10 ತಿಂಗಳ ಮಗಳ ಮೇಳೆ ಅತ್ಯಾಚಾರವೆಸಗಿದ ಪಾಪಿ ತಂದೆ..

10 ತಿಂಗಳ ಮಗುವಿನ ಮೇಲೆ ಪಾಪಿ ತಂದೆಯೇ ಅತ್ಯಾಚಾರ ಎಸಗಿರೋ ಘಟನೆ ಅಮೆರಿಕಾದ ಪೆನ್ಸಿಲ್ವೇನಿಯದಲ್ಲಿ ನಡೆದಿದೆ. 29 ವರ್ಷದ ವ್ಯಕ್ತಿ ತನ್ನ ಮಗುವನ್ನು ನೋಡಿಕೊಳ್ಳುತ್ತಿದ್ದ ವೇಳೆ ಲೈಗಿಂಕ ದೌರ್ಜನ್ಯವನ್ನು ಎಸಗಿದ್ದಾನೆ. ಇದರ ಪರಿಣಾಮ ಶಿಶುವಿನ ಖಾಸಗಿ ಅಂಗಕ್ಕೆ ಗಾಯವಾಗಿದ್ದು, ರಕ್ತಸ್ತಾವವಾಗಿದೆ.

ಅಲ್ಲದೇ ಮಗು ಉಸಿರಾಡುವುದನ್ನು ನಿಲ್ಲಿಸಿದೆ.ಈ ವೇಳೆ ಪಾಪಿ ತಂದೆ ಆಸ್ಪತ್ರೆಗೆ ಅಥವಾ ತುರ್ತು ಸೇವೆ ಫೋನ್‌ ಮಾಡದೇ ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದಾನೆ. ಮಗುವಿನ ಉಸಿರಾಟ ನಿಂತರೇ ಏನು ಮಾಡಬೇಕು..? ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಯಾವ ದಾರಿಯೂ ಕಾಣದೇ ಆತ ತುರ್ತು ಸೇವೆಗೆ ಕರೆಮಾಡಿದ್ದಾನೆ.

ಆ ವೇಳೆಗೆ ಮಗು ಮೃತಪಟ್ಟಿತ್ತು, ಪೊಲೀಸರು ಆಪಾರ್ಟ್‌ಮೆಂಟಿನಲ್ಲಿ ಪರಿಶೀಲನೆ ನಡೆಸಿದಾಗ ,ರಕ್ತ ಸಿಕ್ತವಾದ ಡೈಪರ್‌ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಖಾಸಗಿ ಅಂಗಕ್ಕೆ ಗಂಭೀರ ಗಾಯಗಳಾಗಿದ್ದು ಅತ್ಯಾಚಾರ ನಡೆದಿರುವುದು ಸ್ಪಷ್ಟವಾಗಿ.

ಅಲ್ಲದೇ ಮಗುವಿನ ತಲೆಯಲ್ಲಿ ಗಾಯಗಳಾಗಿದ್ದು ಗೊತ್ತಾಗಿದೆ. ಪಾಪಿ ತಂದೆ ಮುಂಚೆಯೇ ತುರ್ತು ಸೇವೆಗೆ ಕರೆಮಾಡುವ ಬದಲು ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಇಬ್ಬರು ಮಹಿಳೆಯರ ಜೊತೆ ಮಾತುಕತೆ ನಡೆಸಿದ್ದಾನೆ. ಆದ್ರೆ ಆ ಮಹಿಳೆಯರ ಬಳಿ ಮಗುವಿನ ವಿಷಯವನ್ನು ಹೇಳದೆ ಮುಚ್ಚಿಟ್ಟಿದ್ದ, ಸದ್ಯ ವಿಚಾರಣೆ ನಡೆಸುತ್ತಿರೋ ಪೊಲೀಸರು ಪಾಪಿ ತಂದೆಯನ್ನು ಬಂಧಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top