ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರೋ ಈ ಹುಡುಗ ಯಾರು

ನಮಸ್ಕಾರ ವೀಕ್ಷಕರೆ ಇವತ್ತು ನಾವ್‌ ನಿಮಗೆ ಒಬ್ಬ ವ್ಯಕ್ತಿಯ ಪರಿಚಯವನ್ನು ಮಾಡಿಕೊಡ್ತಾ ಇದ್ದೇವೆ. ನೀವು ಈ ವ್ಯಕ್ತಿಯನ್ನ ಹೆಚ್ಚಾಗಿ ಸೋಶಿಯಲ್‌ ಮೀಡಿಯಾದ ಮಿಮ್ಸ್‌ಗಳಲ್ಲಿ ಶಾರ್ಟ್‌ ವಿಡಿಯೋದಲ್ಲಿ ನೋಡಿರ್ತಿರಿ. ನಿಮಗೆಲ್ಲರಿಗೂ ಈತ ಯಾರು, ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ಪ್ರಸಿದ್ಧಿ ಹೊಂದಿದ್ದಾನೆ ಅನ್ನೋ ಕುತೂಹಲ ನಿಮ್ಮೆಲ್ಲರಲ್ಲೂ ಮೂಡಿರುತ್ತದೆ. ಹಾಗಾದ್ರೆ ಆತ ಯಾರು ಆತನ ಹಿನ್ನೆಲೆಯೇನು, ಆತ ಎಲ್ಲಿಯವನು, ಆತನ ವಯಸ್ಸೆಷ್ಟು ಅನ್ನೋದರ ಬಗ್ಗೆ ಮಾಹಿತಿಯನ್ನು ಇವತ್ತು ನಾವ್‌ ನಿಮ್ಗೆ ನೀಡ್ತಾ ಇದ್ದಾವೆ.

ನೀವೆಲ್ಲರೂ ನೋಡಿರೋ ಹಾಗೇ ಈ ಚಿಕ್ಕ ಬಾಲಕ ಹೆಸರು ಒಸಿತಾ ಇಹೆಮ್‌ ಎಂದು, ನೈಜೀರಿಯಾದ ಪ್ರಜೆ ಆಗಿರೋ ಈ ಕಲಾವಿದೆ 2002 ರಿಂದ ನಟನೆಯಲ್ಲಿ ಇದ್ದು, ಈತ ಇಂಡಿಯಾದಲ್ಲಿ ಫೇಮಸ್‌ ಆಗಿದ್ದು ಮಾತ್ರ 2019ರಲ್ಲಿ, 1973 ಫೆಬ್ರವರಿ 20ರಂದು ನೈಜೀರಿಯಾದ ಎಮೋ ಸ್ಟೇಟ್‌ ಬೈತೋಲಿಯಲ್ಲಿ ಜನಿಸಿದ್ರು. ಈಗಲೂ ಸಣ್ಣ ಹುಡುಗನಾಗಿ ನಮ್ಮೆಲ್ಲರನ್ನೂ ನಗಿಸ್ತಾ ರಂಜಿಸ್ತಾ ಇರೋ ಇವರ ವಯಸ್ಸು 47 ವರ್ಷ, ಹುಟ್ಟುತ್ತಲೇ ಸಮಸ್ಯೆಯೊಂದಿಗೆ ಹುಟ್ಟಿದ ಈ ಬಾಲಕ ವಯಸ್ಸು ಆಗುತ್ತಾ ಹೋದ್ರು ದೇಹದಲ್ಲಿ ಮತ್ತು ಧ್ವನಿಯಲ್ಲಿ ಹೆಚ್ಚು ಬದಲಾವಣೆಯಾಗದೆ ಸಣ್ಣ ಬಾಲಕನಂತೆ ಕಾಣಲು ಶುರುವಾಯ್ತು, ಚಿಕ್ಕಂದಿನಿಂದಲೂ ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಒಸಿತಾ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪಧವಿಯನ್ನು ಪಡೆದಿದ್ದಾರೆ.

