10 ವರ್ಷದಲ್ಲಿ 8 ಮದುವೆಯಾದ ಮಹಿಳೆಗೆ ಅಜ್ಜ,ಅಂಕಲ್‌ಗಳೇ ಟಾರ್ಗೆಟ್‌..!

ಹಿರಿಯ ನಾಗರಿಕರನ್ನು ಟಾರ್ಗೆಟ್‌ ಮಾಡಿ ೧೦ ವರ್ಷದಲ್ಲಿ ೮ ಮದುವೆಯಾದ ಮಹಿಳೆಯೊಬ್ಬಳ ಕಥೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ.

ಮೋನಿಕಾ ಮಲಿಕ್‌ ಈ ರೀತಿ ಮದುವೆಯಾದ ಯುವತಿ ಎಂದು ಗುರುತಿಸಲಾಗಿದೆ. ಇತ್ತಿಚೆಗೆ ಮೋನಿಕಾ 66ವರ್ಷದ ಗುತ್ತಿಗೆದಾರನನ್ನು ಮದುವೆಯಾಗಿ ಆತನಿಗೆ ಮೋಸ ಮಾಡಿದ್ದಾಳೆ. ಗುತ್ತಿಗೆದಾರ ಜುಗಲ್‌ ಕಿಶೋರ್‌ಗೆ ಕಳೆದ ವರ್ಷ ತನ್ನ ಪತ್ನಿ ನಿಧನ ಹೊಂದಿದ್ದಳು, ಇನ್ನು ಮಗ ಕೂಡ ಬೇರೆ ಮನೆಮಾಡಿಕೊಂಡು ವಾಸವಾಗಿದ್ದು, ಕಿಶೋರ್‌ಗೆ ಒಂಟಿತನ ಕಾಡುತ್ತಿದ್ದರಿಂದ ಖನ್ನಾ ವಿವಾಹ ಕೇಂದ್ರದಲ್ಲಿ ಜಾಹೀರಾತು ನೋಡಿದ್ದಾನೆ.

ಇಲ್ಲಿ ವಿಚ್ಛೇದಿತ ಮತ್ತು ಹಿರಿಯ ನಾಗರಿಕರಿಗೆ ವಧು-ವರ ಹುಡುಕಿಕೊಡಲಾಗುವುದು ಎಂದು ಹೇಳಲಾಗಿತ್ತು. ಇದರಿಂದಾಗಿ ಕಿಶೋರ್‌ ಭೇಟಿಕೊಟ್ಟು ವಿಚಾರಿಸಿದ್ದಾನೆ. ಈ ವೇಳೆ ಮಾಲೀಕ ಮೋನಿಕಾ ಮಲಿಕ್‌ನನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ಕಿಶೋರ್‌ ಮತ್ತು ಮೋನಿಕಾ ಕೆಲವು ವಾರಗಳ ಕಾಲ ಜೊತೆ ಮಾತುಕತೆ ನಡೆಸಿ ನಂತರ ಮದುವೆಯಾಗಲು ಒಪ್ಪಿದ್ದಾರೆ.ಆಗಸ್ಟ್‌ 2019ರಂದು ವಿವಾಹವಾಗಿದ್ದಾರೆ. ಕಿಶೋರ್‌ ನಿವಾಸದಲ್ಲಿ ಇಬ್ಬರು ವಾಸವಾಗಿದ್ದು, ಮೋನಿಕ ಎರಡು ವಾರಗಳು ಕಳೆದ ನಂತರ ಕಿಶೋರ್‌ ಬಳಿ ಇದ್ದ 15 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ ಎಂದು ಕಿಶೋರ್‌ ಆರೋಪಿಸಿದ್ದಾರೆ. ನಂತರ ಕಿಶೋರ್‌ ಏಜೆನ್ಸಿ ಬಳಿ ಹೋದಾಗ ಮಾಲೀಕರು ಕಿಶೋರ್‌ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಇದಾದ ಸ್ವಲ್ಪ ಸಮಯದ ಬಳಿಗೆ ಕಿಶೋರ್‌ಗೆ ಮೋನಿಕ ಮಾಜಿ ಪತಿ ಪರಿಚಯವಾಗಿದ್ದು, ಆತ ಕೂಡ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಕೊನೆಗೆ ಕಿಶೋರ್‌ ಪೊಲೀಸ್‌ ಠಾಣೆಗೆ ಹೋಗಿ ಮೋನಿಕ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಮೋನಿಕ ಕಳೆದ 10 ವರ್ಷಗಳಲ್ಲಿ 8 ಮದುವೆಯಾಗಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ. ಮೋನಿಕ ಮದುವೆಯಾದ ಕೆಲವು ದಿನಗಳಲ್ಲಿ ಹಣ ಮತ್ತು ಒಡವೆಗಳ ಜೊತೆ ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ಪೊಲೀಸರು ಮೋನಿಕ ಮತ್ತು ಕುಟುಂಬ ಹಾಗೂ ಏಜೆನ್ಸಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top