ಸೈನ್ಯದಿಂದ ನಿವೃತ್ತಿಯಾಗಿ ಬಂದ ಯೋಧ ಊರಿನ ಹಿತ ದೃಷ್ಟಿಯಿಂದ ಶೆಡ್‌ನಲ್ಲಿ ಕ್ವಾರಂಟೈನ್‌

ಇಂಡಿಯನ್‌ ಆರ್ಮಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದಿರೋ ಸೈನಿಕರೊಬ್ಬರು ಗ್ರಾಮದ ಮತ್ತು ಕುಟುಂಬದ ಹಿತದೃಷ್ಟಿಯಿಂದ ಸ್ವತಃ ಊರಿನ ಹೊರವಲಯದಲ್ಲಿ ತಗಡಿನ ಶೆಡ್‌ನಲ್ಲಿ ಹೋಂ ಕ್ವಾರಂಟೈನ್‌ ಆಗಿದ್ದಾರೆ.ಹಾವೇರಿ ತಾಲೂಕಿನ ಕೋಡಬಾಳ ಗ್ರಾಮದ ಲಿಂಗರಾಜ ಶಿವಸಿಂಪಿಗೇರ ನಿವೃತ್ತ ಸೈನಿಕ .

ಕೊರೋನಾ ಸೋಂಕು ಮತ್ತು ಕೊರೋನಾ ಲಕ್ಷಣಗಳು ಇಲ್ಲದಿದ್ದರು ಮನೆಯವರ ಹಾಗೂ ಗ್ರಾಮದ ಜನರಿಗೆ ತಮ್ಮಿಂದ ತೊಂದರೆಯಾಗ ಆಗಬಾರದು ಎಂದು ಹೋಂ ಕ್ವಾರಂಟೈನ್‌ ಆಗಿದ್ದಾರೆ. ೧೭ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಊರಿಗೆ ಮರಳಿದ್ದರು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಹದಿನಾಲ್ಕು ದಿನಗಳ ಕಾಲ ಹೋಂ ಕ್ವಾರಂಟೈನ್‌ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top