ಸ್ಯಾಂಡಲ್‌ವುಡ್‌ ಉಪಾಧ್ಯಕ್ಷರಾದ ಕಾಮಿಡಿ ಕಿಂಗ್‌ ಚಿಕ್ಕಣ್ಣ..

ಕಾಮಿಡಿ ಕಿಂಗ್‌ ಚಿಕ್ಕಣ್ಣ ಇನ್ನು ಮುಂದೆ ಸ್ಯಾಂಡಲ್‌ವುಡ್‌ನಲ್ಲಿ ಪರ್ಮನೆಂಟ್‌ ಉಪಾಧ್ಯಕ್ಷರಾಗಿ ಉಳಿಯಲಿದ್ದಾರೆ. ಹಾಗಾತ ನಾವ್‌ ಹೇಳ್ತಾ ಇಲ್ಲ ಸ್ಯಾಂಡಲ್‌ವುಡ್‌ನ ಚಿತ್ರತಂಡ ಹೇಳ್ತಾ ಇದೆ. ಹೌದು ಕಾಮಿಡಿ ಕಿಂಗ್‌ ಚಿಕ್ಕಣ್ಣ ಇನ್ನು ಮುಂದೆ ಉಪಾಧ್ಯಕ್ಷರಾಗಿ ಹೀರೋ ಆಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಲಿದ್ದಾರೆ.

ತಮ್ಮ ಕಾಮಿಡಿ ಮೂಲಕ ಸಿನಿರಸಿಕರನ್ನು ರಂಜಿಸಿದ್ದ ಚಿಕ್ಕಣ್ಣ ಇನ್ನು ಮುಂದೆ ಸೋಲೋ ಹೀರೋ ಆಗಿ ಮಿಂಚಲಿದ್ದಾರೆ. ಚಿಕ್ಕಣ್ಣ ಸೋಲೋ ಹೀರೋ ಆಗಿ ʻಉಪಾಧ್ಯಕ್ಷʼ ಅನ್ನೋ ಚಿತ್ರದ ಮೂಲಕ ಲಾಂಚ್‌ ಆಗುತ್ತಿದ್ದಾರೆ. ಆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಪರ್ಮನೆಂಟ್‌ ʻಉಪಾಧ್ಯಕ್ಷʼರಾಗಿ ಇರಲಿದ್ದಾರೆ.

ಈ ಉಪಾಧ್ಯಕ್ಷ ಚಿತ್ರಕ್ಕೆ ಡಬಲ್‌ ಇಂಜಿನ್‌,ಬ್ರಹ್ಮಚಾರಿ ಮತ್ತು ಬಾಂಬೆ ಮಿಠಾಯಿ ಚಿತ್ರಗಳಿಗೆ ಆಕ್ಷನ್‌ ಕಟ್‌ ಹೇಳಿದ್ದ ಚಂದ್ರಮೋಹನ್‌ ಉಪಾಧ್ಯಕ್ಷ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ರಾಬರ್ಟ್‌ ಮತ್ತು ಮದಗಜ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಬಂಡವಾಳ ಹೂಡುತ್ತಿದ್ದಾರೆ.

ಹೆಬ್ಬಾಳದ ಅರ್ಜುನ್‌ ಜನ್ಯ ಸ್ಟೂಡಿಯೋದಲ್ಲಿ ರೆಕಾರ್ಡಿಂಗ್‌ ಪ್ರಾರಂಭಿಸೋ ಮೂಲಕ ಉಪಾಧ್ಯಕ್ಷ ಚಿತ್ರದ ಕೆಲಸಕ್ಕೆ ಚಾಲನೆ ನೀಡಿದ್ದು, ಸಿನಿಮಾದ ಸ್ಕ್ರಿಪ್ಟ್‌ಗೆ ಪೂಜೆ ಮಾಡು ಕೆಲಸ ಶುರುಮಾಡಿದ್ದಾರೆ. ಈ ವೇಳೆ ಚಿತ್ರದ ನಾಯಕ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ,ನಿರ್ದೇಶಕ ಮಹೇಶ್‌, ತರುಣ್‌ ಸುದೀರ್‌,ಅರ್ಜುನ್‌ ಜನ್ಯ,ಎಪಿ ಅರ್ಜುನ್‌ ಉಪಸ್ಥಿತರಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top