
ಪ್ರತಿ ಬಾರಿ ಹಾವನ್ನು ಹಿಡಿದು ಅದರ ಜೊತೆ ಆಟವಾಡ ಹುಚ್ಚು ಆಸೆ ಹೊಂದಿದ್ದ ವ್ಯಕ್ತಿಯೊಬ್ಬ ಹಾವನ್ನು ಹಿಡಿದು ಅದರ ಜೊತೆ ಚೆಲ್ಲಾಟ ಆಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡು ಹಾವನ್ನು ಕೊಂದು ತಾನು ಸತ್ತ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯ ಮುಕ್ಕಲ್ ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪ ತಳವಾರ ಮೃತ ಪಟ್ಟ ವ್ಯಕ್ತಿ.
ಹಾವು ಕಂಡರೆ ಅವುಗಳನ್ನು ಹಿಡಿದು ಆಟವಾಡುತ್ತಿದ್ದ ಸಿದ್ದಪ್ಪನಿಗೆ ಈ ಬಾರಿಯು ಸಹ ಹಾವು ಹಣ್ಣಿಗೆ ಬಿದ್ದಿದ್ದು ಅದನ್ನು ಹಿಡಿದು ಅದರ ಜೊತೆ ಆಟವಾಡಲು ಹೋಗಿದ್ದಾನೆ. ಆದ್ರೆ ಈ ಬಾರಿ ತಾನು ಹಿಡಿದ ಹಾವು ಆತನ ಜೊತೆ ಆಟವಾಡದೆ ಆತನ ಸಾವಿನ ಸವಾರಿಯಾಗಿದೆ ಸಿದ್ದಪ್ಪನ ಕುತ್ತಿಗೆಗೆ ಸುತ್ತಿಕೊಂಡ ಹಾವು ಸಿದ್ದಪ್ಪನಿಗೆ ಕಚ್ಚಿದೆ, ಹಾವು ಕಚ್ಚಿದ್ದಕ್ಕೆ ಕೋಪಗೊಂಡ ಸಿದ್ದಪ್ಪ ತಾನೇ ಹಾವನ್ನು ಕೊಂದಿದ್ದಾನೆ, ಈ ವೇಳೆಗಾಗಲೇ ಹಾವಿನ ವಿಷ ಸಿದ್ದಪ್ಪನ ಪೂರ್ತಿ ದೇಹಕ್ಕೆ ಏರಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.