ಸೋತು ಪ್ಲೇ ಆಫ್‍ಗೆ ಹೋಗೊಕ್ ಧಮ್ ಬೇಕಲೆ

ಐಪಿಎಲ್ 2020 ಆರ್‍ಸಿಬಿ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್‍ಸಿಬಿ ಉತ್ತಮ ಪ್ರದರ್ಶನ ತೋರದೇ ಪಮದ್ಯವನ್ನು ಸೋತಿದ್ದು, ಆರ್‍ಸಿಬಿ ಅಭಿಮಾನಿಗಳಿಗೆ ಒಂದಿಷ್ಟು ಬೇಸರ ತರಿಸಿದೆ. ಆರ್‍ಸಿಬಿ ಅಭಿಮಾನಿಗಳು ಈ ಬಾರಿ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡುತ್ತೆ ಅನ್ನೋವಾಗಲೇ ಟೂರ್ನಿ ಕೊನೆಯಲ್ಲಿ ಕಳಪೆ ಪ್ರದರ್ಶನ ನೀಡೋ ಮೂಲಕ ಬೇಸರ ತರಿಸಿದ್ದು, ಈ ಬೇಸರದ ನಡುವೆಯೂ ಆರ್‍ಸಿಬಿ ಅಭಿಮಾನಿಗಳಿಗೆ ಒಂದು ನೆಮ್ಮದಿ ತಂದಿದೆ. ಹೌದು ಆರ್‍ಸಿಬಿ ಡೆಲ್ಲಿ ವಿರುದ್ಧ ಪಂದ್ಯವನ್ನು ಸೋತಿದ್ರು, ಡೆಲ್ಲಿ ಜೊತೆಯಲ್ಲಿ ಆರ್‍ಸಿಬಿ ಪ್ಲೇ ಆಫ್ ಹಂತಕ್ಕೆ ತಲುಪಿದೆ. 153ರನ್‍ಗಳ ಗುರಿಯನ್ನು ನೀಡಿದ್ದ ಆರ್‍ಸಿಬಿ ಇದನ್ನು ಬೆನ್ನು ಹತ್ತಿದ ಡೆಲ್ಲಿ ಸುಲಭವಾಗಿ ಗೆಲುವು ಸಾಧಿಸೋ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಗಳಿಸಿ ಪ್ಲೇ ಆಫ್ ಎಂಟ್ರಿಕೊಟ್ಟಿದ್ರೆ, ಇತ್ತ ಪಂದ್ಯದಲ್ಲಿ ಸೋಲು ಕಂಡಿದ್ದರು ರನ್ ರೇಟ್ ಮೂಲಕ ಆರ್‍ಸಿನಿ ಮೂರನೇ ಸ್ಥಾನ ಗಳಿಸಿದ್ದು ಈ ಮೂಲಕ ಪ್ಲೇ ಆಫ್ ಹಂತಕ್ಕೆ ಎಂಟ್ರಿಕೊಟ್ಟಿದೆ.

ಹೌದು ರನ್ ರೇಟ್ ಲೆಕ್ಕಾಚಾರದಲ್ಲಿ ಆರ್‍ಸಿಬಿ ಕೆಕೆಆರ್ ಗಿಂತ ಹೆಚ್ಚಿನ ರನ್‍ರೇಟ್‍ನಲ್ಲಿ ಇದ್ದು ಅಂಕ ಪಟ್ಟಿಯಲ್ಲಿ 14 ಅಂಕಗಳಿಸಿದ್ರು ಸಹ ಪ್ಲೇ ಆಫ್ ತಲುಪಿದೆ. ಇನ್ನು ಮುಂಬೈ ಮತ್ತು ಹೈದರಬಾದ್ ಪಂದ್ಯದಲ್ಲಿ ಹೈದರಬಾದ್ ಗೆದ್ದರೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬರಲಿದ್ರೆ, ಇತ್ತ ಆರ್‍ಸಿಬಿ ನಾಲ್ಕನೇ ಸ್ಥಾನದೊಂದಿಗೆ ಪ್ಲೇ ಆಫ್‍ಗೆ ಎಂಟ್ರಿಕೊಟ್ಟಿದೆ. ಈ ಮೂಲಕ ಕಪ್ ಗೆಲ್ಲುವ ಆರ್‍ಸಿಬಿ ಅಭಿಮಾನಿಗಳ ಕನಸು ಇನ್ನು ಜೀವಂತವಾಗಿದ್ದು, ಮುಂದಿನ ಪಂದ್ಯಗಳಲ್ಲಿ ಆರ್‍ಸಿಬಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕಪ್ ಗೆದ್ದು ಅಭಿಮಾನಿಗಳ ಆಸೆಯನ್ನು ಈಡೆಸುತ್ತಾ ಕಾದು ನೋಡ ಬೇಕು.

ಈಗಾಗಲೇ ರನ್‍ರೇಟ್‍ನಲ್ಲಿ ಆರ್‍ಸಿಬಿ ಮೈನಸ್ 17 ಇದ್ದು ಕೆಕೆಆರ್ ಮೈನಸ್ 21ರಲ್ಲಿ ಇರೋದ್ರಿಂದ ಹೈದರಬಾದ್ ಗೆದ್ದರು ಸೋತರು ಆರ್‍ಸಿಬಿ ಪ್ಲೇ ಆಫ್‍ಗೆ ಎಂಟ್ರಿಕೊಡಲಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್‍ಸಿಬಿ ಕಡಿಮೆ ಅಂತರದಲ್ಲಿ ಸೋಲನ್ನು ಕಂಡಿದ್ದು ಈ ಹಿನ್ನೆಲೆಯಲ್ಲಿ ಆರ್‍ಸಿಬಿ ಪ್ಲೇ ಆಫ್‍ಗೆ ಎಂಟ್ರಿಕೊಟ್ಟಿದೆ. ಇನ್ನು ಆರ್‍ಸಿಬಿ ನಾಲ್ಕು ವರ್ಷಗಳ ನಂತರ ಪ್ಲೇ ಆಫ್‍ಗೆ ಎಂಟ್ರಿಕೊಟ್ಟಿದ್ದು, ತಂಡಕ್ಕೂ ಮತ್ತು ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

ನೀವು ಆರ್‍ಸಿಬಿ ಅಭಿಮಾನಿಯಾಗಿ ಐಪಿಎಲ್‍ನಲ್ಲಿ ಆರ್‍ಸಿಬಿಯ ಪ್ರದರ್ಶನದ ಬಗ್ಗೆ ನೀವ್ ಏನ್ ಕಾಮೆಂಟ್ ಮಾಡ್ತೀರಾ..ನಿಮಗೆ ಆರ್‍ಸಿಬಿ ಆಟ ಬೇಸರ ತರಿಸಿದ್ಯಾ..ಪ್ಲೇ ಆಫ್‍ಗೆ ಈ ರೀತಿ ಎಂಟ್ರಿಕೊಟ್ಟಿರೋದು ನಿಮಗೆ ಸಮಾಧಾನ ತಂದಿದ್ಯಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top