ಹೆಂಡತಿ ಸುಳ್ಳು ಕೇಸ್‌ ದಾಖಲಿಸಿದ್ದಾಳೆ ಎಂದು ಟವರ್‌ ಏರಿದ ಪತಿರಾಯ

ಹೆಂಡತಿ ತನ್ನ ವಿರುದ್ಧ ಸುಳ್ಳು ಕೇಸ್‌ ಹಾಕಿದ್ದಾಳೆ ಎಂದು ಮೊಬೈಲ್‌ ಟವರ್‌ ಏರಿರೋ ಕಾಮಿಡಿ ಘಟನೆ ಉತ್ತರಪ್ರದೇಶದಲ್ಲಿ ಮೊರ್ದಾಬಾದ್‌ನಲ್ಲಿ ನಡೆದಿದೆ. ತೇಜ್ಪಾಲ್‌ ಸಿಂಗ್‌ ಟವರ್‌ ಏರಿದ ವ್ಯಕ್ತಿ ಎಂದು ಗುರುತಿಸಲಾಗಿದ್ದು. ಈತನ ಪತ್ನಿ ಆತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಸುಳ್ಳು ಕೇಸ್‌ ದಾಖಲಿಸಿದ್ದಾಳಂತೆ. ಪೊಲೀಸರು ಕೂಡ ಈತನ ಮಾತು ಕೇಳುತ್ತಿಲ್ಲ ಎಂದು ಊರಿನ ಮೊಬೈಲ್‌ ಟವರ್‌ ಏರಿದ್ದಾನೆ. ಇನ್ನು ಸ್ಥಳಿಯರು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನ ಮನವೊಲಿಸಿ ಟವರ್‌ನಿಂದ ಕೆಳಗಿಳಿಸಿದ್ದಾರೆ. ನಂತರ ವಿಚಾರಿಸಿದಾಗ ಈತನ ವಿರುದ್ಧ ಪತ್ನಿ ಕೇಸ್‌ ದಾಖಲಿಸಿದ್ದು, ಈತ ಸುಳ್ಳು ಕೇಸ್‌ ದಾಖಲಿಸಿದ್ದಾಳೆ ,ಪೊಲೀಸರು ಕೂಡ ನನ್ನ ಮಾತು ಕೇಳುತ್ತಿಲ್ಲ ಎಂದು ಹೇಳಿದ್ದಾನೆ. ನಾನು ಆಕೆಯ ಜೊತೆ ಸಂಬಂಧವನ್ನು ಮುರಿದುಕೊಳ್ಳು ಇಚ್ಛಿಸುತ್ತೇನೆ ಎಂದು ಸಹ ತೇಜ್ಪಾಲ್‌ ಸಿಂಗ್‌ ಹೇಳಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top