
ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ 12ರನ್ಗಳ ಸೋಲನ್ನು ಕಂಡರು ಸರಣಿಯಲ್ಲಿ 2-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು. ಟೀಂ ಇಂಡಿಯಾ ಸರಣಿ ಗೆಲುವಿನ ಖುಷಿಯಲ್ಲಿ ಇದ್ದು, ಈ ನಡುವೆ ಟೀಂ ಇಂಡಿಯಾದ ಹೊಡಿಬಡಿ ದಾಂಡಿಗ ಹಾರ್ದಿಕ್ ಪಾಂಡ್ಯ ಅವರ ಆ ಒಂದು ನಡೆ ಇದೀಗ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು ಪಾಂಡ್ಯ ಟಿ 20 ಸರಣಿಯಲ್ಲಿ ಅಧ್ಬುತ ಪ್ರದರ್ಶನ ತೋರುವ ಮೂಲಕ ಸರಣಿಯಲ್ಲಿ ಉತ್ತಮ ಆಟಗಾರ ಅಂತ ಅನಿಸಿಕೊಂಡಿದ್ದು, ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನಾರಾಗಿದ್ರು, ಆದ್ರೆ ಪಾಂಡ್ಯ ಪ್ರಶಸ್ತಿ ಸ್ವೀಕರಿಸಿದ ಬಳಿಕ ತೋರಿದ ವರ್ತನೆಯಿಂದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಟಿ 20 ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಪಾಂಡ್ಯ ಪ್ರಶಸ್ತಿ ಪಡೆದ ನಂತರ ಅದನ್ನು ತಾನು ಇಟ್ಟುಕೊಳ್ಳದೆ ಈ ಸರಣಿಯಲ್ಲಿ ನನಗಿಂತ ನಟರಾಜನ್ ಈ ಪ್ರಶಸ್ತಿಗೆ ಹೆಚ್ಚು ಅರ್ಹ ಎಂದು ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನಟರಾಜನ್ಗೆ ನೀಡಿದ್ದಾರೆ. ನಟರಾಜನ್ ಟೀಂ ಇಂಡಿಯಾ ಸರಣಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದಾರೆ. ಪಾದಾರ್ಪಣೆ ಟೂರ್ನಿಯಲ್ಲಿಯೇ ಉತ್ತಮ ಪ್ರದರ್ಶನ ತೋರಿದ್ದಾರೆ. ಶ್ರಮಕ್ಕೆ ತಕ್ಕ ಫಲ ಅವರಿಗೆ ಸಿಕ್ಕಿದೆ ಈ ಪ್ರಶಸ್ತಿಗೆ ಅವರು ಅರ್ಹ ಎಂದು ಪಾಂಡ್ಯ ಹೇಳಿದ್ದಾರೆ.
ನಟರಾಜನ್ ಮೂರು ಟಿ 20 ಪಂದ್ಯಗಳಿಂದ 6 ವಿಕೆಟ್ ಪಡೆದಿದ್ರು, ಇನ್ನು ಎರಡನೇ ಟಿ 20 ಪಂದ್ಯದ ವೇಳೆಯು ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವೇಳೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ನಟರಾಜನ್ ಅರ್ಹ ಅಂತಾನೂ ಹೇಳಿದ್ರು, ಇದೀಗ ಪಾಂಡ್ಯ ಸರಣಿ ಶೇಷ್ಠ ಪ್ರಶಸ್ತಿಯನ್ನು ನಟರಾಜನ್ಗೆ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಗೆದ್ದಿದ್ದಾರೆ.