ಹುಟ್ಟಿನಿಂದಲೇ ಹುಬ್ಜನಾಗಿ ಹುಟ್ಟಿದ ಒಸಿತಾ ಯಾವತ್ತು ಸಹ ತನ್ನ ಅಸಹಜವಾದ ದೇಹದ ಕಾರಣದಿಂದ ಕುಗ್ಗಲಿಲ್ಲ, ತನ್ನ ನ್ಯೂನ್ಯತೆಯನ್ನೇ ವರವಾಗಿಸಿಕೊಂಡ ಒಸಿತಾ ಎಲ್ಲರನ್ನು ನಗಿಸೋ ಪ್ರೌರುತ್ತಿಗೆ ಕೈ ಹಾಕಿ ಇದುವರೆಗೂ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯದ ಮೂಲಕ ನಮ್ಮನ್ನು ರಂಜಿಸುತ್ತಿದ್ದಾರೆ. ಒಸಿತಾ ಈಗ ಕೇವಲ ಒಬ್ಬ ನಟ ಮಾತ್ರವಲ್ಲ ಒಬ್ಬ ನಿರ್ಮಾಪಕ ಕೂಡ, 2002ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ಒಸಿತಾ ಮೊದಲ ಬಾರಿಗೆ ನಟನೆ ಮಾಡಿದ ಸಿನಿಮಾ ಹೆಸರು ಒಕ್ಕೂನಾ ಉಕಾ ಅನ್ನೋ ಸಿನಿಮಾ ಮೂಲಕ ನಂತರ ಇವರಿಗೆ ಹೆಚ್ಚು ಪ್ರಸಿದ್ಧ ತಂದು ಕೊಟ್ಟ ಪಾತ್ರ ಪಾವ್‌ ಪಾವ್‌.

ಒಸಿತಾನ ಪಾವ್‌ ಪಾವ್‌ ಪಾತ್ರದಲ್ಲಿ ಆತನ ನೈಜ ನಟನೆಗೆ ಸಿನಿರಸಿಕರು ಮಾರು ಹೋದ್ರು, ಇನ್ನು ಒಸಿತಾ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಸಹ ಲಭಿಸಿದ್ದು, 2007ರಲ್ಲಿ ಇವರ ನೈಜ ನಟನೆಗೆ ನೈಜೀರಿಯಾದ ಚಿತ್ರರಂಗದ ಜೀವಮಾನದ ಶ್ರೇಷ್ಠ ಸಾಧನಾ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ಅಕಾ ಗುಮ್‌,ಟ್ವಿನ್‌ ಬ್ರದರ್‌,ಜಾನಿ ಜಸ್ಟ್‌ ಕಮ್‌,ಬೇಬಿ ಪೋಲಿಸ್‌, ಐ ಆಮ್‌ ಇನ್‌ ಲವ್‌,ಬಾಯ್ಸ್‌ ಫ್ರಮ್‌ ಹೊಲಾನ್ಡ್‌, ಒಸಿತಾ ನಟಿಸಿದ ಪ್ರಮುಖ ಚಿತ್ರಗಳು, ಒಸಿತಾ ನೈಜೀರಿಯಾದ ಹಿರಿಮೆಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟ ಕಾರಣಕ್ಕಾಗಿ ನೈಜೀರಿಯಾದ ಪ್ರತಿಷ್ಠಿತ ಪ್ರಶಸ್ತಿಯಾದ ಫೆಡರಲ್‌ ರಿಪಬ್ಲಿಕ್‌ನ ಗೌರವ ಸದಸ್ಯತ್ವದ ಪ್ರಶಸ್ತಿಯನ್ನು ನೀಡಿ 2011ರಲ್ಲಿ ಗೌರವಿಸಿದೆ. ಸಣ್ಣ ಪಾತ್ರದ ಮೂಲಕ ಜೀವನ ನಡೆಸುತ್ತಿದ್ದ ಒಸಿತಾ ಇದು ದೊಡ್ಡ ಮಟ್ಟಕ್ಕೆ ಬೆಳೆದ್ದು, ಇಂದು ಇವರ ವಾರ್ಷಿಕ ಆದ 3.5 ಮಿಲಿಯನ್‌ಗೂ ಹೆಚ್ಚು.

