ಹೆಂಡತಿಗಾಗಿ ಚಂದ್ರಲೋಕದಲ್ಲಿ ಜಾಗ ಖರೀದಿಸಿದ ಗಂಡ

ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಧರ್ಭದಲ್ಲಿ ತನ್ನ ಪತಿ ಅಥವಾ ಪತ್ನಿಗೆ ವಿಶೇಷವಾದ ಉಡುಗೊರೆಯನ್ನು ನೀಡಲು ಬಯಸುತ್ತಾರೆ. ಆದ್ರೆ ಇಲ್ಲೋಬ್ಬ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷವಾದ ಉಡುಗೊರೆಯನ್ನು ಪಡೆದಿದ್ದಾರೆ. ತನ್ನ ಪತ್ನಿಗೆ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಚಂದ್ರ ಲೋಕದಲ್ಲಿ ಜಾಗ ಖರೀದಿ ಮಾಡುವ ಮೂಲಕ ವಿಶೇಷ ಗಿಫ್ಟ್‌ ನೀಡಿದ್ದಾರೆ ಪತಿ. ಈ ರೀತಿ ಗಿಫ್ಟ್‌ ನೀಡಿರೋದು ಧರ್ಮೇಂದ್ರ ಅನಿಜಾ ಎಂಬ ವ್ಯಕ್ತಿ ತನ್ನ ಪತ್ನಿ ಸಪ್ನಾಗೆ ವಿವಾಹ ವಾರ್ಷಿಕೋತ್ಸವದ ಸಲುವಾಗಿ ಚಂದ್ರಲೋಕದಲ್ಲಿ ಮೂರು ಎಕರೆ ಜಾಗವನ್ನು ಖರೀದಿ ಮಾಡಿ ಆಕೆಗೆ ಉಡುಗೊರೆಯಾಗಿ ನೀಡಿದ್ದಾರೆ.

ಇನ್ನು ವಿಚಾರವಾಗಿ ಪತ್ನಿ ಸಪ್ನಾ ಮಾತನಾಡಿದ್ದು, ಆನು ಊಹಿಸಿರಲಿಲ್ಲ ನನ್ನ ಪತಿ ಇಂತಹ ವಿಶೇಷವಾದ ಗಿಫ್ಟ್‌ ನೀಡುತ್ತಾರೆ ಎಂದು ಸಾಮಾನ್ಯವಾಗಿ ಕಾರು ಬಟ್ಟೆ ಒಡವೆಯನ್ನು ಗಿಫ್ಟ್‌ ನೀಡುತ್ತಾರೆ ನಾನು ಸಹ ಹಾಗೇ ನನಗೂ ಒಂದು ಉಡುಗೊರೆ ಕೊಡಬಹುದು ಎಂದು ಅಂದುಕೊಂಡಿದ್ದೇ ಆದ್ರೆ ನನ್ನ ಪತಿ ಚಂದ್ರ ಲೋಕದಲ್ಲಿ ನನಗಾಗಿ ಜಾಗ ಖರೀದಿಸಿ ಅದನ್ನು ನನಗೆ ಗಿಫ್ಟ್‌ ಮಾಡಿದ್ದಾರೆ.

ಇದು ನನಗೆ ತುಂಬಾ ವಿಶೇಷ ಅಂತ ಹೇಳಿದ್ದಾರೆ. ಇನ್ನು ಧರ್ಮೇಂದ್ರ ಕೂಡ ಮಾತನಾಡಿದ್ದು ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿರುವ ಲೂಸಾ ಸೊಸೈಟಿ ಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆಯ ಮೂಲಕ ಈ ಜಾಗವನ್ನು ಖರೀದಿ ಮಾಡಿದ್ದು, ಇದರ ಎಲ್ಲಾ ಪ್ರಕ್ರಿಯೆ ಮುಗಿಯಲು ಒಂದು ವರ್ಷ ಬೇಕಾಯಿತು, ಎಲ್ಲರೂ ಕಾರು ಒಡವೆ ಗಿಫ್ಟ್‌ ನೀಡುತ್ತಾರೆ ಆದರೆ ನಾನು ನನ್ನ ಪತ್ನಿ ಡಿಫರೆಂಟ್‌ ಆಗಿ ಏನಾದ್ರು ಗಿಫ್ಟ್‌ ನೀಡಬೇಕು ಎಂದು ಚಂದ್ರ ಲೋಕದಲ್ಲಿ ಜಾಗ ಖರೀದಿ ಮಾತಿ ಹೆಂಡತಿಗೆ ಗಿಫ್ಟ ನೀಡಿದ್ದೇನೆ ಅಂತ ಧರ್ಮೇಂದ್ರ ಹೇಳದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್‌ಮೀಡಿಯಾದಲ್ಲಿ ವೈರಲ್‌ ಕೂಡ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top