
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬ ನಾಳೆ ಅಂದರೆ ಅಕ್ಟೋಬರ್ 6ರಂದು ಇದ್ದು, ಅಭಿಮಾನಿಗಳು ಧ್ರುವ ಸರ್ಜಾ ಹುಟ್ಟುಹಬ್ಬ ಆಚರಣೆಗೆ ಕಾತುರದಿಂದ ಕಾಯುತ್ತಿದ್ದಾರೆ. ಹೀಗಿರ ಬೇಕಾದರೆ ಇದೀಗ ನಟ ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಅಣ್ಣನ ಅಗಲುವಿಕೆ ಹಾಗೂ ಕರೋನಾ ಪರಿಸ್ಥಿತಿಯಿಂದಾಗಿ ಹುಟ್ಟುಹಬ್ಬ ಆಚರಿಸಲು ಸಾಧ್ಯವಿಲ್ಲ. ಆದ್ದರಿಂದ ನೀವು ಇದ್ದ ಕಡೆಯಿಂದಲೇ ಶುಭ ಹಾರೈಸಿ ʼ ಅಂತ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರೋ ಧ್ರುವ ಸರ್ಜಾ
ಅಭಿಮಾನಿಗಳೇ ನಮ್ ಅನ್ನದಾತರು.ನೀವೇ ನಮ್ಮ ಶಕ್ತಿ.ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ,ಅಭಿಮಾನ ವರ್ಣನಾತೀತ.ಈವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ.ಎಲ್ಲೂ ಸಂಭ್ರಮವಿಲ್ಲ.ಅಭಿಮಾನಿಗಳನ್ನು ಮನೆಯಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ.ನೀವು ಇರುವ ಕಡೆಯಿಂದಲೇ ಹಾರೈಸಿ.ಅದೇ ನನಗೆ ಶ್ರೀರಕ್ಷೆ.ಜೈಆಂಜನೇಯ
ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಅನ್ನೋದನ್ನ ಹೇಳಿದ್ದಾರೆ. ಇನ್ನು ಧ್ರುವ ಸರ್ಜಾ ಅಭಿಮಾನಿಗಳಿಗೆ ಕೊಂಚ ಬೇಸರ ಉಂಟಾಗಿದ್ದರು, ಬಾಸ್ ಹೇಳೋದು ಸರಿ ಇದೆ ಇದ್ದಲ್ಲೇ ಧ್ರುವ ಅವರಿಗೆ ಶುಭ ಹಾರೈಸೋಣ ಅಂತ ಹೇಳ್ತಿದ್ದಾರೆ.