
17 ವರ್ಷದ ಯುವತಿಗೆ ತನ್ನ ದೇಹಕ್ಕಿಂತ ಕಾಲುಗಳು ಉದ್ದವಾಗಿದ್ದು, ಇದೀಗ ಈಕೆ ವಿಶ್ವದಾಖಲೆಯನ್ನು ಬರೆದಿದ್ದಾಳೆ. 6.10 ಅಡಿ ಇರೋ ಈಕೆಯ ಹೆಸರು ಮ್ಯಾಕಿ ಕರ್ರಿನ್. ಅಮೇರಿಕಾದ ಟೆಕ್ಸಿನ್ನಲ್ಲಿ ನೆಲೆಸಿರೋ ಈ ಯುವತಿಗೆ ದೇಹಕ್ಕಿಂತ ಕಾಲುಗಳೇ ಎತ್ತರವಾಗಿದ್ದು, ಒಂದೂವರೆ ಮೀಟರ್ನಷ್ಟು ಕಾಲುಗಳು ಉದ್ದವಾಗಿವೆ. ಈಕೆಯ ಎಡ ಮತ್ತು ಬಲಗಾಲುಗಳ ಅಳತೆಯಲ್ಲೂ ಕೂಡ ವ್ಯತ್ಯಾಸವಿದ್ದು, ಬಲಗಾಉ 134.3 ಸೆ.ಮೀ ಇದ್ದು, ಎಡಗಾಲು 135.2 ಸೆ.ಮೀ ಇದೆ.
ಈಕೆ ಎತ್ತರ ಇರೋದ್ರಿಂದಾಗಿ ಈಕೆಗೆ ತನ್ನ ಸಂಬಂಧಿಕರು ಮತ್ತು ಸ್ನೇಹಿತರು ಇರುಸುಮುರುಸು ಮಾಡಿದ್ದು ಮನಸಿಗೆ ಬೇಸರ ತರಿಸಿತು, ನನಗೆ ಎಲ್ಲರ ರೀತಿ ಸಾಮಾನ್ಯವಾಗಿ ಇರಲು ಸಾಧ್ಯವಾಗುತ್ತಿಲ್ಲ, ಶಾಪಿಂಗ್ ಹೋಗಲು ಆಗುತ್ತಿಲ್ಲ ಅಂತ ಬೇಸರವಾಗುತ್ತಿತ್ತು, ಆದ್ರೆ ಇದೀಗ ನಾನು ಬೇಸರ ಪಡುತ್ತಿಲ್ಲ ಈ ರೀತಿ ಉದ್ದ ಇರುವುದಕ್ಕೆ ಖುಷಿಯಾಗುತ್ತಿದೆ.
ನನಗೆ ಈ ಉದ್ದಕಾಲುಗಳನ್ನು ಇಟ್ಟುಕೊಂಡು ವಾಲಿಬಾಲ್ ಆಡಬೇಕು ಅಂತ ಆಸೆಯಾಗುತ್ತದೆ. ನನಗೆ ಈ ರೀತಿ ಉದ್ದ ಕಾಲುಗಳು ಇರೋದು ಹೆಮ್ಮೆ ಆಗುತ್ತಿದೆ. ನಾನು ಮಾಡೆಲಿಂಗ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅನ್ನೋ ಆಸೆ ಇದೆ ಎಂದು ಮ್ಯಾಕಿ ಹೇಳುತ್ತಾರೆ.
ಇನ್ನು ನನಗೆ ನನ್ನ ಅಳತೆಯ ಬಟ್ಟೆಗಳು ಸಿಗುತ್ತಿಲ್ಲ ಸಮಸ್ಯೆ ಆಗುತ್ತಿದೆ. ನನ್ನ ಮನೆಯ ಬಾಗಿಲು ಕೊಠಡಿಗಳ ಅಳತೆ ಚಿಕ್ಕದಾಗುತ್ತಿದೆ, ಆದ್ರೆ ಏನಾದ್ರು ಸಾಧನೆ ಮಾಡಬೇಕಾದ್ರೆ ಇವೆಲ್ಲವನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಮ್ಯಾಕಿ ಕರ್ರಿನ್ ಹೇಳುತ್ತಾರೆ.