15ನೇ ಶತಮಾನದ ರಾಜನಾಗಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

ರಿಯಲ್‌ ಸ್ಟಾರ್‌ ಉಪೇಂದ್ರ ಇದೀಗ ರಾಜನಾಗಲು ಹೊರಟ್ಟಿದ್ದಾರೆ. ಹೌದು ಸದ್ಯ ಕಬ್ಜ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರೋ ಉಪೇಂದ್ರ ಈ ಬ್ಯೂಸಿ ಶೆಡ್ಯುಲ್‌ನಲ್ಲಿಯೇ ಐತಿಹಾಸಿಕ ಸಿನಿಮಾದ ಮಾಡಲು ಮುಂದಾಗಿದ್ದಾರೆ. ಈಗಾಗಲೇ ತಮ್ಮ 50 ನೇ ಸಿನಿಮಾವನ್ನು ತಾವೇ ನಿರ್ದೇಶನ ಮಾಡಿ ನಟಿಸೋದಕ್ಕೆ ಪ್ಲಾನ್‌ ಮಾಡಿಕೊಂಡಿರೋ ಉಪ್ಪಿ ಇದೀಗ ಐತಿಹಾಸಿಕ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಇದೀಗ ಗಾಂಧಿನಗರದಲ್ಲಿ ಓಡಾಡ್ತಿದೆ.

ಉಪೇಂದ್ರ ಇದುವರೆಗೂ ಯಾವುದೇ ಐತಿಹಾಸಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ, ಮೊದಲ ಬಾರಿಗೆ ಉಪ್ಪಿ ಐತಿಹಾಸಿಕ ಸಿನಿಮಾದಲ್ಲಿ ಕಾಣಿಸಿಕೊಳ್ತಾ ಇದ್ದು, ಮೊದಲ ಬಾರಿಗೆ ರಾಜನ ವೇಶ ತೊಡಲಿದ್ದಾರೆ. ಇನ್ನು ಉಪ್ಪಿಯನ್ನು ರಾಜನನ್ನಾಗಿ ಮಾಡ್ತಾ ಇರೋದು, ಐತಿಹಾಸಿಕ ಸಿನಿಮಾಗಳನ್ನು ಮಾಡುವಲ್ಲಿ ಚಾಣಾಕ್ಷನಾಗಿರೋ ನಿರ್ದೇಶನಕ ನಾಗಣ್ಣ, ಕುರುಕ್ಷೇತ್ರ ಸಿನಿಮಾದ ನಂತರ ಮತ್ತೊಂದು ಐತಿಹಾಸಿಕ ಸಿನಿಮಾ ಕೈಗೆತ್ತಿಕೊಂಡಿರೋ ನಾಗಣ್ಣ ಭಾರವಿ ಅವರ ಕಥೆಯ ಮೂಲದಿಂದ 15ನೇ ಶತಮಾನದ ರಾಜ ಕಥೆಯನ್ನು ತೆರೆ ಮೇಲೆ ತರೋ ಪ್ಲಾನ್‌ ಮಾಡಿಕೊಂಡಿದ್ದಾರಂತೆ, ಈಗಾಗಲೇ ಚಿತ್ರದ ಸ್ಕ್ರಿಪ್ಟ್‌ ವರ್ಕ್‌ನಲ್ಲಿ ತೊಡಗಿರೋ ನಾಗಣ್ಣ ಈ ಚಿತ್ರದಲ್ಲಿ ಉಪ್ಪಿಯನ್ನು 15ನೇ ಶತಮಾನದ ರಾಜನನ್ನಾಗಿ ತೋರಿಲು ತಯಾರಿ ನಡೆಸುತ್ತಿದ್ದಾರೆ.

ಇನ್ನು ಉಪ್ಪಿ ಮತ್ತು ನಾಗಣ್ಣ ಜೋಡಿ ಸ್ಯಾಂಡಲ್‌ವುಡ್‌ನಲ್ಲಿ ಹಿಟ್‌ ಜೋಡಿಯಾಗಿದ್ದು, ಈ ಹಿಂದೆ ಕುಟುಂಬ,ಗೌರಮ್ಮ,ದುಬೈ ಬಾಬು,ಕಠಾರಿವೀರ ಸುರಸುಂದರಾಗಿ ಸಿನಿಮಾ ಮೂಲಕ ಮೋಡಿ ಮಾಡಿದ್ರು, ಇದೀಗ ಐತಿಹಾಸಿಕ ಸಿನಿಮಾ ಮೂಲಕ ಮತ್ತೆ ಮೋಡಿ ಮಾಡಲು ಒಂದಾಗುತ್ತಿದ್ದು, ಈ ಸಿನಿಮಾ ತೆಲುಗು,ತಮಿಳು ಮತ್ತು ಹಿಂದಿ ಭಾಷೆಯಲ್ಲೂ ರೆಡಿಯಾಗಲಿದ್ಯಂತೆ. ಇನ್ನು ಈ ಚಿತ್ರಕ್ಕೆ ಎ ಸಿನಿಮಾಗೆ ಬಂಡವಾಳ ಹೂಡಿದ್ದ ಜಗನ್ನಾಥ್‌ ಎಂಬುವವರು ಈ ಐತಿಹಾಸಿಕ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.

ಇದುವರೆಗೂ ಉಪ್ಪಿ ಹೆಚ್‌ಟುಒ ಸಿನಿಮಾದಲ್ಲಿ ಒಂದು ಭಾಗದಲ್ಲಿ ಮಾತ್ರ ರಾಜ ಪಾತ್ರದಲ್ಲಿ ನೋಡಿದ್ದ ಅಭಿಮಾನಿಗಳು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಐತಿಹಾಸಿಕ ಸಿನಿಮಾ ಮೂಲಕ ರಾಜ ಪಾತ್ರದಲ್ಲಿ ಕಾಣಲಿದ್ದಾರೆ.

ಸದ್ಯ ಈ ಚಿತ್ರ ಮಾತುಕತೆ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಗಳು ಹೊರ ಬೀಳಬೇಕಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top