11 ಸಾವಿರ ಲೀಟರ್ ಮದ್ಯದ ಮೇಲೆ ರೋಡ್ ರೋಲರ್ ಹತ್ತಿಸಿದ ಅಧಿಕಾರಿ

11 ಸಾವಿರ ಲೀಟರ್ ಮದ್ಯದ ಮೇಲೆ ಅಧಿಕಾರಿ ರೋಡ್ ರೋಲರ್ ಹತ್ತಿಸಿರೋ ಘಟನೆ ಬಿಹಾದ ಪಾಟ್ನಾದಲ್ಲಿ ನಡೆದಿದೆ. ಬಿಹಾರದಲ್ಲಿ ವಿಧಾನ ಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯದ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉತ್ತರ ಪ್ರದೇಶದಿಂದ ಈ ಮದ್ಯ ಬಿಹಾರಕ್ಕೆ ಅಕ್ರಮವಾಗಿ ಬರುತ್ತಿದ್ದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಬಿಹಾರದ ಕೈಮೂರ್ ಎಂಬಲ್ಲಿ ಮದ್ಯ ಹಂಚಲು ತರಲಾಗುತ್ತಿದೆ ಅನ್ನೋ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಮದ್ಯವನ್ನು ವಶಕ್ಕೆ ಪಡಿಸಿಕೊಂಡಿದ್ದರು. ಇನ್ನು ಹಲವೆಡೆ ಮದ್ಯವನ್ನು ವಶಪಡಿಸಿಕೊಂಡು ಅವುಗಳನ್ನು ಒಂದೆಡೆ ಸೇರಿಸಿ ರೋಡ್ ರೋಲರ್ ಮೂಲಕ ನಾಶ ಮಾಡಲಾಗಿದೆ. ಇನ್ನು ಈ ಫೋಟೋಗಳು ಸೋಶೀಯಲ್ ಮಿಡಿಯಾದಲ್ಲಿ ವೈರಲ್ ಕೂಡ ಆಗಿದೆ. ಇನ್ನು ಚುನಾವಣಾ ಅಧಿಕಾರಿಗಳು ಬಿಹಾರಕ್ಕೆ ಸಂಪರ್ಕ ಹೊಂದುವ ರಾಜ್ಯದ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಚುನಾವಣೆ ಸಂಧರ್ಬದಲ್ಲಿ ಯಾರೇ ತಪ್ಪು ಮಾಡಿದ್ರು ನಿರ್ಧಕ್ಷಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top