ಹೀರೋ ಆದ ರಿಷಭ್‌ ಶೆಟ್ಟಿ..!ಫಸ್ಟ್‌ ಲುಕ್‌ ಔಟ್‌..!

ಸ್ಯಾಂಡಲ್‌ವುಡ್‌ನ ಟ್ಯಾಲೆಂಟೆಡ್‌ ಡೈರೆಕ್ಟರ್‌,ಆಕ್ಟರ್‌ ಆದ ರಿಷಭ್‌ ಶೆಟ್ಟಿ ಲಾಕ್‌ ಡೌನ್‌ ಟೈಂನಲ್ಲಿ ಸದ್ದಿಲ್ಲದೇ ಒಂದು ಕೆಲಸವನ್ನು ಮುಗಿಸಿಬಿಟ್ಟಿದ್ದಾರೆ. ಹೌದು ಅವ್ರು ಸ್ಯಾಂಡಲ್‌ವುಡ್‌ನ ಹೀರೋ ಆಗ್ತಿದ್ದಾರೆ. ಅಂದ್ರೆ ಈಗಾಗಲೇ ರಿಷಭ್‌ ಶೆಟ್ಟಿ ಹೀರೋ ಆಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೇನು ಹೀರೋ ಆಗೋದು ಅನ್ನೋ ಡೌಟ್‌ ಆಗ್ತಿದ್ಯಾ , ಆದ್ರೆ ಈ ಬಾರಿ ರಿಷಭ್‌ ಹೀರೋ ಅನ್ನೋ ಟೈಟಲ್‌ ಇಡ್ಕೊಂಡೆ ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್‌ ಮಾಡೋಕೆ ಹೊರಟ್ಟಿದ್ದಾರೆ. ಎಂ ಭರತ್‌ ರಾಜ್‌ ಚೊಚ್ಚಲ ನಿರ್ದೇಶನದ ಈ ಸಿನಿಮಾಕ್ಕೆ ರಿಷಭ್‌ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ರಿಷಭ್‌ ಕಾಣಿಸಿಕೊಳ್ತಿದ್ದಾರೆ. ಇನ್ನು ಈ ಸಿನಿಮಾದ ವಿಶೇಷ ಏನು ಅಂದ್ರೆ ಲಾಕ್‌ ಡೌನ್‌ ಟೈಂನಲ್ಲೇ ಈ ಸಿನಿಮಾವನ್ನು ರೆಡಿಮಾಡಿದ್ದು, ಅದರ ಫಸ್ಟ್‌ ಲುಕ್‌ ಇಂದು ರಿವೀಲ್‌ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top