2 ಪಂದ್ಯ 3 ಸೂಪರ್‌ ಓವರ್‌, ಮಾಯಾಂಕ್‌ ಅಗರ್‌ವಾಲ್‌ಗೆ ಮೆಚ್ಚುಗೆ..

ನಿನ್ನೆ ನಡೆದ ಪಂಜಾಬ್‌ ಮತ್ತು ಮುಂಬೈ ನಡುವಿನ ಐಪಿಎಲ್‌ ಪಂದ್ಯ ರೋಚಕತೆಯಿಂದ ಕೂಡಿತ್ತು. ಒಂದೇ ಪಂದ್ಯದಲ್ಲಿ ಎರಡು ಸೂಪರ್‌ ಓವರ್‌ ಆಗುವ ಮೂಲಕ ಹೊಸ ದಾಖಲೆಗೆ ಕಾರಣವಾಯ್ತು.. ಮೊದಲು ಬ್ಯಾಟ್‌ ಮಾಡಿದ ಮುಂಬೈ ತಂಡ 177ರನ್‌ಗಳ ಗುರುನೀಡಿತ್ತು, ಆದ್ರೆ ಪಂಜಾಬ್‌ 176ರನ್‌ಗಳಿಸುವ ಮೂಲಕ ಪಂದ್ಯವನ್ನು ಟೈ ಮಾಡಿಕೊಳ್ತು.

ಇದಿರಂದಾಗಿ ಸೂಪರ್‌ ಓವರ್‌ಗೆ ಸಾಕ್ಷಿಯಾಯ್ತು, ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ತಂಡ 6ಬಾಲ್‌ಗಳಲ್ಲಿ ಕೇವಲ 5 ರನ್‌ ಗಳಿಸಲು ಶಕ್ತವಾಯ್ತು, ಇನ್ನು ಈ ರನ್‌ ಚೇಜ್‌ ಮಾಡಲು ಬಂದ ಮುಂಬೈ ತಂಡ 5 ರನ್‌ಗಳಿಸುವ ಮೂಲಕ ಸೂಪರ್‌ ಓವರ್‌ ಮ್ಯಾಚ್‌ ಅನ್ನು ಸಹ ಟೈ ಮಾಡಿಕೊಳ್ಳುವ ಮೂಲಕ ಒಂದೇ ಪಂದ್ಯದಲ್ಲಿ ಎರಡು ಸೂಪರ್‌ ಓವರ್‌ಗೆ ಸಾಕ್ಷಿ ಆಯ್ತು, ಇನ್ನು ಎರಡನೇ ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ 11 ರನ್‌ಗಳನ್ನು ಗಳಿಸುವ ಮೂಲಕ ಪಂಜಾಬ್‌ಗೆ ಸವಾಲು ಎಸೆಯಿತು,ಇನ್ನು ಪಂಜಾಬ್‌ ಕೂಡ ಮಾಯಂಕ್‌ ಮತ್ತು ಗೇಲ್‌ ಅವರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನಿಂದಾಗಿ 12ರನ್‌ ಸಿಡಿಸುವ ಮೂಲಕ ಎರಡನೇ ಸೂಪರ್‌ ಓವರ್‌ನಲ್ಲಿ ಗೆಲುವನ್ನು ಸಾಧಿಸಿತು. ಆದ್ರೆ ಈ ಎರಡು ಸೂಪರ್‌ ಓವರ್‌ಗಳನ್ನು ಕ್ರಿಕೆಟ್‌ ಪ್ರೇಮಿಗಳು ಸಖತ್‌ ಎಂಜಾಯ್‌ ಮಾಡಿದ್ರೆ.

