ಸೋಶಿಯಲ್‌ ಮೀಡಿಯಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಜೇಮ್ಸ್‌ ಸಿನಿಮಾ ಸಂದೇಶ ರವಾನೆ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ʻಜೇಮ್ಸ್‌ʼ ಚಿತ್ರ ಶೂಟಿಂಗ್‌ ಈಗಾಗಲೇ ಶುರುವಾಗಿದ್ದು, ಸದ್ಯ ಹೊಸಪೇಟೆಯಲ್ಲಿ ಚಿತ್ರದ ಶೂಟಿಂಗ್ ನಡೀತಾ ಇದ್ದು, ಈ ವೇಳೆ ಚೇಮ್ಸ್‌ ಚಿತ್ರತಂಡ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಂದೇಶವನ್ನು ರವಾನೆ ಮಾಡಿದ್ದಾರೆ.

ಹೊಸಪೇಟೆಯಲ್ಲಿ ಜೇಮ್ಸ್‌ ಚಿತ್ರದ ಶೂಟಿಂಗ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರನ್ನು ನೋಡಲು ಅಭಿಮಾನಿಗಳು ಬರ್ತಾ ಇದ್ದು, ಈ ವೇಳೆ ಜೇಮ್ಸ್‌ ಚಿತ್ರದ ಶೂಟಿಂಗ್‌ನ ಫೋಟೋಗಳು ಮತ್ತು ವಿಡಿಯೋಗಳನ್ನು ಶೂಟ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿರುವುದರಿಂದ ಚಿತ್ರತಂಡ ಸಂದೇಶವೊಂದನ್ನು ನೀಡುವ ಮೂಲಕ ಮನವಿಮಾಡಿಕೊಂಡಿದೆ.


`ಜೇಮ್ಸ್ ಚಿತ್ರದ ಚಿತ್ರೀಕರಣದ ತುಣುಕುಗಳನ್ನು ದಯವಿಟ್ಟು ಯಾರು ಚಿತ್ರೀಕರಿಸಬೇಡಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ!! ಅಂತಹವರ ವಿರುದ್ಧ ಅಗತ್ಯ ಬಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಎಂದು ಸೋಶಿಯಲ್‌ ಮೀಡಿಯಾದಲ್ಲಿ ಮನವಿಮಾಡಿಕೊಂಡಿದೆ.

ಸ್ಯಾಂಡಲ್‌ವುಡ್‌ನಲ್ಲಿ ಇದೀಗ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಇನ್ನೊಂದು ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ಟಾಕ್‌ ಶುರುವಾಗಿದೆ. ಕಬ್ಜ ಚಿತ್ರದ ಮೂಲಕ ಆರ್‌ ಚಂದ್ರ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟಿಸ್ತಾ ಇದ್ದು, ಚಿತ್ರದ ಬಹುತೇಕ ಶೂಟಿಂಗ್‌ ಕಂಪ್ಲೀಟ್‌ ಆಗಿದೆ. ಇದೀಗ ಉಪೇಂದ್ರ ಅವರು ಇನ್ನೊಂದು ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟಿಸ್ತಾಇದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದ್ದು, ಈ ಚಿತ್ರಕ್ಕೆ ʻಲಗಾಮ್‌ʼ ಅನ್ನೋ ಟೈಟಲ್‌ ಇಡಲಾಗಿದೆ. ಇನ್ನು ಈ ಚಿತ್ರವನ್ನು ಕೆ.ಮಾದೇಶ್‌ ನಿರ್ದೇಶನ ಮಾಡ್ತಾ ಇದ್ದು, ಚಿತ್ರಕ್ಕೆ ಮುನಿರಾಜು ಬಂಡವಾಳ ಹೂಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಸಾಧುಕೋಕಿಲ ಮತ್ತು ಮಗ ಸುರಾಗ್‌ ಸಾಧು ಕೋಕಿಲ ಮ್ಯೂಸಿಕ್‌ ನೀಡೋ ಮೂಲಕ ಅಪ್ಪ ಮಗ ಜುಗಲ್‌ಬಂದಿ ಮೋಡಿ ಮಾಡಲಿದೆ. ಈ ಚಿತ್ರದಲ್ಲಿ ಉಪೇಂದ್ರ ನಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಮೈಸೂರು ಸುತ್ತಮುತ್ತ ಚಿತ್ರದ ಶೂಟಿಂಗ್‌ ಮಾಡೋ ಪ್ಲಾನ್‌ನಲ್ಲಿದೆ ಚಿತ್ರತಂಡ.

ಎಂಟರ್‌ಟೈನ್ಮೆಂಟ್‌ ಬ್ಯೂರೋ ಕರ್ನಾಟಕ.ಇನ್‌

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top