ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಕಣ್ಣೀರು ಹರಿಸಲು ತಯಾರಾದ ಎಸ್‌.ಮಹೇಂದರ್‌..!

ಸ್ಯಾಂಡಲ್‌ವುಡ್‌ನ ಕಣ್ಣೀರಿನ ಡೈರೆಕ್ಟರ್‌ ಅಂತಾನೇ ಕರೆಸಿಕೊಳ್ಳೋ ಎಸ್‌.ಮಹೇಂದರ್‌ ತಮ್ಮ ಸಂಸಾರಿಕ ಜೀವನದಲ್ಲಿ ಆದ ಏರಿಳಿತಗಳಿಂದಾಗಿ ಸ್ಯಾಂಡಲ್‌ವುಡ್‌ನಿಂದ ದೂರವೇ ಉಳಿದು ಬಿಟ್ಟಿದ್ರು, ನಂತರ ಒನ್ಸ್‌ ಮೋರ್‌ ಅಂತ ಒನ್ಸ್‌ ಮೋರ್‌ ಕೌರವ ಅಂತ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿಕೊಟ್ರು ಅಷ್ಟೇನೂ ಸದ್ದು ಮಾಡಲಿಲ್ಲ. ಆ ನಂತರ ಎಸ್‌ ಮಹೇಂದರ್‌ ಎಲ್ಲಿ ಹೋದ್ರು ಏನೂ ಮಾಡ್ತಾ ಇದ್ದಾರೆ ಅನ್ನೋ ಚರ್ಚೆಗಳು ಕೂಡ ಶುರುವಾಗಿತ್ತು. ಇದಕ್ಕೆಲ್ಲ ಉತ್ತರಕೊಡೋಕೆ ಎಸ್‌ ಮಹೇಂದರ್‌ ಸೌಂಡ್‌ ಮಾಡ್ಕೊಂಡು ಬರ್ತಾ ಇದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಶಬ್ದ ಮಾಡಲು ರೆಡಿಯಾದ ಮಹೇಂದರ್‌..!

ಎಸ್‌ ಮಹೇಂದರ್‌ ಸ್ಯಾಂಡಲ್‌ವುಡ್‌ಗೆ ಈಗ ಮತ್ತೆ ಎಂಟ್ರಿಕೊಟ್ಟಿದ್ದಾರೆ. ಅದು ʻಶಬ್ದʼ ಅನ್ನೋ ಸಿನಿಮಾದ ಮೂಲಕ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕನ ಪಾತ್ರದ ಜೊತೆ ನಿರ್ದೇಶನದ ಕ್ಯಾಪನ್ನು ತೊಟ್ಟಿರೋ ಮಹೇಂದರ್‌ಗೆ ಜೋಡಿಯಾಗಿ ಸೋನುಗೌಡ ಕಾಣಿಸಿಕೊಳ್ಳಲಿದ್ದಾರೆ. ʻಶಬ್ದʼ ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು. ಸೋನುಗೌಡ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದಲ್ಲಿ ಅತುಲ್‌ ಕುಲಕರ್ಣಿ ಕಾಣಿಸಿಕೊಳ್ಳುತ್ತಿರೋ ಸಿನಿಮಾದ ಮತ್ತೊಂದು ವಿಶೇಷ.

ನಾಯಕನಾಗಿ ಮತ್ತೆ ಅದೃಷ್ಟಕ್ಕೆ ನಿಂತ ಎಸ್‌.ಮಹೇಂದರ್‌..!

ಮಹೇಂದರ್‌ ಇದೇ ಮೊದಲು ನಾಯಕನಾಗಿ ಕಾಣಸಿಕೊಳ್ಳುತ್ತಿಲ್ಲ, 2001ರಲ್ಲಿ ಗಟ್ಟಿಮೇಳ ಸಿನಿಮಾದಲ್ಲಿ ನಾಯಕನಾಗಿ ಯಶಸ್ಸನ್ನು ಸಹ ಕಂಡಿದ್ದರು. ಆ ನಂತರದಲ್ಲಿ ಯಾವುದೇ ಸಿನಿಮಾದಲ್ಲೂ ನಾಯಕನಾಗಿ ಕಾಣಿಸಿಕೊಳ್ಳದ ಮಹೇಂದರ್‌ ಈಗ ʻಶಬ್ದʼ ಚಿತ್ರದ ಮೂಲಕ ನಾಯಕನಾಗಿ ಮತ್ತೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top