13 ವರ್ಷದ ವನವಾಸದಿಂದ ಡೆಲ್ಲಿ ತಂಡಕ್ಕೆ ಮುಕ್ತಿ

ಐಪಿಎಲ್‌ 2020ಯಲ್ಲಿ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್‌ ಸಬನ್‌ರೈಸರ್ಸ್‌ ಹೈದರಬಾದ್‌ ವಿರುದ್ಧ ಗೆಲುವನ್ನು ಸಾಧಿಸೋ ಮೂಲಕ ಫೈನಲ್‌ ಪ್ರವೇಶ ಮಾಡಿದೆ. ನಾಳೆ ನಡೆಯಲಿರೋ ಫೈನಲ್‌ ಪ್ರವೇಶದಲ್ಲಿ ಮುಂಬೈ ವಿರುದ್ಧ ಡೆಲ್ಲಿ ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್‌ ಪಂದ್ಯವನ್ನು ಆಡಲಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ತಂಡದಲ್ಲಿ ಬದಲಾವಣೆ ಮಾಡಿಕೊಂಡು ಶಿಖರ್ ಧವನ್‌ ಜೊತೆಯಲ್ಲಿ ಸ್ಟೈನಿಸ್‌ ಅವರನ್ನು ಆರಂಭಿಕರಾಗಿ ಕಳಿಸೋ ಮೂಲಕ ಗೆಲುವಿನ ಮೊದಲ ಮೆಟ್ಟಿಲನ್ನು ಏರಿಯಾಗಿದ್ದು, ಶಿಖರ್‌ ಮತ್ತು ಸ್ಟೈನಿಸ್‌ ಅವರ ಉತ್ತಮ ಜೊತೆಯಾಟದ ಕಾಣಿಕೆಯಿಂದ ಡೆಲ್ಲಿ 189ರನ್‌ ಗಳಿಸೋ ಮೂಲಕ ಹೈದರಬಾದ್‌ ತಂಡಕ್ಕೆ ದೊಡ್ಡ ಮೊತ್ತದ ಸವಾಲನ್ನು ನೀಡಿತು, ಇನ್ನು ಹೈದರಬಾದ್‌ ಆರಂಭಿಕವಾಗಿ ವಾರ್ನರ್‌,ಪ್ರಿಯಾನ್‌ ಗರ್ಗ್‌, ಮನೀಷ್‌ ಪಾಂಡೆ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು, ಇನ್ನು ಕೇನ್‌ ವಿಲಿಯಮ್‌ ಉತ್ತಮ ಆಟ ನೀಡಿದ್ರ, ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಡವಿದ್ರು, ಇದರೊಂದಿಗೆ ೧೭೨ರನ್‌ಗಳಿಸುವ ಮೂಲಕ ಸೋಲನುಭವಿಸಬೇಕಾಯ್ತು,

ಡೆಲ್ಲಿ ತಂಡದ ಆಟಗಾರರ ಉತ್ತಮ ಪ್ರದರ್ಶನಿಂದ 2020ರ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್‌ ಫೈನಲ್‌ ಪ್ರವೇಶ ಮಾಡಿದ್ದು ಸತತ 13 ವರ್ಷಗಳ ವನವಾಸಕ್ಕೆ ಫುಲ್‌ ಸ್ಟಾಪ್‌ ಇಟ್ಟಿದೆ. ಐಪಿಎಲ್‌ ಶುರುವಾದಾಗಿನಿಂದಲೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದ ಡೆಲ್ಲಿ ಈ ಬಾರಿ ಐಪಿಎಲ್‌ ಗೆಲ್ಲುವ ಫೇವರೆಟ್‌ ತಂಡಗಳಲ್ಲಿ ಒಂದಾಗಿತ್ತು, ಇನ್ನು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸೋ ಮೂಲಕ ಈ ಬಾರಿ ಕಪ್‌ ಸನಿಹಕ್ಕೆ ಬಂದು ನಿಂತಿದ್ದರು. ಇದೀಗ 13 ವರ್ಷಗಳ ನಂತರ ಮೊದಲ ಬಾರಿಗೆ ಶ್ರೇಯಸ್ಸ್‌ ಐಯ್ಯರ್‌ ಸಾರಥ್ಯದಲ್ಲಿ ಡೆಲ್ಲಿ ಫೈನಲ್‌ ಪ್ರವೇಶ ಮಾಡಿದ್ದು, ಈ ಬಗ್ಗೆ ನಾಯಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಟೂರ್ನಿಯಲ್ಲಿ ಡೆಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ. ಇದರ ಹೊರತಾಗಿಯೂ ಒಗ್ಗಟ್ಟಾಗಿ ಪ್ರದರ್ಶನ ನೀಡಿದ್ದು ಸಂತಸ ತಂದಿದೆ. ಫೈನಲ್‌ಗೆ ಪ್ರವೇಶ ಪಡೆದಿರುವುದು ಇನ್ನೊಂದು ಕಾಣದ ಅನುಭವ ನೀಡುತ್ತಿದೆ.ಪ್ರತಿಯೊಬ್ಬರು ವೈಯುಕ್ತಿ ಕೊಡುಗೆ ತುಂಬಾ ಸಂತಸವನ್ನು ನೀಡಿದೆ ಎಂದು ಹೇಳುವ ಮೂಲಕ ಫೈಲನ್‌ ಪ್ರವೇಶದ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಐಪಿಎಲ್‌ ಮೊದಲ ಆವೃತ್ತಿಯಿಂದ ಇಲ್ಲಿಯ ವರೆಗೂ ಡೆಲ್ಲಿ ತಂಡ ಫೈನಲ್‌ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ ಅನ್ನೋ ಹಣೆ ಪಟ್ಟಿಯನ್ನು ತೆಗೆದುಹಾಕಿಕೊಂಡಿದ್ದು, ಶ್ರೇಯಸ್ಸ್‌ ಐಯ್ಯರ್‌ ಸಾರಥ್ಯದಲ್ಲಿ ಈ ಬಾರಿಯ ಚೊಚ್ಚಲ ಐಪಿಎಲ್‌ ಕಪ್‌ ಗೆಲ್ಲಲಿದ್ಯಾ ಕಾದುನೋಡ ಬೇಕು.

ನಿಮ್ಮ ಪ್ರಕಾರ ನಾಳಿನ ಪಂದ್ಯದಲ್ಲಿ ಡೆಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸೋ ಮೂಲಕ ಚೊಚ್ಚಲ ಕಪ್‌ ಗೆಲ್ಲಲಿದ್ಯಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top