ಎರಡನೇ ಸೂಪರ್‌ ಓವರ್‌ನಲ್ಲಿ ಪಂಜಾಬ್‌ ತಂಡದ ಅಪತ್ಭಾಂಧವ ಆಗಿ ಹೊರ ಹೊಮ್ಮಿದ್ದು, ಮಾಯಂಕ್‌ ಅಗರ್‌ವಾಲ್‌ ಆ ಮೂಲಕ ಕ್ರಿಕೆಟ್‌ ಪ್ರೇಮಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ .ಹೌದು ಎರಡನೇ ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈನ ತಂಡ ಪೊಲಾರ್ಡ್‌ ಮತ್ತು ಪಾಂಡ್ಯ, ಈವೇಳೆ ಕೊನೆಯ ಬಾಲ್‌ನಲ್ಲಿ ಪೊಲಾರ್ಡ್‌ ಬಲವಾಗಿ ಹೊಡೆದ ಬಾಲ್‌ ಅನ್ನು ಎಲ್ಲರೂ ಸಿಕ್ಸ್‌ ಹೋಗುತ್ತದೆ ಎಂದಯ ಎಲ್ಲರೂ ಭಾವಿಸಿದ್ರು, ಅಷ್ಟರಲ್ಲಿ ಬೌಂಡರಿ ಲೈನ್‌ನಲ್ಲಿ ಇದ್ದ ಮಯಾಂಕ್‌ ಜಿಗಿದು ಬಾಲನ್ನು ಹಿಡಿದು ಎಸೆಯುವ ಮೂಲಕ ತಂಡಕ್ಕೆ ನಾಲ್ಕು ರನ್‌ ತಡೆಯುವಲ್ಲಿ ಯಶಸ್ವಿಯಾದ್ರು, ಮಯಾಂಕ್‌ ಅವರ ಅದ್ಭುತ ಫಿಲ್ಡಿಂಗ್‌ ಪ್ರದರ್ಶನದಿಂದ ಮುಂಬೈ 11 ರನ್‌ ಗಳಿಸಲು ಮಾತ್ರ ಶಕ್ತವಾಯಿತು.

ಮಾಯಂಕ್‌ ಅಗರ್‌ವಾಲ್‌ ಬರೋಬ್ಬರಿ 9 ಅಡಿ ಎತ್ತರದ ವರೆಗೆ ಜಿಗಿಯೋ ಮೂಲಕ ತಂಡಕ್ಕೆ ನಾಲ್ಕುರನ್‌ ರಕ್ಷಿಸಿಕೊಟ್ಟರು, ಒಂದು ವೇಳೆ ಆ ಬಾಲ್‌ ನೇರವಾಗಿ ಸಿಕ್ಸ್‌ ಹೋಗುತ್ತಿದ್ದರೆ, ಅಥವಾ ಮಾಯಂಕ್‌ ಅವರ ಪ್ರಯತ್ನ ವಿಫಲವಾಗಿದ್ರೆ , ಕ್ರಿಸ್‌ಗೇಲ್‌ ಮತ್ತು ಮಾಯಾಂಕ್‌ ಮೇಲೆ ಇನ್ನಷ್ಟು ಒತ್ತಡ ಬ್ಯಾಟಿಂಗ್‌ ವೇಳೆಯಲ್ಲಿ ಆಗುತ್ತಿತ್ತು. ಆದ್ರೆ ಮಾಯಾಂಕ್‌ ಅದ್ಭುತ ಫಿಲ್ಡಿಂಗ್‌ನಿಂದಾಗಿ 4 ರನ್‌ ಸೇವ್‌ ಮಾಡುವ ಮೂಲಕ 2 ರನ್‌ ನೀಡಿ ದ್ದು, ಈ ಪ್ರಯತ್ನಕ್ಕೆ ಸಖತ್‌ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಎರಡನೇ ಸೂಪರ್‌ ಓವರ್‌ನಲ್ಲಿ 12ರನ್‌ ಗುರಿ ಹತ್ತಿ ಗೇಲ್‌ ಸಿಕ್ಸರ್‌ ಮತ್ತು ಮಾಯಾಂಕ್‌ ಅವರ ಬೌಂಡರಿಯಿಂದಾಗಿ ಪಂಜಾಬ್‌ ಗೆಲುವನ್ನು ಸಾಧಿಸಿತು.

