100 ರಾತ್ರಿ ಚೆನ್ನಾಗಿ ಮಲಗಿ ₹1 ಲಕ್ಷ ಸಂಭಾವನೆ ಪಡೆಯಿರಿ

ಈಗಿನ ಪರಿಸ್ಥಿತಿಯಲ್ಲಿ ಕೆಲಸ ಸಿಗುವುದೇ ಕಷ್ಟ, ಅದು ಸಿಕ್ಕರೂ ತಿಂಗಳ ಖರ್ಚಿಗೆ ಆಗಲ್ಲ, ಇದೇ ಟೆನ್ಷನ್ ನಲ್ಲಿ ಸರಿಯಾಗಿ ನಿದ್ದೇನೆ ಬರಲ್ಲ, ಸದ್ಯಕ್ಕೆ ಆ ಟೆನ್ಷನ್ ಬಿಟ್ಟು ಈ ವಿಡಿಯೋ ನೋಡಿ

ನಿಮಗೂ ನೂರು ರಾತ್ರಿ ಮಲಗುವುದಕ್ಕೆ ಒಂದು ಲಕ್ಷ ಸಿಗಬಹುದು, ಸೂಪರ್ ಆಫರ್ ಅಲ್ವಾ,

ಹೌದು ಬೆಂಗಳೂರಿನ ಸ್ಟಾರ್ಟ್‌ಅಪ್‌ ಕಂಪನಿಯೊಂದು ನೀಡುತ್ತಿರುವ ಅದ್ಭುತ ಅವಕಾಶ 100 ರಾತ್ರಿ ಚೆನ್ನಾಗಿ ಮಲಗಿ ₹1 ಲಕ್ಷ ಸಂಭಾವನೆ ಪಡೆಯಿರಿ. ಅಯ್ಯೋ ದೇವರೆ ರಾತ್ರಿಯೆಲ್ಲಾ ಜಾಗರಣೆ ಮಾಡಿ ಕೆಲಸ ಮಾಡಿದರೇನೆ ಸರಿಯಾಗಿ ಸಂಬಳ ಸಿಗಲ್ಲ ಮಲಗುವುದಕ್ಕೆ ಸಂಬಳ ಕೊಡುತ್ತಾರ ಎಂದು ಇದೆಲ್ಲಾ ಜೋಕ್ ಅನ್ಕೋಬೇಡಿ, ಇದು 100% ನಿಜ, ಪ್ರತಿ ರಾತ್ರಿ 9 ಗಂಟೆ ಚೆನ್ನಾಗಿ ಮಲಗಿ ಆರೋಗ್ಯದಿಂದಿರಿ ಹಾಗೂ ಒಂದು ಲಕ್ಷ ಗಳಿಸಿ ಎನ್ನುವ ಅವಕಾಶವನ್ನು ವೇಕ್‌ಫಿಟ್‌ ಸ್ಲೀಪ್‌ ಸಲ್ಯೂಷನ್‌ ಕಂಪನಿ ಒದಗಿಸುತ್ತಿದೆ.

ಕಂಪನಿಯ ಹೊಸ ಪ್ರಾಜೆಕ್ಟ್‌ಗಾಗಿ ‘ಸ್ಲೀಪ್‌ ಇಂಟರ್ನ್‌ಷಿಪ್‌’ಗೆ ಆಹ್ವಾನಿಸಲಾಗಿದೆ. 100 ದಿನಗಳ ಕಾಲ 9 ತಾಸು ನಿದ್ದೆ ಮಾಡುವುದೇ ನಿಮ್ಮ ಕೆಲಸ. ಇದಕ್ಕಾಗಿ ಕಂಪನಿಯೂ ಡ್ರೆಸ್‌ಕೋಡ್‌ ಸಹ ಮಾಡಿದೆ. ಇಂಟರ್ನಿ ಪೈಜಾಮಾ ಹಾಕಿಕೊಂಡೆ ಮಲಗಬೇಕು. ‘ಮನುಷ್ಯನ ಮಲಗುವ ಹವ್ಯಾಸ ಹಾಗೂ ಅದರಿಂದ ಅವರ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡುವುದು ನಮ್ಮ ಕಂಪನಿಯ ಉದ್ದೇಶ,’ ಎಂದು ವೇಕ್‍ಫಿಟ್ ಕಂಪನಿಯ ನಿರ್ದೇಶಕ ಹಾಗೂ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ತಿಳಿಸಿದ್ದಾರೆ.

‘ಇಂಟರ್ನಿಗಳು ಮಲಗುವ ರೀತಿಯನ್ನು ಕಂಪನಿ ಗಮನಿಸುತ್ತದೆ. ಅಲ್ಲದೆ ಸಮಾಲೋಚನಾ ಸೆಷನ್ಸ್ ಹಾಗೂ ನಿದ್ರೆಯ ಜಾಡನ್ನು ವೀಕ್ಷಿಸಲಾಗುತ್ತದೆ. ಇದರಿಂದ ಇದರಲ್ಲಿ ಪಾಲ್ಗೊಳ್ಳುವವರು `ವೇಕ್‌ಫಿಟ್‌’ ಹಾಸಿಗೆಗಳನ್ನು ಬಳಸುವ ಮೊದಲು ಹಾಗೂ ನಂತರ ಅವರು ನಿದ್ರೆಯ ಅನುಭವಗಳನ್ನು ತಿಳಿಯುವುದಕ್ಕಾಗಿ ಹೀಗೆ ಮಾಡಲಾಗುತ್ತಿದೆ,’ ಎಂದು ಚೈತನ್ಯ ರಾಮಲಿಂಗೇಗೌಡ ತಿಳಿಸಿದ್ದಾರೆ.

ವೇಕ್‌ಫಿಟ್‌ ಕಂಪನಿಯು ಹಾಸಿಗೆ ಮತ್ತು ಮಂಚವನ್ನು ತಯಾರಿಸುವ ಕಂಪನಿಯಾಗಿದೆ. ತನ್ನ ಗ್ರಾಹಕರಿಗೆ ಅದ್ಭುತ ಒಳ್ಳೆಯ ಹಾಸಿಗೆ ನೀಡಲು ಇದು ಸಹಕಾರಿ ಹಾಗೂ ಇದರಿಂದ ಸರಿಯಾದ ಮಾಹಿತಿಯು ಲಭ್ಯವಾಗಲಿದೆ…
ಹಾಗೆಯೇ ಬೆಂಗಳೂರಿನ ಟೆನ್ಷನ್ ಲೈಫ್ ಕೆಲಸದ ಒತ್ತಡದ ನಡುವೆಯೂ 9 ಗಂಟೆ ಕಣ್ತುಂಬ ನಿದ್ದೆ ಮಾಡ್ತಾರೆ ಅಂದರೆ ಇದರಿಂದ ಒಳ್ಳೆಯ ಪಬ್ಲಿಸಿಟಿಯೂ ಸಿಗುತ್ತೆ ಅಲ್ಲವೆ, ಇದಕ್ಕೆ ನೀವೂ ಟ್ರೈ ಮಾಡಬಹುದು ಆದರೆ ೨೫ ವರ್ಷ ಮೇಲ್ಪಟವರಾಗಿರಬೇಕು, ನಿಮ್ಮ ಈಗಿನ ಕೆಲಸ ಮಾಡುತ್ತಲೇ ಕೇವಲ ರಾತ್ರಿ ಸಮಯದಲ್ಲಿ ಇವರ ಹಾಸಿಗೆಯಲ್ಲಿ ಮಲಗಬೇಕಷ್ಟೆ…

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top