ಸ್ಮಾರ್ಟ್ ಕಾರ್ಡ್ ಇದ್ರೆ ಮಾತ್ರ ಮೆಟ್ರೋ ಪ್ರಯಾಣಕ್ಕೆ ಅವಕಾಶ..

4ನೇ ಹಂತದ ಅಲ್‍ಲಾಕ್ ಪ್ರಕ್ರಿಯೆ ನಡೆದಿದ್ದು, ಇದೀಗ ಮೆಟ್ರೋ ಸಂಚಾರಕ್ಕೆ ಅನುಮತಿ ದೊರೆತಿದೆ. ಸೆಪ್ಟೆಂಬರ್ 7ರಿಂದ ಮೆಟ್ರೋ ಸಂಚಾರ ಶುರುವಾಗಲಿದ್ದು, ಮೆಟ್ರೋ ಸಂಚಾರ ಮಾಡಬೇಕಾದ್ರೆ ಸ್ಮಾರ್ಟ್ ಕಾರ್ಡ್ ಇದ್ರೆ ಮಾತ್ರ ಪ್ರಯಾಣಕ್ಕೆ ಅವಕಾಶ ಇರುತ್ತದೆ. ದೆಹಲಿಯಲ್ಲಿ ಈ ರೀತಿಯ ಮಾರ್ಗಸೂಚಿಯನ್ನು ತಯಾರು ಮಾಡಿದ್ದು, ಈಗಾಗಲೇ ಮೆಟ್ರೋ ಸ್ಟೇಷನ್‍ಗಳನ್ನು ಸ್ಯಾನಿಟೈನ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ದೆಹಲಿ ಮೆಟ್ರೋ ಸಂಚಾರ ನಿಗಮ ಮಂಡಳಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಮೆಟ್ರೋ ಸಂಚಾರಕ್ಕೆ ಸ್ಮಾರ್ಟ್ ಕಾರ್ಡ್ ಹಾಗೂ ಮಾಸ್ಕ್ ಕಡ್ಡಾಯವಾಗಿದೆ.

ಇನ್ನು ಮೆಟ್ರೋ ಪ್ರಯಾಣದಲ್ಲಿ ಟೋಕನ್ ಟಿಕೆಟ್‍ಗಳಿಗೆ ಅವಕಾಶವಿರುವುದಿಲ್ಲ, ಟೋಕನ್ ಕಾಯಿನ್ ಟಿಕೆಟ್‍ನಿಂದ ಸೋಂಕು ಹರಡುವ ಭೀತಿ ಇದ್ದು ಸ್ಮಾರ್ಟ್ ಕಾರ್ಡ್‍ಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರತಿ ನಿಲ್ದಾಣದಲ್ಲೂ ಥರ್ಮಲ್ ಸ್ಕ್ಯಾನರ್ ಅಳವಡಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಸಾಕಷ್ಟು ಸುರಕ್ಷತೆ ಕ್ರಮಗಳನ್ನು ಕೈಗೊಂಡಿದೆ. ಇನ್ನು ದೆಹಲಿ ರೀತಿಯಲ್ಲಿ ಕರ್ನಾಟಕದಲ್ಲೂ ನಮ್ಮ ಮೆಟ್ರೋದಲ್ಲೂ ಸ್ಮಾರ್ಟ್ ಕಾರ್ಡ್‍ಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತಾರ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top