ಸೊಂಟ ನೋವು ಎಂದು ಆಸ್ಪತ್ರೆಗೆ ಹೋದ್ರೆ 3 ಕಿಡ್ನಿ ಪತ್ತೆ..!

ಕೆಲವೊಮ್ಮೆ ಜಗತ್ತಿನಲ್ಲಿ ವೈದ್ಯ ಲೋಕವೇ ಅಚ್ಚರಿ ಪಡುವಂತಹ ವಿಷಯಗಳು ಹೊರ ಬರ್ತಾನೆ ಇರ್ತಾವೆ, ಇಲ್ಲೂ ಅಂತಹದ್ದೇ ಒಂದು ವೈದ್ಯ ಲೋಕವೇ ಅಚ್ಚರಿಯ ವಿಷಯವೊಂದನ್ನು ನಾವು ಇವತ್ತು ಹೇಳ್ತಾ ಇದ್ದೇವೆ, ಹೌದು ಆಸ್ಟ್ರೇಲಿಯಾದ ಒಬ್ಬ ವ್ಯಕ್ತಿ ಸೊಂಟ ನೋವು ಎಂದು ಆಸ್ಪತ್ರೆಗೆ ಹೋದಾಗ ಆತನಿಗೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು, 38 ವರ್ಷದ ರಿಮ್ ಸೊ‌ಂಟ ನೋವಿನಿಂದ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ, ಆತನ ಡಿಸ್ಕ್ ಸ್ವಲ್ಪ ಜಾರಿರುವುದು ಕಂಡು ಬಂದಿತ್ತು, ಆದ್ರೆ ವೈದ್ಯರಿಗೆ ಇದು ತಲೆ ಕಡಿಸಿಕೊಳ್ಳುವ ವಿಷಯವಲ್ಲ, ಆದ್ರೆ ವ್ಯಕ್ತಿಯ ಸ್ಕ್ಯಾನ್ ರಿಪೋರ್ಟ್ ನೋಡಿದಾಗ ಆತನಿಗೆ ಮೂರು ಕಿಡ್ನಿ ಇರುವುದು ಕಂಡುಬಂದಿದೆ,

ಇನ್ನು ಈ ಮೂರು ಕಿಡ್ನಿಯಲ್ಲಿ ಒಂದು ಬಲಭಾಗದಲ್ಲಿ ಇದ್ದು ಉಳಿದ ಎರಡು ಸೊಂಟದ ಭಾಗದಲ್ಲಿ ಇರುವುದು ಕಂಡುಬಂದಿದೆ,ಆದ್ರೆ ಮೂರು ಕಿಡ್ನಿ ಇರುವುದರಿಂದ ಮೂತ್ರಪಿಂಡದಲ್ಲಿ ಯಾವುದೇ ಸಮಸ್ಯೆಗಳು ಸಹ ಕಂಡುಬಂದಿಲ್ಲ, ಜೊತೆಗೆ ದೇಹದ ಉಳಿದ ಯಾವ ಭಾಗವೂ ಸಮಸ್ಯೆಯು ಕಂಡು ಬಂದಿರದ ಕಾರಣ ಸೊಂಟ ನೋವು ಎಂದು ಬಂದ ವ್ಯಕ್ತಿಗೆ ಸದ್ಯ ಪೇಯ್ನ್ ಕಿಲ್ಲರ್ ಔಷಧಿ ಮಾತ್ರ ನೀಡಿ ಕಳುಹಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top