ಹುಡುಗಿ ಬೇಕಾ ಅಂತ ಮತ್ತೆ ಬಂದ್ರು ಅಂಥೋಣಿ ದಾಸ್.‌!

ವಾರೆ ನೋಡ ನೋಡೈತೆ ಅಂತ..ಸೂರಿ ಅಣ್ಣಾ ಅಂತ ಸ್ಯಾಂಡಲ್ ವುಡ್ ನಲ್ಲಿ ಹವಾ ಹಬ್ಬಿಸಿದ ಅಂಥೋಣಿ ದಾಸ್ ಈಗ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡ್ತಾ ಇದ್ದಾರೆ. ಅದು ಹುಡ್ಗಿ ಬೇಕಾ ಅನ್ನೋ ಮೂಲಕ,

ಹೌದು ಹೊಸ ಪ್ರತಿಭೆಗಳು ಸೇರಿ ಮಾಡಿರೋ ಕಾಲವೇ ಮೋಸಗರ ಪಕ್ಕಾ ಕಮರ್ಷಿಯಲ್ ಪ್ರಯೋಗಾ ಸಿನಿಮಾ , ಸದ್ಯ ಅಂಥೋಣಿ ದಾಸ್ ಹಾಡಿ ಹುಡ್ಗಿ ಬೇಕಾ, ಬಾಟಲ್ ಬೇಕಾ..? ಅನ್ನೋ ಕಾಲವೇ ಮೋಸಗಾರ ಚಿತ್ರದ ಮೊದಲ ಹಾಡು ರಿಲೀಸ್ ಆಗಿದ್ದು ಟಗರು ಖ್ಯಾತಿ ಆಂಥೋಣಿ ವಾಯ್ಸ್ ನಲ್ಲಿ ಹಾಡು ಮೂಡಿ ಬಂದಿದ್ದು,ಹಾಡು ಸಖತ್ ಸೌಂಡ್ ಮಾಡ್ತಾ ಇದೆ.

ಸದ್ಯ ಕನ್ನಡ ಸೇರಿ ತೆಲುಗು,ತಮಿಳು‌,ಮಲೆಯಾಳಂನಲ್ಲಿ ಚಿತ್ರ ತೆರೆಗೆ ತರಲು ಚಿತ್ರತಂಡ ರೆಡಿ ಮಾಡ್ಕೊಳ್ತಾ ಇದೆ.
ಭಾವಸ್ಪಂದನ ಪ್ರೊಡಕ್ಷನ್ಸ್ ಮತ್ತು ಬಿ.ಎಂ.ಡಬ್ಲ್ಯೂ ಬ್ಯಾನರ್ ನಿರ್ಮಾಣದಲ್ಲಿ, ರಜತ್ ದುಗ್ಗೋಜಿ ಸಲನಂಕೆ ಬಂಡವಾಳ ಹೂಡಿದ್ದಾರೆ.

ಸಂಜಯ್ ವದತ್ ಎಸ್ ನಿರ್ದೇಶನವಿರೋ ಈ ಚಿತ್ರಕ್ಕೆ ಕೆ. ಲೋಕೇಶ್ ಸಂಗೀತ ಸಂಯೋಜಿಸಿದ್ದಾರೆ. ಅಂದ್ಹಾಗೆ ಹುಡ್ಗಿ ಬೇಕಾ ಬಾಟಲ್ ಬೇಕಾ ಹಾಡಿಗೂ ನಿರ್ದೇಶಕ ಸಂಜಯ್ ರದ್ದೇ ಸಾಹಿತ್ಯ ಬರೆದಿದ್ದಾರೆ. ಅಂಥೋನಿ ದಾಸ್ ತುಂಬಾ ಷ್ಟಪಟ್ಟು ಹಾಡಿರೋ ಈ ಹಾಡು ಸದ್ಯ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ. ಪದೇ ಪದೇ ಕೇಳುವಂತಹ, ಕುಣಿಸುವಂತಹ ಈ ಹಾಡು ಕಾಲವೇ ಮೋಸಗಾರ ಚಿತ್ರದ ಹೈಲೈಟ್ ಗಳಲ್ಲೊಂದಾಗಿದೆ.

ಅಂದ್ಹಾಗೆ ಈ ಹಾಡಿನೊಂದಿಗೆ ಪ್ರಚಾರ ಶುರುಮಾಡಿರೋ ಚಿತ್ರತಂಡ ಸದ್ಯದಲ್ಲೇ ಚಿತ್ರದ ಟ್ರೈಲರ್ ನ ರಿಲೀಸ್ ಮಾಡೋ ಪ್ಲಾ ನ್ ನಲ್ಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top