104 ವರ್ಷ ವಯಸ್ಸಾಗಿದ್ರು, ನೋ ಶುಗರ್‌..ನೋ ಬಿಪಿ.ಈ ಜೋಡಿಗೆ..

ಆಧುನಿಕ ಯುಗದಲ್ಲಿ ನಾವು ತಿನ್ನುವ ಆಹಾರ ಪದ್ಧತಿ, ನಮ್ಮ ಜೀವನ ಶೈಲಿಗೆ ವಯಸ್ಸಲ್ಲದ ವಯಸ್ಸಲ್ಲಿ ಇರೋ ಬರೋ ಕಾಯಿಲೆಗಳು ಬಂದು ದೇಹದಲ್ಲಿ ಹೊಕ್ಕಿ ಬಿಟ್ಟಿರುತ್ತವೆ, ಅದರಲ್ಲೂ ಬಿಪಿ, ಶುಗರ್‌ ಅದ್ಯಾವಗ ಬಂದು ಒಕ್ಕರಿಕೊಂಡಿರುತ್ತದೆಯೋ ಗೊತ್ತೇ ಆಗೋದಿಲ್ಲ, ಆದ್ರೆ ಕಲಬುರಗಿಯ ಈ ದಂಪತಿಗಳಿಗೆ 104 ವರ್ಷವಾಗಿದ್ರು ಇವರಿಗೆ ಯಾವುದೇ ಬಿಪಿ. ಶುಗರ್‌ ಇಲ್ಲ, ಇನ್ನು ಯುವಕ ರೀತಿ ಮನೆಯ ಎಲ್ಲಾ ಕೆಲಸಗಳನ್ನು ಸಹ ಮಾಡುತ್ತಾರೆ.

ಅಫ್ಜಲಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದ ನಿವಾಸಿಯಾದ ಗುರುಲಿಂಗಪ್ಪ ಅವರಿಗೆ ಈಗ 104 ವರ್ಷದ ವ್ಯಕ್ತಿಯಾಗಿದ್ದು, ಈಗಲೂ ಅವ್ರು ಚಿರ ಯುವಕರ ರೀತಿ ಸದಾ ಕ್ರಿಯಾಶೀಲಾರಾಗಿರುತ್ತಾರೆ.

1917ರಲ್ಲಿ ಜನಿಸಿದ್ದ ಇವರು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದರಂತೆ, ಅಷ್ಟೇ ಅಲ್ಲದೇ ಹೈದರಬಾದ್ ನಿಜಾಮನ ಹಿಡಿತದಲ್ಲಿದ್ದ ಹೈದರಬಾದ್‌ ಕರ್ನಾಟಕದ ಸ್ವಾತಂತ್ರ್ಯಕ್ಕಾಗಿ ನಿಜಾಮನ ವಿರುದ್ಧ ಹೋರಾಡಿ ಮೂರು ತಿಂಗಳು ಸೆರೆವಾಸ ಅನುಭವಿಸಿದ್ದಾರೆ.104 ವರ್ಷ ವಯಸ್ಸಾಗಿದ್ರು ಈಗಲೂ ಕಣ್ಣು ಚೆನ್ನಾಗಿ ಕಾಣಿಸುತ್ತದೆ. ಈಗಲೂ ಮನೆಯಲ್ಲಿ ತಮ್ಮ ಕೆಲಸದ ಜೊತೆಯಲ್ಲಿ ಮನೆಯವರಿಗೆ ಕೆಲಸದಲ್ಲಿ ಸಹಾಯವಾಗುತ್ತಾರೆ. ಇನ್ನು ಇವರ ಪತ್ನಿಗೆ 85 ವರ್ಷ ವಯಸ್ಸಾಗಿದ್ದು ಅವರಿಗೂ ಕೂಡ ಬಿಪಿ,ಶುಗರ್‌ ಇಲ್ಲದೇ ಪ್ರತಿ ದಿನ ಮನೆಯ ಎಲ್ಲಾ ಕೆಲಸಗಳಲ್ಲೂ ಭಾಗಿಯಾಗುತ್ತಾರೆ.

ಇವರಿಗೆ ಆರೋಗ್ಯದ ಗುಟ್ಟೇನು ಅಂತ ಕೇಳಿದ್ರೆ, ಪತಿದಿನ ಶ್ರೀಶೈಲ ಮಲ್ಲಿಕಾರ್ಜುನ ದೇವರ ನಾಮ ಜಪಿಸುತ್ತೇನೆ, ಬರೆಯುತ್ತೇನೆ ಕಳೆದ 10 ವರ್ಷಗಳಲ್ಲಿ 22 ಲಕ್ಷ ಬಾರಿ ದೇವರ ಹೆಸರು ಬರೆದಿದ್ದೇನೆ ಅಂತ ಹೇಳುತ್ತಾರೆ. ಇನ್ನು ಕನ್ನಡ ಮಾತನಾಡಲು ಬರುತ್ತದೆ, ಬರೆಯಲು ಬರೋದಿಲ್ಲ, ಮರಾಠಿಯಲ್ಲಿ 6ನೇ ತರಗತಿ ವರೆಗೆ ಓದಿರೋ ಗುರುಲಿಂಗಪ್ಪ ಅವರಿಗೆ, ಹಿಂದಿ ಮರಾಠಿ,ಉರ್ದು ಭಾಷೆಯನ್ನು ಬರೆಯುತ್ತಾರೆ. ಗುರುಲಿಂಗಪ್ಪ ಮತ್ತು ಗಜಾಬಾಯಿ ದೇಶಮುಖ್‌ ದಂಪತಿಗಳಿಗೆ ಮೂರು ಗಂಡು ಮಕ್ಕಳು , ಆರು ಹೆಣ್ಣುಮಕ್ಕಳಿದ್ದು, 27 ಜನ ಮೊಮ್ಮಕ್ಕಳಿದ್ದಾರೆ. ಸದಾ ಲವಲವಿಕೆಯಿಂದ ಇರೋ ಈ ದಂಪತಿಗೆ ಪ್ರತಿ ದಿನ ಊಟಕ್ಕೆ ರೊಟ್ಟಿ ಇರಲೇ ಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top