ಐಪಿಎಲ್‌ ರದ್ದು, ರಾಜ್ಯದಲ್ಲಿ ಒಂದು ವಾರ ಬಂದ್‌..!

ದೇಶದಲ್ಲಿ ಈಗಾಗಲೇ ಕೊರೋನಾ ಭೀತಿಯಿಂದಾಗಿ, ಸಾಕಷ್ಟು ಜಾಗೃತಿ ಕೆಲಸಗಳನ್ನು ಸರ್ಕಾಗಳು ಮಾಡ್ತಾ ಇದ್ದು, ಇತ್ತ ರಾಜ್ಯ ಸರ್ಕಾರ ಕೊರೋನ ಭೀತಿಯಿಂದಾಗಿ ನಾಳೆಯಿಂದ ಒಂದು ವಾರಗಳ ಕಾಲ ರಾಜ್ಯದಲ್ಲಿ ಕೆಲವು ಕ್ಷೇತ್ರಗಳು ಬಂದ್‌ ಮಾಡಲು ಆದೇಶ ಹೊರಡಿಸಿದೆ, ಇಂದು ಸುದ್ದಿಗೋಷ್ಠಿ ಮಾಡಿದ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ನಾಳೆಯಿಂದ, ಮಾಲ್‌ಗಳು, ಥಿಯೇಟರ್‌ಗಳು, ಜಿಮ್‌ಗಳು, ಸ್ವಿಮಿಂಗ್‌ ಫೂಲ್‌ಗಳು, ಕಾಲೇಜು, ಸ್ಕೂಲ್‌, ಯೂನಿವರ್ಸಿಟಿಗಳು ಸಹ ಒಂದು ವಾರಗಳ ಕಾಲ ಬಂದ್‌ ಆಗಲಿದ್ದು, ಪರೀಕ್ಷೆಗಳು ನಡೆಯುತ್ತಿದ್ದರೆ ಎಂದಿನಂತೆ ಪರೀಕ್ಷೆಗಳು ಮಾತ್ರ ನಡೆಯಲಿದ್ದು, ಪರೀಕ್ಷೆ ಮುಗಿಸಿದ ನಂತರ ವಿದ್ಯಾರ್ಥಿಗಳು ಸಹ ಎಲ್ಲಿಯೂ ಹೋಗದೆ ಮನೆಗಳನ್ನು ತಲುಪಬೇಕು ಅನ್ನೋ ಖಡಕ್‌ ಆದೇಶವನ್ನು ಸಿಎಂ ನೀಡಿದ್ದು,

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜನರಲ್ಲಿ ಕೊರೋನಾ ಬಗೆಗಿನ ಜಾಗೃತಿಯನ್ನು ಮೂಡಿಸಲು ಮುಂದಾಗಿದೆ, ಇನ್ನು ಕೊರೋನಾ ಎಫೆಕ್ಟ್‌ ಕ್ರಿಕೆಟ್‌ ಮೇಲು ಬಿದ್ದಿದ್ದು, ಸದ್ಯ ಮಾರ್ಚ್‌ 29ರಿಂದ ನಡೆಯ ಬೇಕಾಗಿದ್ದ ಐಪಿಎಲ್‌ ಮ್ಯಾಚ್‌ಗಳು ಸದ್ಯಕ್ಕೆ ಏಪ್ರಿಲ್‌ 15ರ ವರೆಗೂ ಮುಂದೂಡಿದ್ದು, ಏಪ್ರಿಲ್‌ 15ರ ನಂತರ ಐಪಿಎಲ್‌ ಬಗೆಗಿನ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಇದರ ಜೊತೆಯಲ್ಲಿ ಇಂಡಿಯಾ ಮತ್ತು ದ.ಆಪ್ರಿಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯು ಕೂಡ ಈಗ ರದ್ದಾಗಿದ್ದು, 2ನೇ ಮತ್ತು 3ನೇ ಏಕದಿನ ಪಂದ್ಯಗಳನ್ನು ಕೊರೋನಾ ಎಫೆಕ್ಟ್‌ನಿಂದಾಗಿ ರದ್ದುಗೊಳಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top