ಸೌತ್ ಆಫ್ರಿಕಾದಲ್ಲಿ ಆಶಿಕಾ- ಇಶಾನ್ ಮ್ಯಾಜಿಕ್​.. ವಿಶ್ಚದೆಲ್ಲೆಡೆ‌ ‘ರೇಮೊ’ ಜಪ..!

ಪವನ್​ ಒಡೆಯರ್​.. ಲವ್ ಸ್ಟೋರಿ ಸಿನಿಮಾಗೆ ಲವ್ ಗುರು ಇದ್ದಂತೆ. ಪವನ್​ ನಿರ್ದೇಶನದ ಯಾವುದೇ ಚಿತ್ರವಾದ್ರೂ ಹಿತವೆನಿಸೋ ಲವ್ ಸ್ಟೋರಿ ಇರುತ್ತೆ. ‘ಗೂಗ್ಲಿ’ ಈ ಜನರೇಷನ್ನಿನ​ ಲವ್​ಸ್ಟೋರಿಗೆ ಓಂಕಾರ ಹಾಕಿತ್ತು. ಬಾಕ್ಸ್​ ಆಫೀಸ್​ ಕಿಂಗ್​ ಆಗೋದ್ರ ಜೊತೆಗೆ ಜನರ ಮನಸ್ಸಿನಲ್ಲೂ ಗೂಗ್ಲಿ ತಿರುಗಿಸಿತ್ತು. ಬಳಿಕ ಪವನ್​ ಒಡೆಯರ್​ ಹಾರರ್​, ಆ್ಯಕ್ಷನ್​, ಕಾಮಿಡಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. ಇದೀಗ ಹಳೆಯ ಗತ್ತಿನೊಂದಿಗೆ ‘ರೇಮೊ’ದಲ್ಲಿ ಕಂಬ್ಯಾಕ್ ಮಾಡಿದ್ದಾರೆ.

ಸೌತ್ ಆಫ್ರಿಕಾದಲ್ಲೂ ಒಡೆಯರ್ ಇಶಾನ್ ರೇಮೊ ಅಬ್ಬರ..!

ಆಶಿಕಾ – ಅದ್ಧೂರಿ‌ ನಿರ್ಮಾಪಕ ಸಿ.ಆರ್ ಮನೋಹರ್ ಸಹೋದರ ರೋಗ್ ಖ್ಯಾತಿಯ ಇಶಾನ್ ಒಟ್ಟಿಗೆ ನಟಿಸ್ತಿರೋ ‘ರೇಮೊ’ ಶೂಟಿಂಗ್​ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಚಿತ್ರತಂಡ ಹಂಚಿಕೊಂಡಿದ್ದ ಮೇಕಿಂಗ್​ ಚಿತ್ರಗಳು ಇಂಟರೆಸ್ಟಿಂಗ್ ಎನಿಸಿದ್ದವು. ಅಷ್ಟೊಂದು ಪಾಸಿಟಿವ್​ ಆಗಿ ಚಿತ್ರತಂಡ ರೆಡಿಯಾಗ್ತಿದೆ. ಸದ್ಯ ರೇಮೊ ಟೀಂ ಸೌತ್​ ಆಫ್ರಿಕಾದಲ್ಲಿ ಬೀಡು ಬಿಟ್ಟಿದ್ದು, ಜೋಹನ್ಸ್​ಬರ್ಗ್​, ಡರ್ಬನ್​, ಕೇಪ್​ಟೌನ್​ನಲ್ಲಿ ಶೂಟಿಂಗ್ ನಡೆಸ್ತಿದೆ. ಆಫ್ರಿಕಾ ಮಂದಿಯ ಬಾಯಲ್ಲೂ ‘ರೇಮೊ’ ಹೆಸರು ಕೇಳುವಷ್ಟರ ಮಟ್ಟಿಗೆ ಫೇಮಸ್ ಆಗಿಬಿಟ್ಟಿದೆ. ಬರೀ ಆಫ್ರಿಕಾವಲ್ಲ ಸಿನಿಮಾದ ಫಸ್ಟ್​ ಹಾಫ್​ ಶೂಟಿಂಗ್​ ಹತ್ತಾರು ದೇಶಗಳಲ್ಲಿ ನಡೆಯಲಿದೆ. ಹಾಡು ಹಾಗೂ ಆ್ಯಕ್ಷನ್​ ಸೀಕ್ವೆನ್ಸ್​ ಚಿತ್ರೀಕರಣವೂ ನಡೀತಿದೆ. ಅದ್ರ ಎಕ್ಸ್ ಕ್ಲೋಸೀವ್ ಝಲಕ್ ನ ಚಿತ್ರತಂಡ ರಿಲೀಸ್ ಮಾಡಿದೆ.

ಸಿನಿಮಾದ ಜೊತೆಗೆ ಕಥೆಯೂ ರಿಚ್​..!
ರೇಮೊ ಬಗ್ಗೆ ಪವನ್​ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಸಿನಿಮಾದ ಮೇಕಿಂಗ್ ರಿಚ್ ಆಗಿ ಬರ್ತಿದೆ. ರಿಚ್ ಸಿನಿಮಾದ ಅನ್ನೋದಲ್ಲೆ ನಮ್ಮ ಸಿನಿಮಾ ಬೆಸ್ಟ್ ಎಕ್ಸಾಂಪಲ್ ಆಗಲಿದೆ. ಯಾಕೆಂದ್ರೆ ರಿಚ್ ಮೇಕಿಂಗ್ ಜೊತೆಗೆ, ರಿಚ್​ ಕಥೆ ಸಿನಿಮಾದಲ್ಲಿದೆ. ಆಶಿಕಾ – ಇಶಾನ್​​ ಜೋಡಿ ತುಂಬಾನೇ ಫ್ರೆಶ್​ ಆಗಿದ್ದು, ಈ ಜೋಡಿ ದೊಡ್ಡ ಮ್ಯಾಜಿಕ್ ಮಾಡಲಿದೆ. ಇಶಾನ್​ ಪ್ರಾಮಿಸಿಂಗ್ ಸ್ಟಾರ್​ ಆಗಿ ನಿಲ್ತಾರೆ. ನಿರ್ಮಾಪಕ ಸಿ.ಆರ್​.ಮನೋಹರ ಸಿನಿಮಾಗೆ ಸಿಕ್ಕಾಪಟ್ಟೆ ಬಂಡವಾಳ ಹೂಡುತ್ತಿದ್ದಾರೆ. ಸಹೋದರ ಇಶಾನ್​ ಸಿನಿಮಾವಾದ್ರಿಂದ ಮನೋಹರ್ ಪ್ರತಿ ಶೂಟಿಂಗ್​ನಲ್ಲೂ ಜೊತೆಯಲ್ಲಿ ನಿಲ್ತಾರೆ’ ಅಂತಾ ತಿಳಿಸಿದ್ದಾರೆ. ಅಂದ್ಹಾಗೆ ಸೌತ್ ಆಫ್ರಿಕಾ ಭಾಗದ ಚಿತ್ರೀಕರಣವನ್ನ ಮುಗಿಸೋ ಹಂತದಲ್ಲಿರೋ ಚಿತ್ರತಂಡ, ಹೊಸ ಅಪ್ಡೇಟ್ಸ್ ಜೊತೆಗೆ ಕರ್ನಾಟಕಕ್ಕೆ ಬರ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top