16ವರ್ಷದ ಬಾಲಕಿ ಮೇಲೆ 5 ಜನರಿಂದ ರೇಪ್,ಬೆತ್ತಲೆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್..!

16 ವರ್ಷದ ಹುಡುಗಿ ಮೇಲೆ 5 ಜನರಿಂದ‌ ಅತ್ಯಾಚಾರವಾದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದ್ದು ,ಅತ್ಯಚಾರ ವೆಸಗಿ ಹುಡುಗಿಯ ಬೆತ್ತಲೆ ಫೋಟೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದ ಹುಡುಗಿಯ ಫೋಟೋ ನೋಡಿದ ಸೈಬರ್ ಸೇನಾನಿ‌ ತಂಡ ಪೋಲಿಸರಿಗೆ ದೂರು ನೀಡಿದ್ದು, ಏಪ್ರಿಲ್ 24 ರಂದು‌ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಈ ಬೆಳಕಿಗೆ ಬಂದಿದ್ದು.ಐವರಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.ಮತ್ತೊರ್ವ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗುಜರಾತ್ ನ ಅಹಮದಾಬಾದ್ ಗೆ ಕೆಲಸಕ್ಕೆ ಹೋಗಿದ್ದ ಬಾಲಕಿ ತಂದೆ ಲಾಕ್ ಡೌನ್ ಹಿನ್ನೆಲೆ ಅಲ್ಲೇ ಸಿಲುಕಿಕೊಂಡಿದ್ದರ ಹಿನ್ನಲೆ,ಮನೆಗೆ ನೆರವಾಗಲಿ ಎಂದು ಬಾಲಕಿ ಕೆಲಸಕ್ಕೆ ಹೋಗುತ್ತಿದ್ದಳು,ಏಪ್ರಿಲ್ 24ರಂದು ಕೆಲಸ ಮುಗಿಸಿ ಮನೆಗೆ ಹಿಂತಿರುಗಿವಾಗ,ದಾರಿಯಲ್ಲಿ ಆಕೆಯನ್ನು ಇಬ್ಬರು ಅಡ್ಡಗಟ್ಟಿ ಅಲ್ಲೇ ಇದ್ದ ಮಾವಿನ ತೋಪಿಗೆ ಎಳೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿ ಇನ್ನು‌ ಮೂರು ಜನ ಸ್ನೇಹಿತರನ್ನು ಕರೆಸಿಕೊಂಡು ಐವರು ಸೇರಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ನಂತರ ಆಕೆಯ ಬೆತ್ತಲೆ ಫೋಟೋಗಳನ್ನು ತೆಗೆದು ಈ ವಿಷಯ ಯಾರ ಬಳಿಯು ಹೇಳಬಾರದು ಎಂದು ಪ್ರಮಾಣವನ್ನು ಮಾಡಿಸಿಕೊಂಡಿದ್ದಾರೆ. ತಾಯಿ ಮತ್ತು ಅಜ್ಜಿ ಜೊತೆ ವಾಸವಾಗಿದ್ದ ಬಾಲಕಿ ಈ ವಿಷಯವನ್ನು ಯಾರ ಬಳಿಯು ಹೇಳದೆ ಸುಮ್ಮನಾಗಿದ್ದಾಳೆ.ಇನ್ನು ಈ ಹೇಯ ಕೃತ್ಯ ವೆಸಗಿದ್ದ ಪಾಪಿಗಳು ಹುಡುಗಿಯ ಬೆತ್ತಲೆ ಫೋಟೋವನ್ನು ಸಾಮಾಜಿಕ‌ ಜಾಲತಾಣದಲ್ಲಿ ಹರಿಬಿಟ್ಟಿದ್ದರು ಇದ್ದನ್ನು ನೋಡಿದ್ದ ಸೈಬರ್ ಸೇನಾನಿ ತಂಡದ ಗಮನಕ್ಕೆ ಬಂದಿದ್ದು,ಇದನ್ನು ಪೊಲೀಸರ ಗಮನ‌ಕ್ಕೆ ತಂದಿದ್ದಾರೆ.ಕಾರ್ಯಾಚರಣೆ ಮಾಡಿದ ಪೊಲೀಸರು ಐವರಲ್ಲಿ ನಾಲ್ವರನ್ನು ಬಂಧಿಸಿದ್ದು ಒಬ್ಬ ತಲೆ ಮರೆಸಿಕೊಂಡಿದ್ದಾನೆ.ಇನ್ನು ಈ ವಿಚಾರವಾಗಿ ಆತ್ಯಾಚಾರಕ್ಕೆ ಒಳಗಾದ ಹುಡುಗಿಯನ್ನು ಪತ್ತೆ ಮಾಡಿ ಆ ಬಾಲಕಿಯ ಬಳಿ ಹೇಳಿಕೆಯನ್ನು ಪಡೆದಿದ್ದಾರೆ.ಸದ್ಯ ಆರೋಪಿಗಳನ್ನು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು,ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top