ಸೈನಿಕನ ಹುಡುಗಿಗೆ ಬಂದ ಸ್ಥಿತಿ ಎಂಥದ್ದು ಗೊತ್ತಾ..?

ಬಣ್ಣದ ಲೋಕವೇ ಹಾಗೇ, ಒಂದು ದಿನ ಟಾಪ್‍ನಲ್ಲಿ ಇರೋರು, ಇನ್ನೊಂದು ದಿನ ಅವಕಾಶಗಳಿಲ್ಲದೇ ಅವಕಾಶಕ್ಕಾಗಿ ಕಾದು ಕುಳಿತುಕೊಳ್ಳುತ್ತಾರೆ. ಇನ್ನು ಕೆಲವ್ರು ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ತಮ್ಮ ಲೈಫ್ ಸೆಟಲ್ ಮಾಡಿಕೊಳ್ಳಲು ನೋಡುತ್ತಾರೆ,ಅದಕ್ಕಾಗಿ ತಮ್ಮ ಜೀವನದ ಅಡಿಪಾಯವನ್ನು ಸಹ ಗಟ್ಟಿ ಮಾಡಿಕೊಳ್ಳುತ್ತಾರೆ. ಆದ್ರೆ ಇನ್ನು ಕೆಲವ್ರು ಇನ್ನೊಬ್ಬರನ್ನು ನಂಬಿ, ಜೀವನದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಬಿಡ್ತಾರೆ. ಅಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಟ್ಟ ಸ್ಟಾರ್ ನಟಿ ಅಂದ್ರೆ ಅದು ಸಾಕ್ಷಿ ಶಿವಾನಂದ್, ಸೈನಿಕ,ತಂದೆಗೆ ತಕ್ಕ ಮಗ,ಗಡಿಬಿಡಿ ಅಳಿಯಂದ್ರು,ಸೌಂದರ್ಯ,ಕೋದಂಡ ರಾಮ ಅಂತಹ ಹಿಟ್ ಚಿತ್ರಗಳನ್ನು ನೀಡಿದ್ದ ಸಾಕ್ಷಿ ಶಿವಾನಂದ್ ಬೇರೆ ಭಾಷೆಗಳಲ್ಲೂ ನಟಿಸಿ ಬಹುಬೇಡಿಕೆಯಲ್ಲಿದ್ದ ನಟಿಯಾಗಿದ್ರು, ಕ್ರಮೇಣ ಬೇಡಿಕೆ ಕಡಿಮೆಯಾಗುತ್ತಿದ್ದಂತೆ , ದೂರದ ಅಮೇರಿಕಾಗೆ ಹೋಗಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ರು, ಇದೇ ವೇಳೆ ಸಾಗರ್ ಅನ್ನೋ ವ್ಯಕ್ತಿಯ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿ ಸಾಗರ್ ಜೊತೆ ಜೀವನ ನಡೆಸಲು ಶುರುಮಾಡಿದ್ರು, ಅಷ್ಟೇ ಅಲ್ಲದೇ ಸಾಗರ್ ನಡೆಸುತ್ತಿದ್ದ ಬ್ಯೂಸಿನೆಸ್‍ನಲ್ಲಿ ಬಂಡವಾಳ ಕೂಡ ಹೂಡಿದ್ದ ಸಾಕ್ಷಿ ಶಿವಾನಂದ್‍ಗೆ ಸಾಗರ್ ಸಖತ್ ಆಗೆ ಟೋಪಿ ಹಾಕಿದ್ರು,ಇನ್ನು ಸಾಗರ್ ತನ್ನ ಬದಲು ತನ್ನ ಬಳಿ ಇದ್ದ ಹಣವನ್ನು ಇಷ್ಟ ಪಟ್ಟಿದ್ದು ಅನ್ನೋ ವಿಷಯ ತಿಳಿಯುವ ವೇಳಗೆ ಸಾಕ್ಷಿ ಬಳಿ ಹಣವೆಲ್ಲ ಖಾಲಿಯಾಗಿತ್ತು. ಇದರಿಂದ ಬೇಸತ್ತ ಸಾಕ್ಷಿ ಸಾಗರ್ ಸಹವಾಸವೇ ಬೇಡವೆಂದು ಆತನಿಂದ ದೂರವಾದ್ರು. ಆರ್ಥಿಕವಾಗಿ ಹಿನ್ನಡೆ ಕಂಡ ಸಾಕ್ಷಿಶಿವಾನಂದ್ ಸದ್ಯ ಅಮೇರಿಕಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದ ಸಾಕ್ಷಿ ಶಿವಾನಂದ್ ಈಗ ಯಾರ ಹಂಗು ನನಗೆ ಬೇಡವೆಂದು ಅಮೇರಿಕಾದಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top