ಸೈಲೆಂಟಾಗಿ ಜನಮನ ಗೆದ್ದ ಬಡ್ಡಿ ಮಗನ್ ಲೈಫು.! ಮಿಸ್ ಮಾಡ್ಬೇಡಿ ಯಾಕೆ ಗೊತ್ತಾ.?

ಈ ವಾರ ಸ್ಯಾಂಡಲ್ವುಡ್ ಅಂಗಳದಲ್ಲಿ ಎರಡೂ ಚಿತ್ರಗಳು ರಿಲೀಸ್ ಆದ್ವು. ಅದ್ರಲ್ಲಿ ಅವನೇ ಶ್ರೀಮನ್ನಾರಾಯಣ ಅನ್ನೋದು ಒಂದು ದೊಡ್ಡ ಸಿನಿಮಾ ಆದ್ರೆ, ಮತ್ತೊಂದು ಬಹುಕತೇಕ ಹೊಸಬರೇ ಕೂಡಿ ಮಾಡಿರೋ ಬಡ್ಡಿ ಮಗನ್ ಲೈಫು. ನಾರಾಯಣನ ಅಬ್ಬರದ ನಡುವೆಯೂ ಹೊಸಬರ ಹೊಸ ಚಿತ್ರಕ್ಕೆ ಕನ್ನಡ ಸಿನಿಪ್ರಿಯರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯ ಏನ್ ಚಂದನಾ ತಕ್ಕೋ ಹಾಡಿನಿಂದ್ಲೇ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ಬಡ್ಡಿಮಗನ್ ಲೈಫು, ಲೋಕಲ್ ಕಥಾಹಂದರದಿಂದ, ಲೋಕಲ್ ಫ್ಲೇವರ್ ನಿಂದ ನಾರ್ಮಲ್ ಲವ್ ಸ್ಟೋರಿಯಾದ್ರೂ ಭಿನ್ನ ನಿರೂಪಣೆಯಿಂದ ಆಕರ್ಷಿಸ್ತಿದೆ. ಹೊಸಬರ ಸಿನಿಮಾ ಅಂತ ಥಿಯೇಟರ್ಗೆ ಬರೋರಿಗೆ ಯಾವುದೇ ನಿರಾಸೆ ಮಾಡದೆ ರಂಜಿಸ್ತಿದೆ. ಒಂದೊಳ್ಳೆಯ ಪ್ರಯತ್ನ, ಪ್ರತಿಭಾವಂತರ ಕೆಲಸ ಅನ್ನೋದನ್ನ ಸಿನಿಮಾ ಸಾರಿ ಹೇಳ್ತಿದೆ. ಆದ್ರೆ ದೊಡ್ಡ ಸಿನಿಮಾದ ಜೊತೆಗೆ ಬಂದಿರೋ ಕಾರಣಕ್ಕೆ ಏನೋ ಜನ ಬಡ್ಡಿಮಗನತ್ತ ನಿಧಾನವಾಗಿ ನುಸುಳುತ್ತಿದ್ದಾರೆ.

ಬಡ್ಡಿ ಮಗನ್ ಲೈಫು ಚಿತ್ರವನ್ನ ಗ್ರೀನ್ ಚಿಲ್ಲಿ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿಯಲ್ಲಿ ಪವನ್ ಕುಮಾರ್ ಅನ್ನೋರು ನಿರ್ಮಿಸಿದ್ದು, ಪ್ರಸಾದ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಚಿನ್ ಹಾಗೂ ಐಶ್ವರ್ಯ ರಾವ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


