ಸ್ಟೇಜ್‌ ಮೇಲೆ ಚಿಕನ್‌ ತಿಂದು ಕೊರೊನಾ ಬರಲ್ಲ ಅಂದ್ರು ರಾಜಕೀಯ ವ್ಯಕ್ತಿಗಳು..!

ಕೊರೊನಾ ವೈರಸ್‌ ಈಗ ಜಗತ್ತಿನಾದ್ಯಂತ ಭೀತಿ ಹುಟ್ಟಿಸಿದ್ದು, ಸದ್ಯ ಭಾರತದಲ್ಲೂ ಇದರ ಭೀತಿ ಹೆಚ್ಚಾಗೆ ಇದೆ. ಅದರಲ್ಲೂ ಚಿಕನ್‌ ತಿನ್ನುವುದರಿಂದ ಕೊರೊನಾ ಬರುತ್ತದೆ ಎಂಬ ವದಂತಿ ಹಬ್ಬಿರೋದ್ರಿಂದಾಗಿ ಚಿಕನ್‌ ತಿನ್ನಲು ಜನರು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಶೇಕಡಾ 50ರಷ್ಟು ಚಿಕನ್‌ ಮಾರಾಟ ಕುಸಿತ ಕಂಡಿದೆ ಎಂದು ವರದಿ ಕೂಡ ಬಂದಿದೆ. ಇದರ ಬೆನ್ನಲ್ಲೇ ಈ ಬೆಳವಣಿಗೆಯನ್ನು ಗಮನಿಸಿದ ತೆಲಂಗಾಣದ ಕೆಲ ರಾಜಕೀಯ ನಾಯಕರು ಅಲ್ಲಿನ ಜನರಿಗೆ ವಿಭಿನ್ನ ರೀತಿಯಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ. ಅದರಂತೆ ತೆಲಂಗಾಣದ ಸಚಿವರಾದ ಕೆ.ಟಿ.ರಾಮರಾವ್‌, ಎಟೆಲ್‌ ರಾಜೇಂದ್ರ, ತಲಸನಿ ಶ್ರೀನಿವಾಸ್‌ ಯಾದವ್‌ ಮತ್ತು ಇನ್ನಿತರು ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಚಿಕನ್‌ ತಿನ್ನುವುದರ ಮೂಲಕ ಕೋಳಿ ತಿನ್ನುವುದರಿಂದ ಕೊರೊನಾ ಹರಡಲ್ಲ ಎಂದು ತಿಳಿಸಿದ್ದಾರೆ.

ಇನ್ನು ಈ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಇದರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top