ಹೆಂಡತಿ ಜೊತೆ ಜಗಳವಾಡಿ ಕೋಪ ಕಮ್ಮಿ ಮಾಡಿಕೊಳ್ಳಲು 450 ಕಿಲೋ ಮೀಟರ್‌ ನಡೆದ ಗಂಡ..

ಹೆಂಡತಿ ಜೊತೆ ಗಲಾಟೆ ಮಾಡಿಕೊಂಡು ಕೋಪವನ್ನು ಕಮ್ಮಿ ಮಾಡಿಕೊಳ್ಳಲು ಗಂಡನೊಬ್ಬ ಬರೋಬ್ಬರಿ 450 ಕಿಲೋ ಮೀಟರ್‌ ಪಾದೆಯಾತ್ರೆ ಮಾಡಿರೋ ಘಟನೆ ಇಟಲಿಯಲ್ಲಿ ನಡೆದಿದೆ.

ತನ್ನ ಕೋಪವನ್ನು ಕಮ್ಮಿಮಾಡಿಕೊಳ್ಳುವ ನಿಟ್ಟಿನಲ್ಲಿ ಒಂದುವಾರಗಳ ಕಾಲ 40 ಮೈಲಿಯಷ್ಟು ದೂರ ನಡೆದಿದ್ದು, ಇಟಲಿಯಲ್ಲಿ ರಾತ್ರಿ ೧೦ರಿಂದ ಬೆಳಗ್ಗೆ 5 ರವಗೆ ನೈಟ್‌ ಕರ್ಫ್ಯೂ ಜಾರಿಯಲಿದ್ದು, ಕೊರೊನಾ ರೂಲ್ಸ್‌ ಬ್ರೇಕ್‌ ಮಾಡಿ ಮಧ್ಯರಾತ್ರಿ 2 ಗಂಟೆ ಒತ್ತಲ್ಲಿಯೂ 48 ವರ್ಷದ ವ್ಯಕ್ತಿ ಓಡಾಡುತ್ತಿದ್ದನ್ನು ಕಂಡು ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ದಂಡವನ್ನು ವಿಧಿಸಿದ್ದಾರೆ. ಬಳಿಕ ಆತ ತನ್ನ ಕಾಲ್ನಡಿಗೆಯ ಬಗ್ಗೆ ಕಥೆಯನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

ಈತ ಲಂಬಾರ್ಡಿಯಾದಲ್ಲಿ ಇರೋ ತನ್ನ ಮನೆಯಿಂದ ಬೊಲೋನಾ ಮಾರ್ಗವಾಗಿ ಬಂದಿದ್ದಾನೆ. ಫಾನೋ ಎಂಬಲ್ಲಿ ಪೊಲೀಸರು ಆತನನ್ನು ತಡೆದು ವಿಚಾರಿಸಿದ್ದಾರೆ. ಇತ್ತ ತನ್ನ ಗಂಡ ಒಂದು ವಾರದಿಂದ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದ ಹೆಂಡತಿಗೆ ಗಂಡ ಸಿಕ್ಕಿರೋ ವಿಷಯ ತಿಳಿದು 450 ಕಿ.ಮೀ ದೂರ ಸ್ವತಃ ಡ್ರೈವ್‌ ಮಾಡಿಕೊಂಡು ಹೋಗಿ ಗಂಡನನ್ನು ಕರೆತಂದಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top