20 ನಿಮಿಷ ಚಾರ್ಜ್‌ ಮಾಡಿದ್ರೆ ಈ ಕಾರ್‌ ಓಡುತ್ತೆ 480 ಕಿಮೀ

ಜಗತ್ತಿನಲ್ಲಿ ತಂತ್ರಜ್ಞಾನ ಅತಿ ವೇಗವಾಗಿ ಬೆಳೀತಾ ಇದೆ..ಈಗಾಗಲೇ ಜಗತ್ತನ್ನು ಕೈಯಲ್ಲೇ ಆಡಿಸುವ ತಂತ್ರಜ್ಞಾನ ಈಗಾಗಲೇ ಬೆಳೆದಿದೆ. ಹೀಗಿರುವಾಗ ಈ ಏನಿದ್ರು..ಎಲೆಕ್ಟ್ರಾನಿಕ್‌ಗಳದ್ದೇ ಕಾರುಬಾರು. ಈಗಾಗಲೇ ಅದೆಷ್ಟೋ ಎಲೆಕ್ಟ್ರಾನಿಕ್‌ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅದರಲ್ಲೂ ವಾಹನಗಳ ವಿಚಾರಕ್ಕೆ ಬರೋದಾದ್ರೆ ಈಗಾಗಲೇ ಕೆಲವೊಂದು ಸ್ಕೂಟರ್‌ಗಳು ಮತ್ತು ಕಾರ್‌ಗಳು ಎಲೆಕ್ಟ್ರಾನಿಕ್‌ ಆಗಿ ಮಾರ್ಪಟ್ಟು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ, ಆದ್ರೆ ಅವೆಲ್ಲವು ಚಾರ್ಜ್‌ ಮಾಡಲು ಸಾಕಷ್ಟು ಸಮಯಗಳು ಬೇಕು ಅನ್ನೋ ಮಾತುಗಳು ಕೇಳಿ ಬರ್ತಾಇದೆ. ಈಗೆಲ್ಲಾ ಏನಿದ್ರು ಸ್ಮಾರ್ಟ್‌ ಯು..ಒಂದು ಸ್ಮಾರ್ಟ್‌ ಫೋನ್‌ ತೆಗೆದುಕೊಂಡು ಅದು ಎಷ್ಟು ಬೇಗ ಚಾರ್ಜ್‌ ಆಗುತ್ತೆ.

ಒಮ್ಮೆ ಚಾರ್ಜ್‌ ಆದ್ರೆ ಎಷ್ಟು ಗಂಟೆ ಯೂಸ್‌ ಮಾಡಬಹುದು ಅನ್ನೋ ಲೆಕ್ಕಾಚಾರ ಶುರುಮಾಡ್ತಾರೆ. ಅದೇ ರೀತಿ ಇದೀಗ ಕಾರ್‌ನಲ್ಲೂ ಲಭ್ಯವಾಗಿದೆ. ಈ ಕಾರ್‌ನ ನೀವು ಕೇವಲ 20 ನಿಮಿಷ ಜಾರ್ಜ್‌ ಮಾಡಿದ್ರೆ ನೀವು ಬರೋಬ್ಬರಿ 483 ಕಿ.ಮೀ ಅಷ್ಟು ದೂರ ಚಲಿಸಬಹುದು. ಈ ರೀತಿಯ ಒಂದು ಕಾರನ್ನು ಅಭಿವೃದ್ಧಿ ಪಡಿಸಿದೆ ಅಮೇರಿಕಾದ ಒಂದು ಕಂಪನಿ.

ಲುಸಿಡ್‌ ಮೊಟಾರ್ಸ್‌ ಈ ಎಲೆಕ್ಟ್ರಿಕ್‌ ಸೆಡಾನ್‌ ಕಾರನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇನ್ನು ಈ ಕಾರನ್ನು ಅಭಿವೃದ್ಧ ಪಡಿಸಿ ಸೆಪ್ಟೆಂಬರ್‌ 9ರಂದು ಬಿಡುಗಡೆ ಕೂಡ ಮಾಡಿದೆ. ಆದ್ರೆ ಇದು ಗ್ರಾಹಕರ ಕೈ ಸೇರ ಬೇಕು ಅಂದ್ರೆ ಮುಂದಿನ ವರ್ಷದ ವರೆಗೆ ಕಾಯಲೇ ಬೇಕು.

ಈ ಕಾರನ್ನು 20 ನಿಮಿಷ ಚಾರ್ಜ್‌ ಮಾಡಿದ್ರೆ ಬರೋಬ್ಬರಿ 480 ಕಿ.ಮೀ ಚಲಿಸುವ ಸಾಮರ್ಥ್ಯ ಈ ಕಾರ್‌ ಹೊಂದಿದೆ. ಇನ್ನು ಈ ಕಾರ್‌ ಅನ್ನು ಫುಲ್‌ ಚಾರ್ಜ್‌ ಮಾಡಿದ್ರೆ 800 ಕಿ.ಮೀ ದೂರ ಚಲಿಸಲಿದೆ. ಇನ್ನು ಲುಸಿಡ್‌ ಕಂಪನಿ ಹೇಳಿರ ಪ್ರಕಾರ ಈ ಕಾರು 2.5 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗದಲ್ಲಿ ಚಲಿಸಲಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಟೆಸ್ಲಾ ಕಂಪನಿ ಕಳೆದ ಜೂನ್‌ನಲ್ಲಿ ಎಸ್‌ ಲಾಂಗ್‌ ರೇಂಜ್‌ ಪ್ಲಸ್‌ ಎಂಬ ಹೊಸ ಎಲೆಕ್ಟ್ರಿಕ್‌ ಕಾರನ್ನು ಬಿಡುಗಡೆ ಮಾಡಿತ್ತು. ಅದು ಪೂರ್ತಿ ಜಾರ್ಜ್‌ ಮಾಡಿದ್ರೆ 650 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿತ್ತು. ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್‌ ನೀಡುವ ಎಲೆಕ್ಟ್ರಿಕ್‌ ಕಾರು ಎಂದು ಕಂಪನಿ ಹೇಳಿಕೊಂಡಿತ್ತು, ಆದ್ರೀಗ ಲುಸಿಡ್‌ ಕಂಪನಿ ಹೊರ ತಂದಿರೋ ಕಾರು ಅತಿ ಹೆಚ್ಚು ಮೈಲೇಜ್‌ ಕೊಡೋ ಕಾರಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top