭಿಮಾನಕ್ಕೆಂದೆಂದೂ ಕೊನೆಯಿಲ್ಲ ಅಂತಾ ನಿರ್ದೇಶಕ ಪ್ರೇಮ್ ತಮ್ಮ ಟ್ವಿಟರ್‌ನಲ್ಲಿ ಬರೆದು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಯಿ ಭಾಗ್ಯಮ್ಮ ಅವರಿಂದ ಚಿತ್ರಕ್ಕೆ ಸ್ಪೂರ್ತಿ ಪಡೆದ ಮಗ ಪ್ರೇಮ್‌ ಹಿರಿಯ ನಟಿ ಅರುಂಧತಿ ನಾಗ್ ಅವರ ಪಾತ್ರವ ಮೂಲಕ ತನ್ನ ತಾಯಿಯ ಜೀವನವನ್ನು ತೆರೆಗೆ ತಂದರು. ಜೋಗಿ ಚಿತ್ರ ತಾಯ ಮಗನ ಸಂಬಂಧವನ್ನು ತೋರಿಸಿದೆ. ಇದು ಪೋಷಕರು ಮತ್ತು ಅವರ ಮಕ್ಕಳ ನಡುವಿನ ಸಂಬಂಧದ ಮೇಲೆ ಅದು ಹೇಗೆ ಪ್ರಭಾವ ಬೀರಿತು ಎಂಬುದಕ್ಕೆ ಉದಾಹರಣೆ ನೀಡುವ ಚಿತ್ರ.
‘ಜೋಗಿ’ ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಯಾವ ಚಿತ್ರ ಕೂಡ ಬಾಕ್ಸಾಫೀಸ್‌ ಕೊಳ್ಳೆಹೊಡೆದ ಉದಾಹರಣೆಗಳೇ ಇಲ್ಲ. ಆ ಮಟ್ಟಿಗೆ ಪ್ರೇಮ್ ನಿರ್ದೇಶನದ ‘ಜೋಗಿ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ವಿಶೇಷವಾದ ಸ್ಥಾನ ಮಾನವನ್ನು ಪಡೆದಿತ್ತು. ಅಂದಿಗೂ ಇಂದಿಗೂ ಎಲ್ಲರ ಮನದಲ್ಲಿ ಜೋಗಿ ಅರಮನೆಯಲ್ಲಿಯಲ್ಲಿರುವ ಅಡುಗೆ ಕೋಣೆಯಂತೆ ಉಳಿದಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top