ಹೊಸ ದಾಖಲೆ ಬರೆದ ಆರ್‌ಸಿಬಿ..ಎಲ್ಲಿದ್ರೂ ನಮ್ದೆ ಹವಾ..

ಆರ್‌ಸಿಬಿ ಕ್ರಿಕೆಟ್‌ ಜಗತ್ತಿನಲ್ಲಿ ಅತಿ ಹೆಚ್ಚು ಫ್ಯಾನ್ಸ್‌ ಫಾಲೋ ಹೊಂದಿರುವ ತಂಡ. ಪ್ರತಿ ಐಪಿಎಲ್‌ ಸೀಸನ್‌ ಶುರುವಾದಾಗಲು ಹೊಸ ಹುಮ್ಮಸಿನೊಂದಿಗೆ ಅಖಾಡಕ್ಕೆ ಇಳಿಯೋ ಈ ತಂಡಕ್ಕೆ ಫ್ಯಾನ್ಸ್‌ ನೀಡೋ ಸಪೋರ್ಟ್‌ಗೆ ಬೇರೆ ತಂಡಗಳು ದಂಗಾಗಿ ಹೋಗ್ತಾವೆ. ಇನ್ನು ಆರ್‌ಸಿಬಿ ಮ್ಯಾಚ್‌ ಗೆಲ್ಲಲಿ, ಸೋಲಲಿ.. ಫ್ಯಾನ್ಸ್‌ ಜೋಶ್‌ಗೇನೂ ಕಮ್ಮಿ ಇಲ್ಲ, ಇನ್ನು ಪ್ರತಿ ಬಾರಿಯೂ ಈ ಸಲ ಕಪ್‌ ನಮ್ದೆ ಅನ್ನೋ ಮೂಲಕ ತಂಡವನ್ನು ಹುರಿದುಂಬಿಸುತ್ತಲೇ ಇರ್ತಾರೆ. ಇನ್ನು ಆರ್‌ಸಿಬಿ ತಂಡ ಕಪ್‌ ಗೆಲ್ಲಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಪಡುವ ಜೊತೆಯಲ್ಲಿ ತಮ್ಮ ಫ್ಯಾನ್ಸ್‌ಗಳಿಗೆ ಒಂದಿಷ್ಟು ಎಂಟರ್‌ಟೈನ್ಮೆಂಟ್‌ನ್ನೂ ನೀಡಿ ಖುಷಿ ಪಡಿಸುತ್ತಾರೆ. ಪ್ರತಿ ಪಂದ್ಯ ಆಡುವಾಗಲು ಒಂದಿಲ್ಲೊಂದು ದಾಖಲೆಯನ್ನು ಸೃಷ್ಟಿ ಮಾಡೋ ಆರ್‌ಸಿಬಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಮಾಡಿರೋ ಮೊದಲ ಎರಡು ಸ್ಥಾನದಲ್ಲಿ ಇದೆ. ಪ್ರತಿ ಪಂದ್ಯದಲ್ಲೂ ದಾಖಲೆಗಳನ್ನು ನಿರ್ಮಿಸೋ ಆರ್‌ಸಿಬಿ ತಂಡ ಇದೀಗ ಐಪಿಎಲ್‌ 2020ಯಲ್ಲಿ ಹೊಸದೊಂದು ದಾಖಲೆಯನ್ನು ಬರೆದಿದೆ.

ಆದ್ರೆ ಈ ಬಾರಿ ಆರ್‌ಸಿಬಿ ದಾಖಲೆ ಬರೆದಿರೋದು ಮ್ಯಾಚ್‌ನಿಂದಾಗಿ ಅಲ್ಲ ಬದಲಿಗೆ ಸೋಶಿಯಲ್‌ ಮೀಡಿಯಾದಲ್ಲಿ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರೋ ಆರ್‌ಸಿಬಿ ಫ್ರಾಂಚೈಸಿಗಳು, ಸೋಶಿಯಲ್‌ ಮೀಡಿಯಾದಲ್ಲಿ ಒಂದಿಲ್ಲೊಂದು ಸುದ್ದಿಯನ್ನು ಕೊಡುತ್ತಲೇ ಇರ್ತಾರೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹೊಸದೊಂದು ದಾಖಲೆ ಮಾಡುವ ಮೂಲಕ ನಾವ್‌ ಇರೋದೆ ದಾಖಲೆಗಳನ್ನು ಸೃಷ್ಟಿಮಾಡೋಕೆ ಅಂತ ಹೇಳ್ತಿದ್ದಾರೆ. ಹೌದು ಡಿಪೋರ್ಟಸಿ ಫೈನಾನ್ಜಸ್‌.ಕಾಂ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಚರ್ಚೆಗೆ ಬಳಸಿಕೊಂಡ ಕ್ರೀಡಾ ತಂಡ ಯಾವುದು ಅನ್ನೋ ಸಮೀಕ್ಷೆಯನ್ನು ಮಾಡಿದ್ದು, ಈ ಸಮೀಕ್ಷೆಗೆ ಲೈಕ್‌ ಮತ್ತು ಕಾಮೆಂಟ್‌ ಎರಡನ್ನೂ ಪರಿಗಣಿಸಲಾಗಿದೆ.ಇದರ ಪ್ರಕಾರ ಟಾಪ್‌ 5 ಕ್ರೀಡಾ ತಂಡದಲ್ಲಿ ಟಾಪ್‌ 4 ರಲ್ಲಿ ಆರ್‌ಸಿಬಿ ತಂಡ ಇದ್ದು. ಸೆಪ್ಟೆಂಬರ್‌ ತಿಂಗಳಿನಲ್ಲಿ ಆರ್‌ಸಿಬಿ ತಂಡವನ್ನು 84.6 ಕೋಟಿ ಜನರು ತಮ್ಮ ಚರ್ಚೆಗೆ ಬಳಸಿಕೊಂಡಿದ್ದಾರೆ ಎಂದು ಈ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. ಇನ್ನು ಉಳಿದ ನಾಲ್ಕು ತಂಡಗಳು ಸಹ ಫುಟ್ಬಾಲ್‌ ತಂಡಗಳಾಗಿದ್ದು, ಟಾಪ್‌ 5 ರಲ್ಲಿ ಸ್ಥಾನಪಡೆದಿರುವಲ್ಲಿ ಏಕೈಕ ಕ್ರಿಕೆಟ್‌ ತಂಡವಾಗಿದೆ. ಈ ಮೂಲಕ ಬರಿ ಕ್ರಿಕೆಟ್‌ ಮೈದಾನದಲ್ಲಿ ಮಾತ್ರವಲ್ಲ ಸೋಶಿಯಲ್‌ ಮೀಡಿಯಾದಲ್ಲೂ ಆರ್‌ಸಿಬಿಯದ್ದೇ ದಾಖಲೆ ಇರಬೇಕು ಅಂತ ಅಭಿಮಾನಿಗಳು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top