
ಸ್ಯಾಂಡಲ್ವುಡ್ನಲ್ಲಿ ಇದೀಗ ಹೊಸ ನಿರ್ಮಾಪಕನ ಎಂಟ್ರಿಯಾಗಿದೆ. ಹೌದು ಆದ್ರೆ ಈ ಬಾರಿ ಎಂಟ್ರಿ ಕೊಟ್ಟಿರೋದು ಯಾರು ಬ್ಯೂಸಿನೆಸ್ ಮ್ಯಾನ್ ಅಲ್ಲ ಬದಲಿಗೆ ಡೈರೆಕ್ಟರ್, ಹೌದು ಸ್ಯಾಂಡಲ್ವುಡ್ನಲ್ಲಿ ಹಿಟ್ ಮೂವಿಗಳನ್ನು ನೀಡಿರೋ ಪವನ್ ಒಡೆಯರ್ ಇದೀಗ ನಿರ್ಮಾಪಕರಾಗುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ʻಒಡೆಯರ್ ಮೂವಿಸ್ʼ ನಿರ್ಮಾಣ ಸಂಸ್ಥೆಯನ್ನು ಶುರುಮಾಡೋ ಮೂಲಕ ಮೊದಲ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದಾರೆ.
ಪವನ್ ಒಡೆಯರ್ ನಿರ್ಮಾದಲ್ಲಿ ಬರ್ತಾ ಇರೋ ಚಿತ್ರಕ್ಕೆ ಈಗಾಗಲೇ ಟೈಟಲ್ ಮತ್ತು ನಿರ್ದೇಶಕರು ಫೈನಲ್ ಆಗಿದ್ದು, ಚಿತ್ರಕ್ಕೆ ʻಡೊಳ್ಳುʼ ಅನ್ನೋ ಟೈಟಲ್ ಇಟ್ಟಿದ್ದು, ಈ ಚಿತ್ರವನ್ನು ಸಾಗರ್ ಪುರಾಣಿಕ್ ಅನ್ನೋರು ಡೈರೆಕ್ಷನ್ ಮಾಡುತ್ತಿದ್ದಾರೆ.
ಈ ಹಿಂದೆ ಸಾಗರ್ ಪುರಾಣಿಕ್ ಕಿರುಚಿತ್ರ ನಿರ್ಮಾಣ ಮಾಡಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದರು. ʻಡೊಳ್ಳುʼ ಈ ಚಿತ್ರ ಜಾನಪದ ಸೊಗಡನ್ನು ಇಟ್ಟುಕೊಂಡು ತಯಾರಿಸಲಾಗುತ್ತಿರೋ ಸಿನಿಮಾ ಆಗಿದ್ದು, ಈ ಚಿತ್ರ್ಕೆಕ ಕಿರುತೆರೆ ಕಾರ್ತಿಕ್ ಮಹೇಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯಾಗಿ ನಿಧಿ ಹೆಗ್ಡೆ ಅನ್ನೋ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರದ ತಯಾರಿ ನಡೆಯುತ್ತಿದ್ದು, ಸಿನಿಮಾಗಾಗಿ ನಟ ಕಾರ್ತಿಕ್ ಡೊಳ್ಳು ಕುಣಿತವನ್ನು ಕಲಿಯುತ್ತಿದ್ದಾರೆ. ಸದ್ಯದರಲ್ಲಿಯೇ ಚಿತ್ರೀಕರಣ ಕೂಡ ಪ್ರಾರಂಭವಾಗಲಿದೆ.
ಹೊಸ ಪ್ರಯತ್ನಕ್ಕೆ ಕೈ ಹಾಕಿರೋ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಅವರಿಗೆ ನಮ್ಮ ಕಡೆಯಿಂದಾನೂ ಆಲ್ ದಿ ಬೆಸ್ಟ್ ಹೇಳೋಣ