ಹುಬ್ಬಳ್ಳಿಯಲ್ಲಿ ಟ್ರೆಂಡ್‌ ಆಯ್ತು ಯಜಮಾನ ಸಿನಿಮಾದ ದರ್ಶನ್‌ ನಂದಿ ಬ್ರ್ಯಾಂಡ್‌…!

ದರ್ಶನ್‌ ಅಭಿನಯದ ಯಜಮಾನ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಸೌಂಡ್‌ ಮಾಡಿದ್ದ ಸಿನಿಮಾ, ಇನ್ನು ಸಿನಿಮಾ ಸೌಂಡ್‌ಗಿಂತ ಅದರಲ್ಲಿ ಇದ್ದ ಡೈಲಾಗ್‌ಗಳು ಇನ್ನು ಸೌಂಡ್‌ ಮಾಡಿತ್ತು, ದರ್ಶನ್‌ ಹೇಳೋ ಒಂದೊಂದು ಡೈಲಾಗ್‌ಗೂ ಅಭಿಮಾನಿಗಳು ಫಿದಾ ಆಗಿ ಹೋಗಿದ್ರು, ಅದರಲ್ಲೂ ದರ್ಶನ್‌ ಹೇಳೋ ʻನಿಯತ್ತಿಂದ ಕಟ್ಟಿರೋ ಸ್ವಂತ ಬ್ರ್ಯಾಂಡೋ ಸೌಂಡು ಜಾಸ್ತಿನೇ ಇರುತ್ತೆʼ ಅನ್ನೋ ಡೈಲಾಗ್‌ ಅಂತು ಎಲ್ಲಾ ಡಿ ಬಾಸ್‌ ಅಭಿಮಾನಿಗಳು ತಮ್ಮ ಸ್ಟೇಟಸ್‌ಗಳಲ್ಲಿ ಹಾಕಿಕೊಳ್ಳೋ ಮಟ್ಟಕ್ಕೆ ಟ್ರೆಂಡ್‌ ಆಗಿತ್ತು, ಆದ್ರೆ ಈ ಸಿನಿಮಾ ಈಗಾಗ್ಲೇ ಥಿಯೇಟರ್‌ನಲ್ಲಿ ನೂರು ದಿನ ಪ್ರದರ್ಶನ ಕಂಡು, ಬೆಳ್ಳಿ ಪರದೆಯಲ್ಲೂ ಪ್ರದರ್ಶನ ಕಂಡಿದ್ದು ಆಯ್ತ, ಆದ್ರೆ ಈಗಲೂ ಸಹ ಈ ಸಿನಿಮಾ ಸೌಂಡ್‌ ಮಾಡೋಕೆ ಶುರುಮಾಡಿದೆ, ಆದ್ರೆ ಈ ಬಾರಿ ಅದು ಸೌಂಡ್‌ ಮಾಡ್ತಾಇರೋದು ಮಾತ್ರ ಥಿಯೇಟರ್‌ನಲ್ಲಿ ಅಲ್ಲ ಬದಲಿಗೆ ಮಾರುಕಟ್ಟೆಯಲ್ಲಿ,

ಹೌದು ದರ್ಶನ್‌ ಅಭಿನಯದ ಯಜಮಾನ ಸಿನಿಮಾದಲ್ಲಿ ದರ್ಶನ್‌ ಒಬ್ಬ ಅಡುಗೆ ಎಣ್ಣೆ ವ್ಯಾಪಾರಿಯಾಗಿದ್ದು, ಅದರಲ್ಲಿ ನಂದಿ ದರ್ಶನ್‌ ಉತ್ಪಾದನೆಯ ಎಣ್ಣೆಯ ಬ್ರ್ಯಾಂಡ್‌ ನೇಮ್‌, ಅಲ್ಲಿ ನಾಯಕ ವಿಲನ್‌ ವಿರುದ್ಧ ತನ್ನ ನಂದಿ ಬ್ರ್ಯಾಂಡ್‌ ಅನ್ನೂ ಯಾವ ಮಟ್ಟಕ್ಕೆ ಬೆಳೆಸುತ್ತಾನೆ ಅನ್ನೋದನ್ನ ತೋರಿಸಿದ್ರೆ, ಇಲ್ಲೋಬ್ಬ ಡಿ ಬಾಸ್‌ ಅಭಿಮಾನಿ ಯಜಮಾನ ಸಿನಿಮಾ ನೋಡಿ ತನ್ನ ಎಣ್ಣೆ ಉತ್ಪಾದನೆಗೆ ನಂದಿ ಬ್ರ್ಯಾಂಡ್‌ ಅನ್ನೋ ಹೆಸರು ಇಡೋ ಮೂಲಕ ತನ್ನ ಅಭಿಮಾನವನ್ನು ಮೆರೆದಿದ್ದಾರೆ,

ಹುಬ್ಬಳ್ಳಿಯ ವ್ಯಾಪಾರಿಯೊಬ್ಬರು ತಮ್ಮ ಎಣ್ಣೆ ಉತ್ಪಾದನೆಯನ್ನು ಮಾರುಕಟ್ಟೆಯಲ್ಲಿ ಮಾರಲು ಆ ಉತ್ಪಾದನೆಗೆ ʻನಂದಿ ಬ್ರ್ಯಾಂಡ್‌ʼ ಅನ್ನೋ ಹೆಸರನ್ನು ಇಡೋ ಮೂಲಕ ಡಿ ಬಾಸ್‌ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. ಸದ್ಯ ʻನಂದಿ ಬ್ರ್ಯಾಂಡ್‌ʼ ಹೆಸರಿನ ಎಣ್ಣೆ ಟಿನ್‌ ಇರೋ ಫೋಟೋಗಳು ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ಓಡಾಡುತ್ತಿದ್ದು, ನಂದಿ ಬ್ರ್ಯಾಂಡ್‌ನಷ್ಟೇ ಜೋರಾಗಿ ಟ್ರೆಂಡ್‌ ಕೂಡ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top