ಹೊಂಬಾಳೆ ಫಿಲ್ಮ್ಸ್‌ನಲ್ಲಿ ಬರ್ತಾ ಇದೆ ಮತ್ತೊಂದು ಸಿನಿಮಾ ಹೀರೋ ಯಾರು ಗೊತ್ತಾ..?

ಸ್ಯಾಂಡಲ್‌ವುಡ್‌ನ ಬಿಗ್‌ ಬ್ಯಾನರ್‌ ಆದ ಹೊಂಬಾಳೆ ಫಿಲ್ಸ್ಮ್‌ ಅವರಿಂದ ಮತ್ತೊಂದು ಸಿನಿಮಾ ಅನೌನ್ಸ್‌ ಆಗ್ತಾದೆ, ಈಗಾಗಲೇ ಬಿಗ್‌ ಬಜೆಟ್‌ ಆದ ಕೆಜಿಎಫ್‌ 2 ಮತ್ತು ಯುವರತ್ನ ಚಿತ್ರದ ತಯಾರಿಯಲ್ಲಿ ಬ್ಯೂಸಿ ಇರೋ ಹೊಂಬಾಳೆ ಫಿಲ್ಸ್ಮ್‌ ಈಗಾಗಲೇ ಪ್ರಶಾಂತ್‌ ನೀಲ್‌ ಅವರ ಮುಂದಿನ ಸಿನಿಮಾ ಬಗ್ಗೆನೂ ಅನೌನ್ಸ್‌ ಮಾಡಿಯಾಗಿದೆ.

ಪ್ರಶಾಂತ್‌ ನೀಲ್‌ ಮತ್ತು ಪ್ರಭಾಸ್‌ ಕಾಂಭಿನೇಷನ್‌ನಲ್ಲಿ ʻಸಲಾರ್‌ʼ ಸಿನಿಮಾ ಬರಲಿದೆ ಎಂದು ಹೇಳಿದ್ದು, ಈಗಾಗಲೇ ಚಿತ್ರದ ಫಸ್ಟ್‌ ಲುಕ್‌ ಕೂಡ ಬಿಡುಗಡೆ ಮಾಡಿಯಾಗಿದೆ, ಹೀಗಿರಬೇಕಾದ್ರೆ ಇದೀಗ ಮತ್ತೊಂದು ಸಿನಿಮಾ ಅನೌನ್ಸ್‌ ಬಗ್ಗೆ ಮಾಹಿತಿಯನ್ನು ಹೊರಬಿಟ್ಟಿದ್ದಾರೆ. ಡಿಸೆಂಬರ್‌ 17ರಂದು ಮುಂದಿನ ಗುರಿ ಬಗ್ಗೆ ಹೇಳಲಿದ್ದೇವೆ ಅನ್ನೋ ಪೋಸ್ಟ್‌ ಒಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದು, ಸಿನಿರಸಿಕರಲ್ಲಿ ಕುತೂಹಲ ಮೂಡಿದೆ. ಈಗಾಗಲೇ ಮತ್ತೊಂದುಯ ಪ್ಯಾನ್‌ ಇಂಡಿಯಾ ತಯಾರಿಯಲ್ಲಿ ಇರೋ ವಿಜಯ್‌ ಕಿರಂಗದೂರು , ಇದೀಗ ಮತ್ತೊಂದು ಸಿನಿಮಾ ಮಾಡ್ತಾ ಇರೋದ್ರ ಬಗ್ಗೆ ಡಿಸೆಂಬರ್‌ 17ರಂದು ಅನೌನ್ಸ್‌ ಮಾಡುವುದಾಗಿ ಹೇಳಿದ್ದು, ಅಂದು ಶ್ರೀ ಮುರುಳಿ ಹುಟ್ಟು ಹಬ್ಬ ಇರೋದ್ರಿಂದ ಸ್ಯಾಂಡಲ್‌ವುಡ್‌ನಲ್ಲಿ ಸ್ವಲ್ಪ ಟಾಕ್‌ ಜೋರಾಗೇ ಓಡಾಡುತ್ತಿದೆ.