ಇಷ್ಟೆಲ್ಲಾ ಪ್ರಸಿದ್ಧಿ ಪಡೆದಿರೋ ಒಸಿತಾ ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ತನ್ನನ್ನು ತಾನು ತೊಡಗಿಸಿಕೊಳ್ಳದೆ, ಅಲ್ಲಿನ ಸಮಾಜಮುಖಿ ಕೆಲಸದಲ್ಲೂ ಸಹ ತೊಡಗಿಸಿಕೊಂಡಿದ್ದಾರೆ. ಇನ್‌ಸ್ಪೈಡ್‌ ಮೂಮೆಂಟ್‌ ಆಫ್‌ ಆಫ್ರಿಕಾ ಅನ್ನೋ ತನ್ನದೇ ಆದ ಸಂಸ್ಥೆಯನ್ನು ಸ್ಥಾಪಿಸಿದ್ದು ಅಲ್ಲಿ ತನ್ನಂತೆ ದೇಹದ ಸಮಸ್ಯೆಯಿಂದ ಬಳಲಿರೋ ಅನೇಕರಿಗೆ ಮಾರ್ಗದರ್ಶನ, ಸಹಾಯ, ಚೈತನ್ಯ ನೀಡೋ ಕೆಲಸವನ್ನು ಒಸಿತಾ ಈ ಸಂಸ್ಥೆಯಿಂದ ಮಾಡುತ್ತಿದ್ದಾರೆ. ಒಸಿತಾ ಒಬ್ಬ ಸ್ನೇಹ ಜೀವಿ ಕಷ್ಟದಲ್ಲಿ ಇರೋರಿಗೆ ಸ್ಪಂಧಿಸುವ ವ್ಯಕ್ತಿ, ಸಿನಿಮಾ ಸೆಟ್‌ನಲ್ಲಿ ಎಲ್ಲರನ್ನೂ ರಂಜಿಸುತ್ತಿರುತ್ತಾರೆ ಎಂದು ಆತನ ಜೊತೆ ನಟಿಸಿರೋ ಅನೇಕರು ತಮ್ಮ ಅಭಿಪ್ರಾಯವನ್ನು ಹಲವಾರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಒಸಿತಾ ಜೊತೆ ಇನ್ನೊಬ್ಬ ವ್ಯಕ್ತಿಯು ಕೂಡ ಎಲ್ಲರಿಗೂ ಪರಿಚತನಾಗಿದ್ದು ಆತನ ಹೆಸರು ಚಿನಾಡು ಇವರು ಕೂಡ ಒಸಿತಾ ರೀತಿ ನೈಜೀರಿಯನ್‌ ಸಿನಿಮಾ ರಂಗದಲ್ಲಿ ಹೆಚ್ಚು ಜನಪ್ರಿಯಾ ಹಾಸ್ಯ ಕಲಾವಿದ ಆಗಿದ್ದು ಇದುವರೆಗೂ 100ಕ್ಕೂ ಹೆಚ್ಚು ಸಿನಿಮಾಗಲ್ಲಿ ನಟಿಸಿದ್ದಾರೆ. ಚಿನಾಡು ಕೂಡ ಕೇವಲ ನಟನಾಗಿ ಗುರುತಿಸಿಕೊಳ್ಳದೇ ಒಬ್ಬ ದೊಡ್ಡ ನಿರ್ಮಾಪಕನಾಗಿಯೂ ಸಹ ಗುರುತಿಸಿಕೊಂಡಿದ್ದಾರೆ. ಚಿನಾಡು ಮತ್ತು ಒಸಿತಾ ಜೋಡಿಯಲ್ಲಿ ಅನೇಕ ಸಿನಿಮಾಗಳು ನೈಜೀರಿಯಾದಲ್ಲಿ ಮೋಡಿಕೂಡ ಮಾಡಿದೆ. ಚಿನಾಡು ಮತ್ತು ಒಸಿತಾ ಜೋಡಿಯಗೆ ಅಲ್ಲಿನ ಜನ ಫಿದಾ ಕೂಡ ಆಗಿದ್ದಾರೆ.

47 ವರ್ಷದ ಒಸಿತಾ ವಿವಾಹ ಕೂಡ ಆಗಿದ್ದು ಆತನ ಪತ್ನಿಯ ಹೆಸರು ಪುಬೋ ಆತನಿಗೆ ಒಂದು ಮಗು ಕೂಡ ಇದೆ. ಒಸಿತಾ ತನ್ನ ದೇಹದ ಬಗ್ಗೆ ಒಂದು ದಿನವೂ ಬೇಸರವನ್ನು ಮಾಡಿಕೊಂಡಿಲ್ಲ, ತನ್ನ ದೇಹದ ನ್ಯೂನ್ಯತೆಯನ್ನೇ ಬಂಡವಾಳ ಮಾಡಿಕೊಂಡು ಜಗತ್ತಿಗೆ ಚಿರಪರಿಚಿತರಾಗಿದ್ದಾರೆ. ಅದಕ್ಕೆ ಹೇಳೋದು ಸಾಧನೆಗೆ ಯಾವುದು ಸಹ ಅಡ್ಡಿ ಬರೋದಿಲ್ಲ ಮನಸ್ಸಿರಬೇಕು ಎಂದು.

ಒಸಿತಾ ಅವರ ಈ ಕಿರು ಪರಿಚಯ ವಿಡಿಯೋ ಬಗ್ಗೆ ಏನ್‌ ಹೇಳ್ತೀರಾ, ಅವರ ಸಾಧನೆ ನಿಮಗೂ ಸ್ಫೂರ್ತಿ ಆಗಬಹುದೇ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top