15 ತಿಂಗಳ ನಂತರ ಸಿಕ್ತು ನೀರಿನೊಳಗೆ ಬಿದ್ದಿದ್ದ ಐಫೋನ್..!

ನಮ್ಮ ನಿಮ್ಮೆಲ್ಲರ ಮೊಬೈಲ್ ಕೇವಲ ಒಂದು‌ ಸೆಕೆಂಡ್ ನೀರಿನೊಳಗಡೆ ಬಿದ್ದರೆ ಸಾಕು ಮೊಬೈಲ್ ಕೈಥೆ ಮುಗಿದು ಹೋಗಿ ಬಿಡುತ್ತದೆ..ಇ‌ನ್ನು ಆ ಮೊಬೈಲ್ ಆಸೆಯನ್ನು ಕೈ ಬಿಡಬೇಕಾಗುತ್ತದೆ. ಆದ್ರೆ ಇಲ್ಲೊಂದು ಮೊಬೈಲ್ 15 ತಿಂಗಳು ನೀರಿನೊಳಗಿದ್ದರು ಏನೂ ಆಗದೆ ಮತ್ತೆ ಕಾರ್ಯನಿರ್ವಹಿಸುತ್ತಿದೆ ಅಂದರೆ ನೀವೂ ನಂಬಲೇ ಬೇಕು. ಹೌದು ಈ ರೀತಿಯ ಒಂದು ಘಟನೆ ನಡೆದಿರೋದು ಅಮೇರಿಕಾದ ದಕ್ಷಿಣ ಕ್ಯಾರೋಲಿನಾದಲ್ಲಿ. ಎಡಿಸ್ಟೋ ನದಿಯಲ್ಲಿ ಈ ಐಫೋನ್ ಪತ್ತೆಯಾಗಿದ್ದು,ಮಿಚೇಲ್ ಬೆನ್ನೆಟ್ ಎಂಬ ವ್ಯಕ್ತಿ ಎಡಿಸ್ಟೋ ನದಿಯಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಿರೋ ವೇಳೆ ಈ ಐ ಫೋಸ್ ಸಿಕಿದ್ದು,ಸಿಕ್ಕ ನಂತರ ಆ ಐಫೋನ್ ವರ್ಕ್ ಆಗುತ್ತಿದೆ ಎಂಬುದನ್ನು ಚೆಕ್ ಮಾಡುವ ವಿಡಿಯೋವನ್ನು ಮಾಡಿದ್ದಾನೆ.ಈ ವಿಡಿಯೋ ಈಗ ವೈರಲ್ ಆಗಿದ್ದು ,ಬೆನ್ನೆಟ್ ನನ್ನು ಅಲ್ಲಿನ‌ ಸ್ಥಳೀಯ ಟಿವಿ ಚಾನೆಲ್ ಸಂದರ್ಶನ ಮಾಡಿದಾಗ, ಎಡಿಸ್ಟೋ ನದಿಯ ಆಳದಲ್ಲಿ ಫೋನ್ ಸಿಕ್ಕಿದ್ದು ಇದಕ್ಕೆ ವಾಟರ್ ಪ್ರೂಫ್ ಹಾಕಲಾತ್ತು, ನಾವು‌ ಇದರ ಮಾಲೀಕನ ಬಗ್ಗೆ ಮಾಹಿತಿ ತಿಳಿಯಲು ಪ್ರಯತ್ನ ಪಟ್ಟೆವು ಆದ್ರೆ ಮೊಬೈಲ್ ಲಾಕ್ ಆಗಿದ್ದರಿಂದ ನಂತರ ಆ ಸೆಲ್ ಸಿಮ್ ಅನ್ನು ಇನ್ನೊಂದು ಮೊಬೈಲ್ ಗೆ ಹಾಕಿ ಆ ನಂತರ ಅವರನ್ನು ಸಂಪರ್ಕಿಸಿದೆವು ಅಂತ ಬೆನ್ನೆಟ್ ಹೇಳಿಕೊ‌ಂಡಿದ್ದಾನೆ. ಇನ್ನು 2018 ಜೂನ್ 19ರಂದು ಎರಿಕಾ ಬೆನ್ನೆಟ್ ತನ್ನ ಕುಟುಂಬದ ಜೊತೆ ಎಡಿಸ್ಟೋ ನದಿ ಪ್ರದೇಶಕ್ಕೆ ಪ್ರವಾಸ ಬಂದಾಗ ತನ್ನ ಮೊಬೈಲ್ ನೀರಿನೊಳಗೆ ಬಿದ್ದಿತ್ತು ಅಂತ ಹೇಳಿದ ಬೆನ್ನೆಟ್ 15 ತಿಂಗಳ ನಂತರವೂ ಫೋನ್ ವರ್ಕ್ ಆಗುತ್ತಿರುವುದನ್ನು ಕಂಡು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top