ಇದೊಂದು ನಾರ್ಮಲ್‌ ಹುಡುಗ, ಹುಡುಗಿಯರ ಲವ್‌ಸ್ಟೋರಿ. ಪಕ್ಕದ್ಮನೆ ಹುಡ್ಗ ಹುಡ್ಗಿಯ ಪ್ರೇಮಕಥೆ.. ಊರ ಗೌಡನ ಮಗಳನ್ನು ಬ್ರಾಹ್ಮಣರ ಹುಡುಗ ಲವ್‌ ಮಾಡಿ ಓಡಿಸಿಕೊಂಡು ಹೋಗುವುದೇ ಈ ಚಿತ್ರದ ಓನ್ ಲೈನ್ ಸ್ಟೋರಿ. ಐಪಿಲ್‌ ಬೆಟ್ಟಿಂಗ್‌ ಬಡ್ಡಿ ಸೀನಪ್ಪನ ಬಳಿ ಸಾಲ ಮಾಡಿಕೊಂಡ ಭಾವ ಮೈದುನನ್ನು ಉಳಿಸಲು ಜಾಮೀನು ಕೊಟ್ಟು ಸಂಕಟಕ್ಕೆ ಸಿಲುಕುವ ಭಾವನ ಪಾಡು ಕೂಡ ನೋಡುಗರಿಗೆ ಒಂದು ರೀತಿ ಮಜ ಕೊಡಲಿದೆ. ಸಿನಿಮಾ ನೋಡಿದವರಿಗೆ ನಮ್ಮ ಸುತ್ತ ನಡೆಯುವ ಕಥೆಯೇನೋ ಎಂದು ಭಾಸವಾಗುತ್ತದೆ..

ಬಲರಾಜುವಾಡಿ ಈ ಚಿತ್ರದಲ್ಲಿ ಬಡ್ಡಿ ಬಸಪ್ಪನಾಗಿ ಅದ್ಭುತವಾಗಿ ಪರ್ಫಾರ್ಮ್ ಮಾಡಿದ್ದಾರೆ. ಚಿತ್ರದ ಹೈಲೈಟ್ ಗಳಲ್ಲಿ ಬಲರಾಜವಾಡಿ ಮುಖ್ಯವಾಗಿ ಕಾಣಸಿಗ್ತಾರೆ. ಅಶಿಕ್ ಅರುಣ್ ಸಂಗೀತ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಸೊಗಡು ತುಂಬಿದ ಹಿನ್ನೆಲೆ ಸಂಗೀತ ಮಜಾ ಕೊಡ್ತಿದೆ. ಲವಿತ್‌ ಛಾಯಾಗ್ರಹಣ ಕಣ್ಣಿಗೆ ಇಂಪು ನೀಡ್ತಿದೆ. ಚಿತ್ರದಲ್ಲಿ ರಜನಿಕಾಂತ್‌, ವನಿತಾ, ಪದ್ಮನಾಭ, ಪೂರ್ಣಚಂದ್ರ ತೇಜಸ್ವಿ, ಮೈಮ್‌ ರಮೇಶ್‌ ತಮ್ಮ ಪಾತ್ರಗಳಿಗೆ ನ್ಯಾಯ ಓದಗಿಸಿದ್ದಾರೆ. ಬಡ್ಡಿ ಮಗನ್ ಲೈಫು ನಮ್ಮ ನಡುವೆಯೇ ನಡೆಯುತ್ತಿರುವಂತಹ ಕಥೆ. ಹೊಸ ಪ್ರತಿಭೆಗಲ್ಲೆ ತುಂಬು ಸಿನಿಮೋತ್ಸಾಹದಲ್ಲಿ, ಅಚ್ಚುಕಟ್ಟಾಗಿ ಕಟ್ಟಿದ್ದಾರೆ.

ಸಿನಿಮಾ ಎಲ್ಲಾ ಆಂಗಲ್ ನಿಂದ್ಲೂ ರಂಜಿಸ್ತಿದೆ. ಸೋ ಈ ಪ್ರಯತ್ನಕ್ಕೆ ಸಿನಿಪ್ರಿಯರ ಪ್ರೀತಿ ಸಿಕ್ಕರೆ, ಖಂಡಿತ ಉದ್ಯಮಕ್ಕೆ ಇದೊಂದು ಒಳ್ಳೆಯ ಚಿತ್ರವಾಗೋದ್ರ ಜೊತೆಗೆ ಈ ತಂಡ ಉದ್ಯಮದ ಭವಿಷ್ಯ ವಾಗಿ ಬೆಳಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top