ಹೊಂಬಾಳೆ ಫಿಲ್ಸ್ಮ್‌ ನಿರ್ಮಾಣದ 8ನೇ ಸಿನಿಮಾದಲ್ಲಿ ಶ್ರೀ ಮುರುಳಿ ನಾಯಕನಟನಾಗಿ ಅಭಿನಯಿಸಲಿದ್ದಾರೆ ಅನ್ನೋ ಮಾತುಗಳು ಸದ್ಯ ಗಾಂಧಿನಗರದಲ್ಲಿ ಕೇಳಿ ಬರ್ತಾ ಇದ್ರೆ, ಇತ್ತ ಹೊಂಬಾಳೆ ಫಿಲ್ಮ್ಸ್‌ ಜೂ.ಎನ್‌ಟಿಆರ್‌ ಜೊತೆಯಲ್ಲಿ ಸಿನಿಮಾ ಮಾಡ್ತಾ ಇದ್ದಾರೆ ಅನ್ನೋ ಮಾತುಗಳು ಸಹ ಇದೆ. ಇದೆಲ್ಲದರ ನಡುವೆ ಸಲಾರ್‌ ಸಿನಿಮಾ ಅನೌನ್ಸ್‌ ಆಗುವಾಗಲೇ ಪುನೀತ್‌ ರಾಜ್‌ಕುಮಾರ್‌ ಮತ್ತು ಸಂತೋಷ್‌ ಆನಂದ್‌ ರಾಮ್‌ ಹ್ಯಾಟ್ರಿಕ್‌ ಕಾಂಭೀನೇಷನ್‌ ಸಿನಿಮಾ ಬರಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು, ಇದೀಗ ಮತ್ತೆ ಆ ವಿಚಾರ ಜೋರಾಗಿ ಓಡಾಡುತ್ತಿದ್ದು ಹೊಂಬಾಳೆ ಫಿಲ್ಮ್ಸ್‌ನ 8ನೇ ಸಿನಿಮಾ ಅಪ್ಪು ಮತ್ತು ಸಂತೋಷ್‌ ಜೋಡಿಯಲ್ಲಿ ಬರಲಿದ್ಯಾ ಅನ್ನೋ ಕ್ಯೂರ್ಯಾಸಿಟಿ ಅಭಿಮಾನಿಗಳಲ್ಲಿ ಮೂಡಿದೆ.

ಇನ್ನು ಡಿಸೆಂಬರ್‌ 17ರಂದು ಶ್ರೀಮುರುಳಿ ಹುಟ್ಟುಹಬ್ಬದಂತು ಮುರಳಿ ಹೊಸ ಸಿನಿಮಾ ಅನೌನ್ಸ್‌ ಕೂಡ ಆಗಲಿದೆ ಅಂತ ಹೇಳಲಾಗಿತ್ತು, ಇದೀಗ ಹೊಂಬಾಳೆ ಫಿಲ್ಮ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಡಿಸೆಂಬರ್‌ 17ಕ್ಕೆ ಮಾಹಿತಿ ನೀಡೋದಾಗಿ ಹೇಳಿದ್ದು, ಹೊಂಬಾಳೆ ಫಿಲ್ಮ್ಸ್‌ 8 ನೇ ಸಿನಿಮಾ ಶ್ರೀ ಮುರುಳಿ ಜೊತೆ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ. ಇನ್ನು ಬಿಡುಗಡೆ ಮಾಡಿರೋ ಪೋಸ್ಟರ್‌ನಲ್ಲಿ ಹುಲಿ ಸಿಂಹ ಕಾಣಿಸುತ್ತಿದ್ದು, ಅಭಿಮಾನಿಗಳು ಪಕ್ಕಾ ರೋರಿಂಗ್‌ ಸ್ಟಾರ್‌ ಶ್ರೀಮುರಳಿಗಾಗಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಅಂತಾನೂ ಹೇಳುತ್ತಿದ್ದಾರೆ,
ಇನ್ನು ಶ್ರೀ ಮುರುಳಿ ಮುಂದಿನ ಸಿನಿಮಾ ಡೈರೆಕ್ಷನ್‌ ಮಾಡ್ತಾ ಇರೋದು ಡಾ. ಸೂರಿಯಾಗಿದ್ದು ಈ ಹಿಂದೆ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಲಕ್ಕಿ ಸಿನಿಮಾ ನಿರ್ದೇಶನ ಮಾಡಿದ್ರು, ಇದೀಗ ರೋರಿಂಗ್‌ ಸ್ಟಾರ್‌ ಶ್ರೀ ಮುರುಳಿಯವರ ಮದಗಜ ಸಿನಿಮಾ ನಂತರ ಡಾ.ಸೂರಿ ನಿರ್ದೇಶನದಲ್ಲಿ ಸಿನಿಮಾ ಸೆಟ್ಟೆರಲಿದ್ದು, ಈ ಸಿನಿಮಾ ಶ್ರೀ ಮುರುಳಿ ಹುಟ್ಟುಹಬ್ಬದಂದೆ ಸೆಟ್ಟೇರುತ್ತಿರೋದು ವಿಶೇಷ.

ಒಟ್ಟಿನಲ್ಲಿ ಡಿಸೆಂಬರ್‌ ೧೭ ರಂದು ಶ್ರೀ ಮುರುಳಿ ಹುಟ್ಟುಹಬ್ಬವಿದ್ದು, ಅದೇ ದಿನ ಹೊಂಬಾಳೆ ಫಿಲ್ಮ್ಸ್‌ ಹೊಸ ಮತ್ತೊಂದು ಹೊಸ ಸಿನಿಮಾ ಅನೌನ್ಸ್‌ ಮಾಡೋದಾಗಿ ಹೇಳಿರೋದು ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಶ್ರೀಮುರುಳಿ ಮತ್ತು ಹೊಂಬಾಳೆ ಫಿಲ್ಮ್ಸ್‌ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top