ಸ್ಟಾರ್‌ ಹೋಟೆಲ್‌ಗಳಲ್ಲಿ ಈ ವಸ್ತುಗಳನ್ನು ಕದೀತಾರಂತೆ ರಶ್ಮಿಕಾ ಮಂದಣ್ಣ

ಸ್ಯಾಂಡಲ್‌ವುಡ್‌ ಕ್ರಶ್‌ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಮಾಡಿರೋದು ಕೇವಲ ಬೆರಳೆಣಿಯ ಸಿನಿಮಾ, ಸದ್ಯ ರಶ್ಮಿಕಾ ಟಾಲಿವುಡ್‌ ಮತ್ತು ಕಾಲಿವುಡ್‌ನಲ್ಲಿ ಸಖತ್‌ ಬ್ಯೂಸಿಯಾಗಿದ್ದು, ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳನ್ನು ನೀಡ್ತಾ ಇದ್ದಾರೆ. ಆದ್ರೆ ರಶ್ಮಿಕಾ ಮಂದಣ್ಣ ಇದೀಗ ತಾವು ಕಳ್ಳತನ ಮಾಡುವುದರ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇತ್ತಿಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಲೈವ್‌ನಲ್ಲಿ ಮಾತನಾಡುವಾಗ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ರಶ್ಮಿಕಾ ಮಂದಣ್ಣ ತಮಗೆ ಇರುವ ಒಂದು ಖಯಾಲಿಯನ್ನು ಹೇಳಿಕೊಂಡಿದ್ದಾರೆ.

ತಾವು ಶೂಟಿಂಗ್‌ ಸಮಯದಲ್ಲಿ ಇಲ್ಲ ಬೇರೆ ಯಾವುದೇ ವಿಚಾರದಲ್ಲಿ ದೊಡ್ಡ ಸ್ಟಾರ್‌ ಹೋಟೆಲ್‌ಗಳಲ್ಲಿ ಉಳಿದುಕೊಂಡಾಗ ಅಲ್ಲಿ ಇರುವ ಶಾಂಪುವನ್ನು ಕಳ್ಳತನ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ತಾವು ತಂಗಿರುವ ಹೋಟೆಲ್‌ನಲ್ಲಿ ಇಟ್ಟಿರುವ ಶಾಂಪು ಇಷ್ಟವಾದರೆ ಅದನ್ನು ಬ್ಯಾಗಿಗೆ ಹಾಕಿಕೊಂಡು ಬರುತ್ತೇನೆ ಜೊತೆ ದಿಂಬಿಗೆ ಹಾಕಿರೋ ಕವರ್‌ ಇಷ್ಟವಾದರು ಅದನ್ನು ಸಹ ನಾನು ತೆಗೆದುಕೊಂಡು ಬರುತ್ತೇನೆ ಎಂದು ರಶ್ಮಿಕಾ ಮಂದಣ್ಣ ತಾವು ಕಳ್ಳತನ ಮಾಡುವ ವಿಚಾರವನ್ನು ಸ್ವತಃ ಹೇಳಿಕೊಂಡಿದ್ದಾರೆ.

ಇನ್ನು ಲಾಕ್‌ಡೌನ್‌ ಟೈಂನಲ್ಲಿ ಹೇಗೆ ಟೈಂ ಕಳೆದ್ರು ಮತ್ತು ಇಷ್ಟವಾದ ಅಡುಗೆ ಮತ್ತು ಕೆಲಸದ ಬಗ್ಗೆನೂ ಹೇಳಿಕೊಂಡಿದ್ದು. ಇನ್ನು ನಿಮಗೆ ಆರ್‌ಸಿಬಿ, ಹೈದರಬಾದ್‌ ತಂಡದಲ್ಲಿ ಯಾವುದು ಇಷ್ಟವಾದ ತಂಡ ಅಂತ ಕೇಳಿದ ಪ್ರಶ್ನೇಗೆ ತಂಡ ಅನ್ನೋದಕ್ಕಿಂತ ಕ್ರಿಕೆಟ್‌ ಅಂದ್ರೆ ಇಷ್ಟ ಅಂತ ಜಾಣ್ಮೆಯ ಉತ್ತರವನ್ನು ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top