14 ವರ್ಷದ ಯುವ ಕ್ರಿಕೆಟಿಗನಿಗೆ IPLನಲ್ಲಿ ಅವಕಾಶ ನೀಡುವುದು ಸರಿಯೇ?

ಕ್ರಿಕೆಟ್ ಜಗತ್ತು ಅದ್ಭುತ ಕ್ರಿಕೆಟಿಗರನ್ನು ಕಂಡಿದೆ.. ವಿಶ್ವಶ್ರೇಷ್ಠ ಕ್ರಿಕೆಟಿಗರಾಗುವ ನಿಟ್ಟಿನಲ್ಲಿ ಯುವ ಕ್ರಿಕೆಟಿಗರ ನಡುವೆ ಕೂಡ ತೀವ್ರ ಪೈಪೋಟಿ ಇದೆ. ತಮ್ಮ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಮನದಾಸೆ. ಈಗ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಆಡಬೇಕು ಎನ್ನುವುದು ವಿಶ್ವದ ಬಹುತೇಕ ಎಲ್ಲಾ ಕ್ರಿಕೆಟಿಗರ ಹೆಬ್ಬಯಕೆ..ಆದರೆ, ಅದೃಷ್ಟ ಲಕ್ಷ್ಮಿ ಒಲಿಯುವುದು ಕೆಲವೇ ಕೆಲವು ಮಂದಿಗೆ ಮಾತ್ರ!
ಈ ಬಾರಿ ಐಪಿಎಲ್​ ಹರಾಜಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವವರಲ್ಲಿ ಇಬ್ಬರು ವಯಸ್ಸಿನ ವಿಷಯದಲ್ಲಿ ತುಂಬಾ ವಿಶೇಷ ಎನಿಸಿದ್ದಾರೆ. ಭಾರತದ 48 ವರ್ಷದ ಪ್ರವೀಣ್ ತಾಂಬೆ ಹರಾಜಿಗಿರುವ ಅತೀ ಹಿರಿಯ ಕ್ರಿಕೆಟಿಗರಾಗಿದ್ದರೆ, ಅಫ್ಘಾನಿಸ್ತಾನದ 14 ವರ್ಷದ ಕ್ರಿಕೆಟರ್ ನೂರ್ ಅಹ್ಮದ್ ಲಕನ್ವಾಲ್​ ಅತೀ ಕಿರಿಯ ಕ್ರಿಕೆಟಿಗ.
ನೂರ್ ಅಹ್ಮದ್ ಲಕನ್ವಾಲ್ ನಿಜಕ್ಕೂ ಅದ್ಭುತ ಪ್ರತಿಭೆ.. ಹೀಗಾಗಿಯೇ ಐಪಿಎಲ್ ಕದ ತಟ್ಟಲು ಸಾಧ್ಯವಾಗಿರೋದು ಅನ್ನೋದ್ರಲ್ಲಿ ನೋ ಡೌಟ್. ಆದರೆ ವಯಸ್ಸು ತುಂಬಾ ಚಿಕ್ಕದು. ಕ್ರಿಕೆಟಿಗೆ ದೈಹಿಕ ಬಲಾಡ್ಯತೆ ಮಾತ್ರ ಸಾಕಗಲ್ಲ. ಮಾನಸಿಕವಾಗಿಯೂ ಪ್ರಬಲರಾಗಿರಬೇಕು. ಹಿರಿಯರ ಜೊತೆ ಕಣಕ್ಕಿಳಿಯುವಾಗ ಮಾನಸಿಕವಾಗಿ ಗಟ್ಟಿ ಇರಬೇಕು. ಆಗ ಮಾತ್ರ ಆಟದ ಕಡೆ ಗಮನ ಕೇಂದ್ರೀಕರಿಸಲು ಸಾಧ್ಯ. ಒಪ್ಪಿಕೊಳ್ಳೋಣ… ಆತ ಗಟ್ಟಿಯಾಗಿದ್ದಾನೆಂದು.. ಆದರೆ, ಮಾನಿಸಕವಾಗಿ 14 ವರ್ಷದಲ್ಲಿ ಯಾವ ರೀತಿ ಮೆಚ್ಯೂರಿಟಿ ಇರುತ್ತೆ ಹೇಳಿ?

ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾ ಸೇರುವಾಗ 16ರ ಪೋರ.. ಅವರು ಮುಂದೆ ಕ್ರಿಕೆಟ್ ಜಗತ್ತನ್ನು ಆಳಿಲ್ಲವೇ ಎಂದು ಉದಾಹರಿಸಬಹುದು. ಆದರೆ, 14 ವರ್ಷಕ್ಕೆ ಆ ಮಟ್ಟಿನ ಮೆಚ್ಯುರಿಟಿ ಸಾಧ್ಯವಿಲ್ಲ ಎಂಬುದನ್ನು ಒಪ್ಪಲೇ ಬೇಕಲ್ಲವೇ?
ಒಂದ್ಸಲ ನೀವು ನಿಮ್ಮ 14ರ ಹರೆಯಕ್ಕೆ ವಾಪಸ್ಸಾಗಿ ಕಲ್ಪಿಸಿಕೊಳ್ಳಿ.. ನಿಮ್ಮ ಪ್ರೌಢತೆ ಹೇಗಿತ್ತು? ನೀವು ನಿಮ್ಮ ಮನೆಯ ಸುತ್ತಮುತ್ತ ಹಿರಿಯರ ಜೊತೆ ಕ್ರಿಕೆಟ್ ಆಡುವಾಗ ಟೆನ್ನಿಸ್​ ಬಾಲ್​ ಎಸೆತಗಳನ್ನೇ ಎದುರಿಸಲು ಎಷ್ಟು ಕಷ್ಟಪಡ್ತಿದ್ರಿ.. ಅಲ್ಲವೇ.. ಅಪ್ಘಾನ್ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡು ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಆಟಗಾರ, ಐಪಿಎಲ್ ನಲ್ಲಿ ಆಡಲಿ ಬಿಡಿ ಎಂದು ಹೇಳುವುದಾದರೆ, ಭಾರತ ಕ್ರಿಕೆಟ್ ಮುಂದುವರೆದಿದೆ. ಐಪಿಎಲ್​ನಲ್ಲಿ ಇಷ್ಟು ಚಿಕ್ಕ ಪೋರನಿಗೆ ಅವಕಾಶ ಕೊಡುವ ಬಗ್ಗೆ ಯೋಚಿಸುವುದು ಎಷ್ಟು ಸರಿ ಎನಿಸುತ್ತದೆ. ಏಕೆಂದರೆ ಆತ ಮುಂದೆ ವಿಶ್ವಶ್ರೇಷ್ಠ ಆಟಗಾರನಾಗಬಹುದು. ಆ ನಿಟ್ಟಿನಲ್ಲಿ ಆತನಿಗೆ ಇನ್ನೂ ಹೆಚ್ಚಿನ ಅವಕಾಶಗಳು, ಸಮಯ ಎರಡು ಕೂಡ ಇದೆ. ಇಷ್ಟೊಂದು ಅವಸರದಲ್ಲಿ ಮಣೆ ಹಾಕಿ..
ಆಕಸ್ಮಾತ್ ವಿಶ್ವ ಶ್ರೇಷ್ಟ ವೇಗದ ಬೌಲರ್ ಗಳನ್ನು ಎದುರಿಸುವಾಗ ಅದೂ ಐಪಿ ಎಲ್ ನಂತಹ ಕಾಂಪಿಟಷನ್ ನಲ್ಲಿ ಕಿಕ್ಕಿರಿದು ತುಂಬುವ ಸ್ಟೇಡಿಯಂನಲ್ಲಿ, ವೇಗದ ಬೌಲರ್ ಗಳನ್ನು ಎದುರಿಸುವಾಗ ಏನಾದರೂ ಆದ್ರೆ ಅದಕ್ಕೆ ಯಾರು ಜವಬ್ದಾರಿ,
ಆಕಸ್ಮಾತ್ ಆತ ಮಾನಸಿಕವಾಗಿ ಪೈಪೋಟಿ ನಡೆಸುವುದು ಕಷ್ಟವಾಗಿ, ಫೇಲ್ಯೂರ್ ಆದ್ರೆ, ಭಯ ಅಥವಾ ಡಿಪ್ರೆಷನ್ ನಿಂದ ಮೆಂಟಲಿ, ಫಿಸಕಲಿ ತೊಂದರೆಯಾದ್ರೆ ಯಾರು ಹೊಣೆ ಅನ್ನುವ ದಿಕ್ಕಿನಲ್ಲೂ ಯೋಚಿಸಬೇಕಲ್ಲವೇ?

ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ಕಮೆಂಟ್ ಮಾಡಿ ತಿಳಿಸಿ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top