ಇದೀಗ ಕ್ರಿಕೆಟ್ ದಂತ ಕಥೆ ಬ್ರಿಯಾನ್ ಲಾರಾ ಕೆ ಎಲ್ ರಾಹುಲ್ ನನ್ನ ಫೇವರಿಟ್ ಬ್ಯಾಟ್ಸಮನ್ ಅನ್ನೋ ಮೂಲಕ ರಾಹುಲ್ ಬ್ಯಾಟಿಂಗ್ ಬಗ್ಗೆ ಹೊಗಳಿದ್ದಾರೆ. ಇತ್ತಿಚೆಗೆ ಚಾಹಲ್ ನಡೆಸಿಕೊಡೋ ಚಾಹಲ್ ಟಿವಿಯಲ್ಲಿ ಮಾತನಾಡುವ ವೇಳೆ ವಿಶ್ವ ಕ್ರಿಕೆಟ್ನಲ್ಲಿ ನನ್ನ ಫೇವರಿಟ್ ಬ್ಯಾಟ್ಸಮನ್ ಕೆ ಎಲ್ ರಾಹುಲ್ ಎಂದು ಬ್ರಿಯಾನ್ ಲಾರಾ ಹೇಳಿದ್ದು, ಎರಡನೇ ಟಿ 20 ಪಂದ್ಯದ ವೇಳೆ ರಿಕಿಪಾಟಿಂಗ್ ನಿಮ್ಮ ಫೇವರೆಟ್ ಪ್ಲೇಯರ್ ಯಾರು ಎಂಬ ಪ್ರಶ್ನೆಗೆ ಲಾರಾ ಕೆ ಎಲ್ ರಾಹುಲ್ ಎಂದು ಉತ್ತರಿಸುವ ಜೊತೆಗೆ ರಾಹುಲ್ ಬ್ಯಾಟಿಂಗ್ ಅನ್ನು ನಾನು ದುಡ್ಡು ಕೊಟ್ಟು ಬೇಕಾದ್ರು ನೋಡುತ್ತೇನೆ ಅನ್ನೋ ಮೂಲಕ ರಾಹುಲ್ ಆಟದ ಬಗ್ಗೆ ಮನಸಾರೆ ಹೋಗಳಿದ್ರು. ಆ ಮೂಲಕ ರಾಹುಲ್ ಒಬ್ಬ ವಿಶ್ವ ಕ್ರಿಕೆಟ್ನ ಶ್ರೇಷ್ಟ ಆಟಗಾರ ಅನ್ನೋದನ್ನ ಬ್ರಿಯಾನ್ ಲಾರಾ ಹೇಳಿದ್ರು.
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ 20 ಸರಣಿಯನ್ನು ಗೆಲ್ಲುವ ಮೂಲಕ ಯಾರು ಮಾಡದ ಹೊಸ ದಾಖಲೆಯನ್ನು ವಿರಾಟ್ ಕೊಹ್ಲಿ ಮಾಡಿದ್ದಾರೆ. ಹೌದು ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಟಿ 20 ಸರಣಿ ಗೆಲ್ಲುವ ಮೂಲಕ ಎಲ್ಲಾ ಮಾದರಿ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿದ ಏಷ್ಯಾನ್ ಕ್ಯಾಪ್ಟನ್ ಅನ್ನೋ ಹೆಗ್ಗಳಿಕೆಗೆ ಇದೀಗ ವಿರಾಟ್ ಕೊಹ್ಲಿ ಪಾತ್ರವಾಗಿದ್ದು, ಇದರ ಜೊತೆಯಲ್ಲಿ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡೋ ಮೂಲಕ ತಂಡಕ್ಕೆ 85ರನ್ ಕೊಡುಗೆ ನೀಡುವ ಜೊತೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲಿ ಮೂರು ಸಾವಿರ ರನ್ಗಳನ್ನು ಕಲೆಹಾಕಿದ ಎರಡನೇ ಭಾರತೀಯ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಇದ್ದು ನಂತರ ಸ್ಥಾನವನ್ನು ವಿರಾಟ್ ಕೊಹ್ಲಿ ಪಡೆದುಕೊಂಡಿದ್ದಾರೆ. ಆ ಮೂಲಕ ದಾಖಲೆಗಳ ಸರದಾರನಾಗಿರೋ ವಿರಾಟ್ ಕೊಹ್ಲಿ ಖಾತೆಗೆ ಇನ್ನೊಂದು ದಾಖಲೆ ಸೇರ್ಪಡೆಯಾಗಿದೆ.
ಹಾಗಾದ್ರೆ ಇವತ್ತಿನ ಪಂದ್ಯದ ನಂತರ ಪಾಂಡ್ಯ ತೋರಿದ ವರ್ತನೆ ಬಗ್ಗೆ ನಿಮ್ಮ ಅನಿಸಿಕೆ ಏನು, ವಿರಾಟ್ ದಾಖಲೆ ಬಗ್ಗೆ ನೀವ್ ಏನ್ ಹೇಳ್ತೀರಾ, ಕೆ ಎಲ್ ರಾಹುಲ್ ಬಗ್ಗೆ ಲಾರಾ ಹೇಳಿದ ಮಾತಿನ ಬಗ್ಗೆ ನಿಮ್ಮ ಕಾಮೆಂಟ್ ಏನು ನಮಗೆ ತಿಳಿಸಿ.