ಹೊಲದಲ್ಲಿ ಸಹ ಈಗ ಡಿ ಬಾಸ್‌ ಕ್ರೇಜ್‌..

ಡಿ ಬಾಸ್‌, ಬಾಕ್ಸಾಫಿಸ್‌ ಸುಲ್ತಾನ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಂದ್ರೆ ಅದೇನೋ ಕ್ರೇಜ್‌.. ಅವರ ಸಿನಿಮಾ ಬರ್ತಾ ಇದೆ ಅಂದ್ರೆ ಅಲ್ಲಿ ಹಬ್ಬವೇ ಮನೆಮಾಡಿರುತ್ತೇ, ಇನ್ನು ಅವರ ಹುಟ್ಟುಹಬ್ಬ ಊರ ಜಾತ್ರೆ ತರ ಆಚರಿಸುತ್ತಾರೆ ಅವರ ಅಭಿಮಾನಿಗಳು..ಡಿ ಬಾಸ್‌ಗೆ ಇರೋ ಫ್ಯಾನ್‌ ಕ್ರೇಜ್‌ ಅಂತಹದ್ದು,ಇನ್ನು ತಮ್ಮ ಅಭಿಮಾನವನ್ನು ತರಹೇವಾರಿ ಹಂಚಿಕೊಳ್ತಾರೆ ಅಭಿಮಾನಿಗಳು, ಕೆಲ ಅಭಿಮಾನಿಗಳು ತಮ್ಮ ಬೈಕ್‌,ಆಟೋ,ಕಾರ್‌ ಮೇಲೆ ಡಿ ಬಾಸ್‌ ಪೋಸ್ಟರ್‌ಗಳನ್ನು ಹಾಕಿಕೊಂಡು ತಮ್ಮ ಅಭಿಮಾನವನ್ನು ಮೆರೆದ್ರೆ ಇನ್ನು ಕೆಲವ್ರು ತಾವು ಮಾಡಿಸಿಕೊಳ್ಳುವ ಹೆರ್‌ ಸ್ಟೈಲ್‌ನಲ್ಲೂ ತಮ್ಮ ಅಭಿಮಾನವನ್ನು ಮೇರಿತಾರೆ, ಇನ್ನು ಕೆಲವ್ರು ತಮ್ಮ ಮೈ ಅಥವಾ ಕೈಗಳ ಮೇಲೆ ದರ್ಶನ್‌ ಹೆಸರು ಅಥವಾ ಅವರ ನಟನೆಯ ಸಿನಿಮಾವನ್ನು ಅಚ್ಚೆ ಹಾಕಿಸಿಕೊಳ್ಳುವ ಮೂಲಕ ಹುಚ್ಚು ಅಭಿಮಾನವನ್ನು ತೋರಿಸುತ್ತಾರೆ.

ಅಂತಹ ದೊಡ್ಡ ಫ್ಯಾನ್‌ ಬೇಸ್‌ ಹೊಂದಿದ್ದಾರೆ ಡಿ ಬಾಸ್‌ ದರ್ಶನ್‌, ಇನ್ನು ಇತ್ತಿಚೆಗೆ ಅಭಿಮಾನಿಯೊಬ್ಬ ತನ್ನ ಹೊಸ ಮನೆಗೆ ಡಿ ಬಾಸ್‌ ಎಂದು ಹೆಸರಿಡುವ ಮೂಲಕ ತನ್ನ ಅಭಿಮಾನವನ್ನು ತೋರಿಸಿದ್ದರು, ಆದ್ರೀಗ ಡಿ ಬಾಸ್‌ ಕ್ರೇಜ್‌ ಕಾರ್‌,ಬೈಕ್‌,ಹೇರ್‌ ಸ್ಟೈಲ್‌ಗಲ್ಲಿ ಸೃಷ್ಟಿಯಾಗಿಲ್ಲ ಬದಲಿಗೆ ಇದೀಗ ಹೊಲದಲ್ಲೂ ಸಹ ಅಭಿಮಾನಿ ತನ್ನ ಅಭಿಮಾನವನ್ನು ತೋರುವ ಮೂಲಕ ಡಿ ಬಾಸ್‌ ಹವಾ ಎಲ್ಲೆಲ್ಲೂ ಇರುತ್ತೇ ಅನ್ನೋದನ್ನ ತೋರಿಸಿದ್ದಾರೆ. ಹೌದು ಹೊಲದಲ್ಲಿ ತಾವು ಬೆಳೆದ ಬೆಳೆಯಲ್ಲಿ ಡಿ ಬಾಸ್‌ ಅನ್ನೋ ಕಲಾಕೃತಿ ಮಾಡುವ ಮೂಲಕ ತಮ್ಮ ಅಭಿಮಾನವನ್ನು ತೋರಿಸಿದ್ದು, ಆ ಮೂಲಕ ಡಿ ಬಾಸ್‌ ಹವಾ ಎಲ್ಲಾ ಕಡೆ ಇರುತ್ತೆ ಅನ್ನೋದನ್ನ ತೋರಿಸಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹೊಲದಲ್ಲಿ ಡಿ ಬಾಸ್‌ ಕಲಾಕೃತಿ ಮೂಡಿರೋ ಫೋಟೋ ಸಖತ್‌ ವೈರಲ್‌ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top