ಹೊಸ ವರ್ಷದಂದೆ ಜನರಿಗೆ ಬಿಗ್‍ಶಾಕ್ ನೀಡಿದೆ ಕೇಂದ್ರ ಸರ್ಕಾರ..!

ಹೊಸ ವರ್ಷದ ಸಂಭ್ರಮಾಚರಣೆಯ ಖುಷಿಯಲ್ಲಿರುವ ಜನರಿಗೆ ಒಂದು ಬಿಗ್ ಶಾಕ್ ಬಂದು ಬಡಿದಿದೆ.ಹೌದು ಕೇಂದ್ರ ಸರ್ಕಾರ ಹೊಸ ವರ್ಷದ ಖುಷಿಯಲ್ಲಿದ್ದ ಜನರಿಗೆ ಈಗ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ.. ಆಮೂಲಕ ಹೊಸ ವರ್ಷದಲ್ಲೇ ಜನರಿಗೆ ಕಹಿ ಸುದ್ದಿಯೊಂದನ್ನು ನೀಡಿದೆ. ಹೌದು ಸ್ನೇಹಿತರೇ.. ಇಂದಿನಿಂದ ನೀವೂ ದಿನ ನಿತ್ಯ ಉಪಯೋಗಿಸುವ ಗ್ಯಾಸ್ ಬೆಲೆ ಏರಿಕೆಯಾಗುವ ಮೂಲಕ ಜನಸಾಮಾನ್ಯರಿಗೆ ಬಿಗ್ ಶಾಕ್ ನೀಡಿದೆ.ಇಂದಿನಿಂದ ಸಬ್ಸಿಡಿ ರಹಿತ ಅಡಿಗೆ ಸಿಲಿಂಡರ್ ಬೆಲೆ 19 ರೂಪಾಯಿ ಏರಿಸಲಾಗಿದೆ ಎಂದು ಸರ್ಕಾರ ಸ್ವಾಮ್ಯದ ಇಂಡೇನ್ ಗ್ಯಾಸ್ ತಿಳಿಸಿದೆ. ಈ ಮೂಲಕ ಹೊಸ ವರ್ಷದಂದೆ ಜನ ಸಾಮಾನ್ಯರಿಗೆ ದೊಡ್ಡ ಹೊರೆ ಬಿದ್ದಂತಾಗಿದೆ. ಇನ್ನು ದೆಹಲಿಯಲ್ಲಿ 695 ರೂಪಾಯಿ ಇದ್ದ ಸಿಲಿಂಡರ್ ಬೆಲೆ ಈಗ 714 ರೂಪಾಯಿ ಆಗಿದ್ದು, ಕೊಲ್ಕತ್ತಾದಲ್ಲಿ 726 ರೂಪಾಯಿ ಇದ್ದ ಸಿಲಿಂಡರ್ ಇಂದಿನಿಂದ 21 ರೂಪಾಯಿ ಹೆಚ್ಚಳದೊಂದಿಗೆ 747ರೂಪಾಯಿ ಆಗಲಿದೆ. ಇನ್ನು ಚೆನ್ನೈನಲ್ಲಿ 714 ರೂಪಾಯಿಗೆ ಸಿಗುತ್ತಿದ್ದ ಸಿಲಿಂಡರ್ ಬೆಲೆಯನ್ನು 734 ರೂಪಾಯಿಗೆ ಹೆಚ್ಚಿಸಲಾಗಿದ್ರೆ,ಬೆಂಗಳೂರಿನಲ್ಲಿ 697.50 ಪೈಸೆ ಇದ್ದ ಸಿಲಿಂಡರ್ ಬೆಲೆಯನ್ನು 717 ರೂಪಾಯಿಯೊಂದಿಗೆ 19.50 ಪೈಸೆ ಏರಿಕೆ ಯಾವುದರ ಮೂಲಕ ಹೊಸ ವರ್ಷದಂದೆ ಜನಸಾಮಾನ್ಯನಿಗೆ ಬಿಗ್ ಶಾಕ್ ನೀಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top