ಇನ್ನು ನಿನ್ನೆ ಎರಡು ಮ್ಯಾಚ್‌ಗಳು ನಡೆದಿದ್ದು, ಎರಡು ಪಂದ್ಯಗಳಿಂದ ಒಟ್ಟು ಮೂರು ಸೂಪರ್‌ ಓವರ್‌ ಆಗುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಬಾದ್‌ ಮತ್ತು ಕೆಕೆಆರ್‌ ತಂಡಗಳ ನಡುವಿನ ಪಂದ್ಯದಲ್ಲೂ ಪಂದ್ಯ ಟೈ ಆಗಿದ್ದು, ಈ ವೇಳೆ ಸೂಪರ್‌ ಓವರ್‌ನಲ್ಲಿ ಕೆಕೆಆರ್‌ ಪಂದ್ಯವನ್ನು ಗೆದ್ದಿದ್ರೆ. ಎರಡನೇ ಪಂದ್ಯದಲ್ಲಿ ಎರಡು ಸೂಪರ್‌ ಓವರ್‌ ಆಗೋ ಮೂಲಕ ಪಂಜಾಬ್‌ ಗೆಲುವನ್ನು ಸಾಧಿಸ್ತು. ಒಟ್ಟಿನಲ್ಲಿ ನಿನ್ನೆಯ ಎರಡು ಪಂದ್ಯಗಳು ಸೂಪರ್‌ ಓವರ್‌ ಮೂಲಕ ಕ್ರಿಕೆಟ್‌ ಪ್ರಿಯರಿಗೆ ರಸದೌತಣವನ್ನು ನೀಡಿತು. ಇನ್ನು ಸೂಪರ್‌ ಓವರ್‌ ಮ್ಯಾಚ್‌ನಲ್ಲೂ ಟೈ ಆದ ವೇಳೆ ಬೌಂಡರಿ ಲೆಕ್ಕ ತೆಗೆದುಕೊಳ್ಳದೇ ಮತ್ತೊಂದು ಸೂಪರ್‌ ಓವರ್‌ ನಡೆಸಬೇಕು ಅನ್ನೋ ರೂಲ್‌ ಕೂಡ ಅನಿಲ್‌ ಕುಂಬ್ಳೆ ಐಸಿಸಿ ಸಲಹ ಸಮಿತಿಯ ಅಧ್ಯಕ್ಷರಾಗಿದ್ದ ವೇಳೆ ಈ ನಿಯಮವನ್ನು ತರಬೇಕು ಎಂದು ಸಲಹೆ ನೀಡಿದ್ರು, ಅದರಂತೆ ಕುಂಬ್ಳೆ ನೀಡಿದ ಸಲಹೆ ನಂತರ ಆದ ಮೊದಲ ಸೂಪರ್‌ ಓವರ್‌ನ ಸೂಪರ್‌ ಓವರ್‌ನಲ್ಲಿ ಮೊದಲ ಮ್ಯಾಚ್‌ ಕುಂಬ್ಳೆ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿರೋ ತಂಡವೇ ಆಡಿದ್ದು ಆ ಮೂಲಕ ಮತ್ತೊಂದು ದಾಖಲೆಗೂ ಈ ಸೂಪರ್‌ ಓವರ್‌ ಮ್ಯಾಚ್‌ ಸಾಕ್ಷಿಯಾಯ್ತು.

ನಿನ್ನೆಯ ಮೂರು ಸೂಪರ್‌ ಓವರ್‌ ಮ್ಯಾಚ್‌ಗಲ್ಲಿ ಯಾವ ಸೂಪರ್‌ ಓವರ್‌ ಬೆಸ್ಟ್‌ ಅನಿಸುತ್ತದೆ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top