18ಕ್ಕೆ ಬರಲಿರೋ ಸಲಗ ಮೇಕಿಂಗ್ ವಿಡಿಯೋಗೆ ಈಗಲೇ ಕೌಂಟ್ ಡೌನ್

ಸಲಗ ಡಬ್ಬಿಂಗ್ ಕೆಲಸದಲ್ಲಿ ನಿರತವಾಗಿರೋ ಸಲಗ ಟೀಮ್ ಆಗ್ಲೇ ಪ್ರಮೋಷನ್ ಕೆಲಸ ಶುರುಮಾಡಿದೆ. ಅದ್ರಂತೆ, ಮೊದಲಿಗಹೆ ಚಿತ್ರದ ಮೇಕಿಂಗ್ ವಿಡಿಯೋವನ್ನ ರಿಲೀಸ್ ಮಾಡ್ತಿದೆ. ಇದೇ 18ಕ್ಕೆ ಸಲಗ ಮೇಕಿಂಗ್ ವಿಡಿಯೋ ಎ2 ಯೂಟ್ಯೂಬ್ ಚಾಲೆನ್ ನಲ್ಲಿ ಗ್ರ್ಯಾಂಡ್ ಆಗಿ ಲಾಂಚ್ ಆಗ್ತಿದೆ. ಎ2 ಆಡಿಯೋ ಜೋಗಿ ನಿರ್ಮಾಪಕರ ಕೃಷ್ಣ ಪ್ರಸಾದ್ ಅವ್ರ ಹೊಸ ಕಂಪನಿ. ಈ ಹಿಂದೆ ಅಶ್ವಿನಿ ಆಡಿಯೋ ಸಂಸ್ಥೆ ಮೂಲಕ ಜನಪ್ರಿಯರಾಗಿದ್ದ ಕೃಷ್ಣಪ್ರಸಾದ್, ಟಗರು ಅಂತಹ ಮೆಗಾ ಹಿಟ್ ಕೊಟ್ಟ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವ್ರ ಸಲಗ ಚಿತ್ರದ ಮೂಲಕ, ಇಬ್ಬರೂ ಮೆಗಾ ಹಿಟ್ ನಿರ್ಮಾಪಕರ ಕಾಂಬಿನೇಷನ್ ನಲ್ಲಿ ಎ2 ಹೆಸರಲ್ಲಿ ಆಡಿಯೋ ಕಂಪನಿಯನ್ನ ಲಾಂಚ್ ಮಾಡ್ತಿದ್ದಾರೆ. ಅದು ಸಲಗ ಚಿತ್ರದ ಮೇಕಿಂಗ್ ವಿಡಿಯೋವನ್ನ ರಿಲೀಸ್ ಮಾಡೋ ಮೂಲಕ. ಇದೇ ಬುಧವಾರ ಬೆಳಿಗ್ಗೆ 10ಗಂಟೆಗೆ ಎ2 ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗ್ತಿರೋ ಸಲಗ ಮೇಕಿಂಗ್ ವಿಡಿಯೋಗೂ ಮುನ್ನ ಎ2 ಆಡಿಯೋ ಟೀಮ್ ಸಲಗ ಮೇಕಿಂಗ್ ಪ್ರೋಮೋನ ರಿಲೀಸ್ ಮಾಡಿದೆ.

ಸಲಗ ಮೇಕಿಂಗ್ ವಿಡಿಯೋ ಬಗ್ಗೆ ಉದ್ಯಮದಲ್ಲಿ, ಸಿನಿಪ್ರಿಯರ ವಲಯದಲ್ಲಿ ಭಾರಿ ನಿರೀಕ್ಷೆ ಹುಟ್ಟಿಕೊಂಡಿದ್ದು, ಕುತೂಹಲಕ ಟಾಕ್ ಕ್ರಿಯೇಟ್ ಆಗಿದೆ. ಅಂದ್ಹಾಗೆ ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದೊಂದಿಗೆ ನಟಿಸ್ತಿರೋ ಸಲಗ ಚಿತ್ರದಲ್ಲಿ ವಿಜಿಗೆ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ. ನಾಯಕಿಯಾಗಿ ಸಂಜನಾ ಆನಂದ್ ಇದ್ದಾರೆ. ಜೊತೆಗೆ ಕಾಕ್ರೋಚ್ ಖ್ಯಾತಿಯ ಸುಧಿ ಸೇರಿದಂತೆ, ಚಿತ್ರದಲ್ಲಿ ಪ್ರತಿಭಾವಂತರ ದಂಡೇ ಇದೆ. ಟಗರು ಚಿತ್ರಕ್ಕೆ ಕೆಲಸ ಮಾಡಿದವರೇ ಬಹುತೇಕ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಅಂದ್ಹಾಗೆ 18ನೇ ತಾರೀಖು ಸಲಗ ಚಿತ್ರದ ಅಸಲಿ ಮೇಕಿಂಗ್ ಝಲಕ್ ರಿವೀಲ್ ಆಗಲಿದ್ದು, ಅದನ್ನ ನೋಡಲು ಸಿನಿಪ್ರಿಯರ ಜೊತೆಗೆ ಸಿನಿಮಾ ಸ್ಯಾಟಿಲೈಟ್, ಡಿಜಿಟಲ್ ಮತ್ತು ಡಬ್ಬಿಂಗ್ ಬ್ಯುಸಿನೆಸ್ ಮಂದಿ ಕಾತರುದದಿಂದ ಕಾಯ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top